More

  50 ಪೈಸೆಯ ಷೇರು ಈಗ 522 ರೂಪಾಯಿ: ಮದ್ಯ ತಯಾರಿಕೆ ಕಂಪನಿಯ ಲಾಭ 818% ಏರಿಕೆ, ಸ್ಟಾಕ್​ ಅಪ್ಪರ್​ ಸರ್ಕ್ಯೂಟ್​ ಹಿಟ್​

  ಮುಂಬೈ: ಮದ್ಯ ತಯಾರಿಕೆ ಮತ್ತು ಮಾರಾಟ ಕಂಪನಿ ಪಿಕ್ಕಾಡಿಲಿ ಆಗ್ರೋ ಇಂಡಸ್ಟ್ರೀಸ್‌ ಲಿಮಿಟೆಡ್​ (Piccadily Agro Industries Ltd.) ಕಂಪನಿಯ ಅತ್ಯುತ್ತಮ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಈ ಕಂಪನಿಯ ಷೇರುಗಳ ಬೆಲೆ ರಾಕೆಟ್‌ನಂತೆ ಏರಿದೆ.

  ವಾರದ ವಹಿವಾಟಿನ ಎರಡನೇ ದಿನವಾದ ಮಂಗಳವಾರ, ಈ ಸ್ಟಾಕ್ ಶೇಕಡಾ 5 ರಷ್ಟು ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್‌ ಹಿಟ್ ಆಯಿತು. ಈ ಮೂಲಕ ಷೇರು ಬೆಲೆ 522.90 ರೂ ತಲುಪಿತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯೂ ಆಗಿದೆ. ಮೇ 2023 ರಲ್ಲಿ ಷೇರಿನ ಬೆಲೆ 45.20 ರೂ. ಇತ್ತು. ಇದು 52 ವಾರಗಳ ಕನಿಷ್ಠ ಬೆಲೆಯಾಗಿದೆ.

  ಮಾರ್ಚ್ 2024ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಪಿಕ್ಯಾಡಿಲಿ ಆಗ್ರೊ ಇಂಡಸ್ಟ್ರೀಸ್‌ನ ನಿವ್ವಳ ಲಾಭವು 818.22% ರಷ್ಟು ಏರಿಕೆಯಾಗಿ ರೂ. 43.34 ಕೋಟಿಗೆ ತಲುಪಿದೆ. ಮಾರ್ಚ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದ ಹಿಂದೆ ಈ ಲಾಭದ ಪ್ರಮಾಣವು 4.72 ಕೋಟಿ ರೂ. ಇತ್ತು.

  ಮಾರ್ಚ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟವು 266.53 ಕೋಟಿ ರೂ.ಗಳಿಗೆ ತಲುಪಿತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಮಾರಾಟವು 194.78 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದರೆ ಇದು 36.84% ರಷ್ಟು ಏರಿಕೆಯಾಗಿದೆ.

  2023-24ನೇ ಹಣಕಾಸು ವರ್ಷದ ಫಲಿತಾಂಶದ ಬಗ್ಗೆ ಹೇಳುವುದಾದರೆ, ಕಂಪನಿಯ ನಿವ್ವಳ ಲಾಭವು 391.54% ರಷ್ಟು ಏರಿಕೆಯಾಗಿ 109.76 ಕೋಟಿ ರೂ.ಹಾಗೂ ಮಾರಾಟವು 29.16% ರಷ್ಟು ಏರಿಕೆಯಾಗಿ 774.55 ಕೋಟಿ ರೂ. ಮುಟ್ಟಿದೆ.

  ಈ ಕಂಪನಿಯ ಸ್ಟಾಕ್ ಒಂದು ವರ್ಷದ ಅವಧಿಯಲ್ಲಿ 1000% ವರೆಗೆ ಏರಿಕೆಯಾಗಿದೆ. ಇದೇ ಸಮಯದಲ್ಲಿ, ಈ ಸ್ಟಾಕ್ ಮೂರು ವರ್ಷಗಳ ಅವಧಿಯಲ್ಲಿ 4500% ರಷ್ಟು ಹೆಚ್ಚಾಗಿದೆ. ಈ ಸ್ಟಾಕ್ 10 ವರ್ಷಗಳ ಅವಧಿಯಲ್ಲಿ 5500% ವರೆಗೆ ಏರಿಕೆ ಕಂಡಿದೆ. 2004ರಲ್ಲಿ ಈ ಷೇರಿನ ಬೆಲೆ 1 ರಿಂದ 50 ಪೈಸೆ ಮಟ್ಟದಲ್ಲಿತ್ತು. ಹೀಗಾಗಿ, 20 ವರ್ಷಗಳ ಅವಧಿಯಲ್ಲಿ ಆದಾಯವು ಸುಮಾರು 2,00,000% ಆಗಿದೆ. ಆಗ ಈ ಷೇರಿನಲ್ಲಿ 1 ಲಕ್ಷ ರೂಪಾಯಿ ಮಾಡಿ ಈಗಲೂ ಮುಂದುವರಿಸಿದ್ದರೆ ಆ ಷೇರುಗಳ ಮೊತ್ತ 20 ಕೋಟಿ ರೂ. ಆಗುತ್ತಿತ್ತು.

  ಪಿಕ್ಯಾಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ ಸಕ್ಕರೆ, ಗುರ್ಗು, ಬಗಾಸ್ ಮತ್ತು ಎಥೆನಾಲ್ ಅನ್ನು ತಯಾರಿಸಿ, ಮಾರಾಟ ಮಾಡುತ್ತದೆ. ಕಂಪನಿಯು ಸಕ್ಕರೆ ಮತ್ತು ಡಿಸ್ಟಿಲರಿ ವಿಭಾಗಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಮಾಲ್ಟಾ, ಮಾರ್ಷಲ್ಸ್, ವಿ ಸ್ಲರ್, ಕಾಮೆಟ್, ಇಂದ್ರಿ ಟ್ರಿನಿ, ಕ್ಯಾಮಿಕಾರ ರಮ್, ರಾಯಲ್ ಹೈಲ್ಯಾಂಡ್ ಮತ್ತು ಗೋಲ್ಡನ್ ವಿಂಗ್ಸ್ ಬ್ರಾಂಡ್ ಹೆಸರುಗಳ ಅಡಿಯಲ್ಲಿ ಸ್ಪಿರಿಟ್‌ಗಳನ್ನು ಉತ್ಪಾದಿಸುತ್ತದೆ. ಕಂಪನಿಯು 1994 ರಲ್ಲಿ ಸ್ಥಾಪನೆಯಾಗಿದ್ದು, ಚಂಡೀಗಢದಲ್ಲಿ ನೆಲೆಗೊಂಡಿದೆ.

  ಟಾಟಾ ಗ್ರೂಪ್​ನ ಟೆಲಿಕಾಂ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಇನ್ನಷ್ಟು ಏರಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

  ವೊಡಾಫೋನ್ ಐಡಿಯಾದ ಷೇರು ಬೆಲೆಯಲ್ಲಿ ಬಿರುಗಾಳಿ: ವರ್ಷದ ಸ್ಟಾಕ್ ಇದಾಗಲಿದೆ ಎಂದು ತಜ್ಞರು ಹೇಳುತ್ತಿರುವುದೇಕೆ?

  ಸಾಲ ತೀರಿಸಲು ಗಮನ ನೀಡುತ್ತಿದೆ ಕಂಪನಿ: ಅದಾನಿ ಸಮೂಹದ ಷೇರು ಬೆಲೆ ರೂ. 1500 ದಾಟಬಹುದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts