ಬೆಂಗಳೂರು: ಅಂತರ್ಜಾಲ ಜಗತ್ತಿನ ಮುಂಚೂಣಿ ಕಂಪನಿ ಆಗಿರುವ ಗೂಗಲ್ ಇತ್ತೀಚೆಗೆ ಶುಭಾಶಯ ಕೋರುವುದರಲ್ಲಿ ಹೆಚ್ಚು ಸಕ್ರಿಯ ಹಾಗೂ ಸೃಜನಾತ್ಮಕವಾಗುತ್ತಿದ್ದು, ಗಮನ ಸೆಳೆಯಲಾರಂಭಿಸಿದೆ. ಅದರಲ್ಲೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚೆಗಷ್ಟೇ ನಡೆದ ಕನ್ನಡ ರಾಜ್ಯೋತ್ಸವಕ್ಕೆ ಗೂಗಲ್ ಕನ್ನಡದಲ್ಲೇ ಶುಭಾಶಯ ಕೋರಿತ್ತು. ಇದೀಗ ದೀಪಾವಳಿಗೂ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಶುಭಾಶಯ ಕೋರಿದ್ದು, ಮಹತ್ವದ ಸಂದೇಶವನ್ನೂ ಸಾರಿಗೆ.
Switching to ✨Light Mode✨ because it's time for the festival of lights 💖🪔#HappyDiwali #KeepTraditionsAlive pic.twitter.com/XpGrLSMzXF
— Google India (@GoogleIndia) November 12, 2023
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 13 ಭಾಷೆಗಳಲ್ಲಿ ಹೇಗೆಲ್ಲ ದೀಪಾವಳಿ ಶುಭಾಶಯ ಕೋರುತ್ತಾರೆ ಎಂಬುದನ್ನು ಅನುವಾದ ರೂಪದಲ್ಲಿ ವ್ಯಕ್ತಪಡಿಸಿರುವ ಗೂಗಲ್ ‘ಸಂಪ್ರದಾಯಗಳನ್ನು ಜೀವಂತವಾಗಿಡಿ’ ಎಂಬ ಸಂದೇಶವನ್ನೂ ನೀಡಿದೆ. ಅರ್ಥಾತ್, #KeepTraditionsAlive ಎಂಬ ಹ್ಯಾಷ್ಟ್ಯಾಗ್ ಬಳಸಿ ಈ ಶುಭಾಶಯ ಕೋರಿದೆ. ಮಾತ್ರವಲ್ಲದೆ, ಬೆಳಗುವ ದೀಪಗಳ ಮೂಲಕ ತನ್ನ ಲಾಂಛನವನ್ನು ರೂಪಿಸಿದೆ.
So many ways to wish love, light and happiness. What's yours? 💗✨#KeepTraditionsAlive pic.twitter.com/5d6GqPOPZD
— Google India (@GoogleIndia) November 12, 2023
ಇಲ್ಲಿ ‘ಯಮದೂತ’ನಿಗೇ ಪೂಜೆ ಮಾಡಿ ದೀಪಾವಳಿ ಹಬ್ಬ ಆಚರಣೆ!