More

    ಉದ್ಯೋಗ ಬದಲಿಸುವ ಮುನ್ನ ಇರಲಿ ಎಚ್ಚರ: ಕೆಲಸಕ್ಕೆ ಸೇರುವ ಮುನ್ನವೇ 24 ಲಕ್ಷ ರೂ. ಕಳ್ಕೊಂಡ ಇಂಜಿನಿಯರ್!

    ನವದೆಹಲಿ: ಉತ್ತಮ ಅವಕಾಶಕ್ಕಾಗಿ ಇನ್ನೊಂದು ಉದ್ಯೋಗಕ್ಕೆ ಹಂಬಲಿಸಿದ ಇಂಜಿನಿಯರ್, ಹೊಸ ಕಂಪನಿಗೆ ಸೇರುವ ಮುನ್ನವೇ 24 ಲಕ್ಷ ರೂ. ಕಳೆದುಕೊಂಡಿದ್ದಾನೆ. ಕೆಲಸಕ್ಕೆ ಸೇರುವ ಸಲುವಾಗಿ ಫುಲ್ ಬಾಡಿ ಮೆಡಿಕಲ್ ಚೆಕಪ್ ಇತ್ಯಾದಿಗೆಂದು ಆನ್​​ಲೈನ್​ನಲ್ಲಿ ಹಣ ನೀಡಿದ್ದ ಈತನಿಗೆ 40 ಟ್ರಾನ್ಸ್ಯಾಕ್ಷನ್​ ಮೂಲಕ ಒಟ್ಟು 24 ಲಕ್ಷ ರೂ. ಕಳೆದುಕೊಂಡ ನಂತರವಷ್ಟೇ ತಾನು ಮೋಸ ಹೋಗಿದ್ದು ಗೊತ್ತಾಗಿದೆ.

    ಹೀಗೆ ದೇಶಾದ್ಯಂತ ಉದ್ಯೋಗದ ಹೆಸರಲ್ಲಿ ನಡೆಯುತ್ತಿರುವ ವಂಚನಾ ಜಾಲಕ್ಕೆ 50 ವರ್ಷ ಪ್ರಾಯದ ಇಂಜಿನಿಯರ್ ಸಿಲುಕಿದ್ದು, ಬರೋಬ್ಬರಿ 24 ಲಕ್ಷ ರೂ. ಕಳೆದುಕೊಳ್ಳುವಂತಾಗಿದೆ. ಪುಣೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಹೀಗಾಗಿ ಉದ್ಯೋಗ ಬದಲಿಸುವವರು ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಹೇಳಲಾಗುತ್ತಿದೆ.

    ಜಾಗತಿಕವಾಗಿ ಕಾರು ತಯಾರಿಸುತ್ತಿರುವ ಕಂಪನಿಯೊಂದರ ಭಾರತದ ಘಟಕದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ವಂಚಕರು, ಉದ್ಯೋಗಕ್ಕೆ ಸೇರುವ ಪ್ರಕ್ರಿಯೆ ಸಲುವಾಗಿ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ ಎಂದು ಹೇಳಿ ವಿವಿಧ ಪರೀಕ್ಷೆಗೆಂದು ಆನ್​ಲೈನ್​ನಲ್ಲಿ ಹಣ ಹಾಕಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ಸಂತ್ರಸ್ತ ವ್ಯಕ್ತಿ ಪುಣೆಯಲ್ಲೇ ಇಪ್ಪತ್ತು ವರ್ಷಗಳಿಂದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಉದ್ಯೋಗ ಬದಲಿಸುವ ನಿಟ್ಟಿನಲ್ಲಿ ಹಲವು ಕಂಪನಿಗಳಿಗೆ ಅರ್ಜಿ ಗುಜರಾಯಿಸಿದ್ದು, ತಮ್ಮ ಪ್ರೊಫೈಲ್​ ಆನ್​ಲೈನ್​ನಲ್ಲಿ ಎಲ್ಲೆಡೆ ಲಭ್ಯವಾಗುವಂತೆ ಮಾಡಿದ್ದರು. ಇದನ್ನು ದುರ್ಬಳಕೆ ಮಾಡಿಕೊಂಡ ವಂಚಕರು ತಾವೇ ಕಂಪನಿಯ ನೇಮಕಾತಿ ವಿಭಾಗದವರು ಎಂಬಂತೆ ಬಿಂಬಿಸಿಕೊಂಡು ಈ ಮೋಸ ಮಾಡಿದ್ದಾರೆ.

    ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಒಬಿಸಿಯವರಿಗೇ ಸಿಎಂ ಪಟ್ಟ: ಪ್ರಧಾನಿ ಮೋದಿ ಭರವಸೆ

    ಈ ವರ್ಷದ ಮಾರ್ಚ್​ನಿಂದ ವಂಚಕರು ಮೋಸ ಮಾಡಲು ಆರಂಭಿಸಿದ್ದು, ಮೊದಲಿಗೆ ಕಂಪನಿಯ ಯುನಿಫಾರ್ಮ್​ಗೆಂದು ಹೇಳಿ 28 ಸಾವಿರ ರೂ. ಪಡೆದುಕೊಂಡಿದ್ದರು. ನಂತರ 80 ಸಾವಿರ ರೂ. ಫುಲ್ ಬಾಡಿ ಚೆಕಪ್​​ಗೆ ಎಂದು ಹಾಕಿಸಿಕೊಂಡ ವಂಚಕರು, ನಂತರ ವೇತನ ಮುಂಗಡ ಇತ್ಯಾದಿ ಎಂದು ಹೇಳಿ 2.4 ಲಕ್ಷ ರೂ. ವರೆಗೆ ವಂಚಿಸಿದ್ದಾರೆ. ನಂತರ ಮತ್ತೆ ಮತ್ತೆ ಬೇರೆ ಬೇರೆ ಸಬೂಬು ಹೇಳಿ 40 ಟ್ರಾನ್ಸ್ಯಾಕ್ಷನ್​ನಲ್ಲಿ ಒಟ್ಟು 24 ಲಕ್ಷ ರೂ. ಪಡೆದಿದ್ದರು. ಅಷ್ಟಾದ ಮೇಲೇ ತಾನು ಮೋಸ ಹೋಗಿದ್ದೇನೆಂದು ಗೊತ್ತಾದ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದಾರೆ.

    ಚುನಾವಣಾ ಕ್ಯಾಂಪೇನ್ ವಾಹನದ ಮೇಲಿಂದ ಮುಗ್ಗರಿಸಿಬಿದ್ರು ಸಚಿವ, ಸಂಸದ, ಶಾಸಕ!

    ಲಷ್ಕರ್ ಇ ತೈಬಾದ ಮಾಜಿ ಮುಖ್ಯಸ್ಥ ಅಕ್ರಂ ಖಾನ್​ ಅಪರಿಚಿತರ ಗುಂಡಿಗೆ ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts