ಬೆಂಗಳೂರು: ಹಬ್ಬದ ಸಂದರ್ಭ ಅಥವಾ ಇನ್ಯಾವುದೇ ಶುಭದಿನಗಳಲ್ಲಿ ಸಿನಿಪ್ರಿಯರು ತಮ್ಮ ನೆಚ್ಚಿನ ನಟ-ನಟಿಯರಿಗೆ ಶುಭಾಶಯ ಕೋರುವುದು ಸಹಜ. ಅದೇ ರೀತಿ ಅಭಿಮಾನಿಯೊಬ್ಬರು ನಟ ಶಿವರಾಜಕುಮಾರ್ ಅವರಿಗೆ ದೀಪಾವಳಿ ಸಂದರ್ಭದಲ್ಲಿ ಶುಭಾಶಯ ಕೋರಿದ್ದು, ಅದಕ್ಕೆ ಅವರು ಕೊಟ್ಟ ರಿಪ್ಲೈ ವೈರಲ್ ಆಗಿದೆ.
‘ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು’ ಎಂದು ನಟ ಶಿವರಾಜಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಎಲ್ಲರನ್ನುದ್ದೇಶಿಸಿ ಶುಭಾಶಯ ಕೋರಿದ್ದರು. ಅದಕ್ಕೆ ನಂದಿನಿ ಜೆ.ಕೆ. ಎಂಬ ಎಕ್ಸ್ ಖಾತೆಯಿಂದ ‘ಹ್ಯಾಪಿ ದಿವಾಳಿ ಬಾಸ್’ ಎಂದು ಕಮೆಂಟ್ ಮಾಡಲಾಗಿತ್ತು.
ತಮ್ಮ ಶುಭಾಶಯದ ಪೋಸ್ಟ್ಗೆ ಬಂದಿರುವ ಇಂಥದ್ದೊಂದು ಪ್ರತಿಶುಭಾಶಯಕ್ಕೆ ನಟ ಶಿವರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದು, ವಿಶೇಷವಾದ ಮನವಿ ಮಾಡಿಕೊಂಡಿದ್ದಾರೆ. ‘ದೀಪಾವಳಿ ಆದ್ರೆ ಹ್ಯಾಪಿ ಆಗಿರುತ್ತೆ, ದಿವಾಳಿ ತುಂಬಾ ಸ್ಯಾಡ್ ಆಗಿರುತ್ತೆ’ ಎಂದು ಪ್ರತಿಕ್ರಿಯಿಸಿರುವ ಶಿವರಾಜಕುಮಾರ್, ‘ದೀಪಾವಳಿ ಅನ್ನಿ’ ಎಂದೇ ಕೋರಿಕೊಂಡಿದ್ದಾರೆ.
ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ಶಿವಣ್ಣ ಕೊಟ್ಟ ಈ ಪ್ರತಿಕ್ರಿಯೆ ವೈರಲ್ ಆಗಿದ್ದು, ಇದು 1.4 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ. ಮಾತ್ರವಲ್ಲ 4700ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 800ಕ್ಕೂ ಅಧಿಕ ಜನರು ರಿಪೋಸ್ಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಹಲವಾರು ಮಂದಿ ಇದಕ್ಕೆ ಮೆಚ್ಚುಗೆ ಸೂಚಿಸಿ ಕಮೆಂಟ್ ಕೂಡ ಮಾಡಿದ್ದಾರೆ.
ದಿವಾಳಿ ಎಂದು ಶುಭಾಶಯ ಕೋರುವ ಬದಲು ದೀಪಾವಳಿ ಎಂದೇ ಶುಭಾಶಯ ತಿಳಿಸಿ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಲವರು ವಿನಂತಿಸಿಕೊಂಡಿದ್ದು, ಇದಕ್ಕೆ ನಟ ಶಿವಣ್ಣ ಕೂಡ ದನಿಗೂಡಿಸಿದ್ದಾರೆ. ಅವರನ್ನು ಅನುಸರಿಸಿ ಹಲವಾರು ಅಭಿಮಾನಿಗಳೂ ‘ದೀಪಾವಳಿಯ ಶುಭಾಶಯಗಳು’ ಎಂದೇ ಶುಭ ಹಾರೈಸಿದ್ದಾರೆ.
Deepavali aadre happy aagirathe! Diwali Thumba sad aagirathe.
— DrShivaRajkumar (@NimmaShivanna) November 12, 2023
Deepavali anni 🙂 #HappyDeepavali https://t.co/1U5z4Bq0Uh
13 ಭಾಷೆಗಳಲ್ಲಿ ದೀಪಾವಳಿ ಶುಭಾಶಯ ಕೋರಿ ‘ಸಂಪ್ರದಾಯಗಳನ್ನು ಜೀವಂತವಾಗಿಡಿ’ ಎಂದ ಗೂಗಲ್