More

    ಮೋದಿಯನ್ನು ಉಲ್ಲೇಖಿಸಿ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರಿದ ವಿಜಯೇಂದ್ರ!

    ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ದೀಪಾವಳಿ ಹಬ್ಬದ ಸಡಗರದ ಮಧ್ಯೆಯೂ ಬಿರುಸಿನ ಚಟುವಟಿಕೆಯಲ್ಲಿದ್ದಾರೆ.

    ಈ ಮಧ್ಯೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ದೀಪಾವಳಿ ಶುಭಾಶಯವನ್ನು ಕೋರಿ ಗಮನ ಸೆಳೆದಿದ್ದಾರೆ. ಅರ್ಥಾತ್, ಪ್ರತಿ ದೀಪಾವಳಿ ಸಂದರ್ಭದಲ್ಲಿ ದೇಶದ ಸೈನಿಕರ ಜತೆ ಪ್ರಧಾನಿ ಸಮಯ ಕಳೆಯುವುದನ್ನು ಪ್ರಸ್ತಾಪಿಸಿ ವಿಜಯೇಂದ್ರ ಸೈನಿಕರಿಗೆ ಶುಭಾಶಯ ಕೋರಿದ್ದಾರೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014ನೇ ಇಸವಿಯಿಂದಲೂ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. ದುಷ್ಟಶಕ್ತಿಗಳಿಂದ ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ನಮ್ಮ ರಕ್ಷಣಾ ಪಡೆಗಳ ಕೊಡುಗೆ ಅಪಾರವಾಗಿ ಗೌರವಿಸಲ್ಪಟ್ಟಿದೆ ಎಂದಿರುವ ವಿಜಯೇಂದ್ರ ತಾವೂ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಅಲ್ಲದೆ ಯಾವ್ಯಾವ ವರ್ಷದಲ್ಲಿ ಮೋದಿ ಎಲ್ಲೆಲ್ಲಿ ಸೈನಿಕರನ್ನು ಭೇಟಿಯಾಗಿ ದೀಪಾವಳಿ ಶುಭಾಶಯ ಕೋರಿದ್ದರು ಎಂಬ ಪಟ್ಟಿಯನ್ನೂ ವಿಜಯೇಂದ್ರ ಹಂಚಿಕೊಂಡಿದ್ದಾರೆ. ಈ ಸಲ ಮೋದಿ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ. 2014ರಲ್ಲಿ ಸಿಯಾಚೆನ್, 2015- ಅಮೃತಸರ, 2016- ಲಹೌಲ್ ಸ್ಪಿಟಿ, 2017- ಗುರೆಜ್, 2018- ಚಮೋಲಿ, 2019- ರಜೌರಿ, 2020- ಜೈಸಲ್ಮೇರ್, 2021- ನೌಷೆರಾ, 2022ರಲ್ಲಿ ಕಾರ್ಗಿಲ್​ನಲ್ಲಿ ಸೈನಿಕರ ಜತೆ ಮೋದಿ ದೀಪಾವಳಿ ಆಚರಿಸಿದ್ದ ಮಾಹಿತಿಯನ್ನು ವಿಜಯೇಂದ್ರ ಹಂಚಿಕೊಂಡಿದ್ದಾರೆ.

    ದೀಪಾವಳಿಗೇ ರಾಜ್ಯದಲ್ಲಿ ವಿದ್ಯುತ್​ ಕೊರತೆ?; ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್​ ಉತ್ಪಾದನೆ ಕುಸಿತ

    ಉದ್ಯೋಗ ಬದಲಿಸುವ ಮುನ್ನ ಇರಲಿ ಎಚ್ಚರ: ಕೆಲಸಕ್ಕೆ ಸೇರುವ ಮುನ್ನವೇ 24 ಲಕ್ಷ ರೂ. ಕಳ್ಕೊಂಡ ಇಂಜಿನಿಯರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts