More

    ಇಲ್ಲಿ ‘ಯಮದೂತ’ನಿಗೇ ಪೂಜೆ ಮಾಡಿ ದೀಪಾವಳಿ ಹಬ್ಬ ಆಚರಣೆ!

    ನವದೆಹಲಿ: ದೇಶಾದ್ಯಂತ ದೀಪಾವಳಿ ಸಂಭ್ರಮವಿದ್ದು, ಇನ್ನೆರಡು ದಿನಗಳ ಕಾಲ ಇದು ಮುಂದುವರಿಯಲಿದೆ. ದೇಶದ ವಿವಿಧೆಡೆಯ ಸಂಪ್ರದಾಯಕ್ಕೆ ತಕ್ಕಂತೆ ದೀಪಾವಳಿಯ ಎಲ್ಲ ದಿನವೂ ಒಂದಲ್ಲ ಒಂದು ರೀತಿಯ ಪೂಜೆ ನಡೆಯುತ್ತಿದ್ದು, ಇಲ್ಲೊಂದು ಕಡೆ ಯಮದೂತನಿಗೇ ಪೂಜೆ ಮಾಡಿ ದೀಪಾವಳಿ ಆಚರಿಸಲಾಗಿದೆ.

    ಪಶ್ಚಿಮಬಂಗಾಳದಲ್ಲಿ ಇಂಥದ್ದೊಂದು ಸಂಪ್ರದಾಯವಿದ್ದು, ಇಲ್ಲಿ ಪ್ರತಿ ದೀಪಾವಳಿ ಸಂದರ್ಭದಲ್ಲಿ ಯಮದೂತನಿಗೆ ಪೂಜೆ ಮಾಡಲಾಗುತ್ತದೆ. ಅರ್ಥಾತ್​, ಇಲ್ಲಿ ಶ್ವಾನಗಳಿಗೆ ಪೂಜೆ ಮಾಡುವ ಮೂಲಕ ದೀಪಾವಳಿ ಆಚರಿಸಲಾಗುತ್ತದೆ. ಸ್ಥಳೀಯವಾಗಿ ಕುಕುರ್ ತಿಹಾರ್ ಇಲ್ಲವೇ ಕುಕುರ್ ಪೂಜಾ ಎಂದು ಕರೆಯಲಾಗುವ ಈ ಆಚರಣೆಯಲ್ಲಿ ಸಾಕುನಾಯಿ ಮಾತ್ರವಲ್ಲದೆ ಬೀದಿನಾಯಿಗಳಿಗೂ ಪೂಜೆ ಮಾಡಲಾಗುತ್ತದೆ.

    ಇದನ್ನೂ ಓದಿ: ಮೋದಿಯನ್ನು ಉಲ್ಲೇಖಿಸಿ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರಿದ ವಿಜಯೇಂದ್ರ!

    ಮನುಷ್ಯ ಮತ್ತು ನಾಯಿ ನಡುವಿನ ಸಂಬಂಧದ ಪ್ರತೀಕವಾಗಿ ಇಂಥದ್ದೊಂದು ಆಚರಣೆ ಇಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾಯಿಯನ್ನು ಸಾವಿನ ಅಧಿಪತಿಯಾದ ಯಮನ ದೂತ ಎಂದು ಪರಿಗಣಿಸಿ ಇಲ್ಲಿ ಪೂಜೆ ಮಾಡಲಾಗುತ್ತದೆ. ಇಲ್ಲಿನ ಜನರು ನಾಯಿಯನ್ನು ಅಲಂಕರಿಸಿ ಪೂಜಿಸಿ ವಿಶೇಷ ಆಹಾರ ನೀಡಿ ಸತ್ಕರಿಸುತ್ತಾರೆ.

    ಹಿನ್ನೆಲೆ: ಮಹಾಭಾರತದಲ್ಲಿ ಪಂಚಪಾಂಡವರು ಸ್ವರ್ಗಕ್ಕೆ ಹೋಗುವಾಗ ಅವರೊಂದಿಗೆ ನಾಯಿಯೊಂದು ಇರುತ್ತದೆ. ಧರ್ಮರಾಜ ನಾಯಿ ಇಲ್ಲದೆ ಸ್ವರ್ಗ ಪ್ರವೇಶಿಸಲು ನಿರಾಕರಿಸುತ್ತಾನೆ ಮತ್ತು ಈ ಸಂದರ್ಭದಲ್ಲಿ ಧರ್ಮರಾಜನೇ ಯಮ ಎನ್ನುವುದು ಬಹಿರಂಗವಾಗುತ್ತದೆ.

    ದೀಪಾವಳಿಗೇ ರಾಜ್ಯದಲ್ಲಿ ವಿದ್ಯುತ್​ ಕೊರತೆ?; ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್​ ಉತ್ಪಾದನೆ ಕುಸಿತ

    ಉದ್ಯೋಗ ಬದಲಿಸುವ ಮುನ್ನ ಇರಲಿ ಎಚ್ಚರ: ಕೆಲಸಕ್ಕೆ ಸೇರುವ ಮುನ್ನವೇ 24 ಲಕ್ಷ ರೂ. ಕಳ್ಕೊಂಡ ಇಂಜಿನಿಯರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts