ಚುನಾವಣಾ ಕ್ಯಾಂಪೇನ್ ವಾಹನದ ಮೇಲಿಂದ ಮುಗ್ಗರಿಸಿಬಿದ್ರು ಸಚಿವ, ಸಂಸದ, ಶಾಸಕ!

Election f
Published on

ತೆಲಂಗಾಣ: ಚುನಾವಣೆ ಸಂದರ್ಭದಲ್ಲಿ ಏನೋ ಮಾಡಲು ಹೋಗಿ ಏನೋ ಮಾಡಿದೆ ಎಂಬಂಥ ಪ್ರಕರಣಗಳು ಆಗುತ್ತಿರುತ್ತವೆ. ಅದರಲ್ಲೂ ಸಣ್ಣ ಎಡವಟ್ಟು ಅನಾಹುತಕ್ಕೆ ಎಡೆಮಾಡಿಕೊಡುತ್ತದೆ. ಇಂಥದ್ದೇ ಒಂದು ಪ್ರಕರಣ ಇಂದು ತೆಲಂಗಾಣದಲ್ಲಿ ನಡೆದಿದೆ.

ಅದರಲ್ಲೂ ಇಲ್ಲೊಂದು ಕಡೆ ಸಚಿವ, ಸಂಸದ ಹಾಗೂ ಶಾಸಕ ಸೇರಿದಂತೆ ಎಲ್ಲರೂ ಕ್ಯಾಂಪೇನ್ ವಾಹನದ ಮೇಲಿನಿಂದ ಕೆಳಕ್ಕೆ ಮುಗ್ಗರಿಸಿಬಿದ್ದಿದ್ದು, ಆ ಕುರಿತ ವಿಡಿಯೋ ವೈರಲ್ ಕೂಡ ಆಗಿದೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ.

ತೆಲಂಗಾಣದ ಅರ್ಮೋರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಶಾಸಕ ಜೀವನ್ ರೆಡ್ಡಿ ಅವರು ನಾಮಪತ್ರ ಸಲ್ಲಿಕೆ ಮಾಡಲು ಕ್ಯಾಂಪೇನ್ ವಾಹನದಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ. ತೆಲಂಗಾಣ ಸಚಿವ ಕೆ.ಟಿ.ರಾಮರಾವ್, ರಾಜ್ಯಸಭಾ ಸದಸ್ಯ ಸುರೇಶ್ ರೆಡ್ಡಿ, ಶಾಸಕ-ಅಭ್ಯರ್ಥಿ ಜೀವನ್ ರೆಡ್ಡಿ ಮುಂತಾದವರು ತೆರೆದ ವಾಹನದಲ್ಲಿ ಹೋಗುತ್ತಿರುವಾಗ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಈ ಅನಾಹುತವಾಗಿದೆ.

ಬ್ರೇಕ್ ಹಾಕಿದ್ದರಿಂದ ವಾಹನ ಒಮ್ಮೆ ಮುಂದಕ್ಕೆ ಮುಗ್ಗರಿಸಿದ್ದರಿಂದ ಮೇಲಿದ್ದ ಇವರೆಲ್ಲ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ರಸ್ತೆ ಮೇಲೆ ಬಿದ್ದ ಇವರಿಗೆಲ್ಲ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net