ಅಗ್ನಿದುರಂತದಿಂದ ಬಚಾವಾದರೂ ಹೃದಯಾಘಾತ ಬಲಿ ಪಡೆಯಿತು!

Heart Attack (3)
Published on

ನವದೆಹಲಿ: ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷೀಲಿ ಎಂಬ ಮಾತೊಂದಿದೆ. ಅಂಥದ್ದೇ ಒಂದು ಪರಿಸ್ಥಿತಿಗೆ ಇಲ್ಲೊಬ್ಬ ವ್ಯಕ್ತಿ ಗುರಿಯಾಗಿದ್ದು, ಸಾವಿನ ದವಡೆಯಿಂದ ಪಾರಾದೆ ಎಂದು ನಿಟ್ಟುಸಿರುಬಿಟ್ಟ ಬೆನ್ನಿಗೆ ಬದುಕೇ ಕೊನೆಯಾಗಿದೆ.

ಬಿಹಾರದ ಬಹದೂರ್​​ಗಂಜ್ ಎಂಬಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಇಲ್ಲಿನ ಎರಡು ಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಈ ಅವಘಡದಲ್ಲಿ ಮೂವರು ಸುಟ್ಟ ಗಾಯಗಳಿಗೆ ಒಳಾಗಿದ್ದರು. ಬಳಿಕ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಾಯಾಳುಗಳ ಪೈಕಿ ವಿನೋದ್ ಕೇಸರ್​ವಾಣಿ (75) ಎಂಬವರು ಆಸ್ಪತ್ರೆಯಲ್ಲಿ ಸಾವಿಗೀಡಾದರು. ಸುಟ್ಟಗಾಯಗಳಿಗೆ ಒಳಗಾಗಿದ್ದ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.

ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಈ ಅವಘಡ ಸಂಭವಿಸಿದ್ದು, ಈ ಕಟ್ಟಡದ ತಳಮಹಡಿಯಲ್ಲಿ ಅಂಗಡಿ, ಮೊದಲ ಮಹಡಿಯಲ್ಲಿ ಮನೆ ಹಾಗೂ ಎರಡನೇ ಮಹಡಿಯಲ್ಲಿ ಗೋದಾಮು ಇತ್ತು. ಬೆಂಕಿಯನ್ನು ಆರಿಸಲು 10 ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net