More

    ಭಾವಸದೃಶ ವಾತಾವರಣ, ನೀತಿ-ನಿರ್ಧಾರಗಳ ಮೆಲುಕು: ಅಧಿಕಾರಿಗಳ ಜತೆ ಹಂಗಾಮಿ ಸಿಎಂ ಬೊಮ್ಮಾಯಿ‌ ಧನ್ಯವಾದ ಸಲ್ಲಿಸುವ ಸಭೆ

    ಬೆಂಗಳೂರು: ರಾಜ್ಯದ ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ, ನೀತಿ-ನಿರ್ಧಾರಗಳನ್ನು ಮೆಲುಕು ಹಾಕಿದ ಸಭೆಯಲ್ಲಿ ಭಾವಸದೃಶ ವಾತಾವರಣ ನೆಲೆಸಿತ್ತು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಹಿರಿಯ ಅಧಿಕಾರಿಗಳ ಜತೆಗೆ ಸೌಹಾರ್ದಯುತವಾಗಿ ಚರ್ಚಿಸಿದರು. ಪರಸ್ಪರ ಧನ್ಯವಾದಗಳ ವಿನಿಮಯ ವೇಳೆ ಅರೆಕ್ಷಣ ಇತ್ತ ಬೊಮ್ಮಾಯಿ‌, ಅತ್ತ ಅಧಿಕಾರಿ ವೃಂದವೂ ಭಾವುಕವಾಯಿತು.

    ಸಂವಿಧಾನ ವ್ಯವಸ್ಥೆಯನ್ನು ಒಪ್ಪಿಕೊಂಡ ನಾವು ಅದಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ, ಮಾಡಿದ್ದೇವೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಅಭಿವೃದ್ಧಿ ವಿಚಾರದಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ಸಮನ್ವಯದಿಂದ ರಾಜ್ಯದ ಅಭಿವೃದ್ಧಿ, ಜೀವನಮಟ್ಟ ಸುಧಾರಣೆ ಸಾಧ್ಯವೆಂದು ಮೂರುವರೆ ವರ್ಷಗಳ ಆಡಳಿತ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಬೊಮ್ಮಾಯಿ‌ ಹೇಳಿದರು.

    ಇದನ್ನೂ ಓದಿ: ಅಮೆಜಾನ್ ಭಾರತದಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ

    ಐದು ವರ್ಷಗಳಿಗೊಮ್ಮೆ ನಾವು ಬದಲಾಗುತ್ತೇವೆ. ಆದರೆ ಅಧಿಕಾರಿಗಳು, ಸಿಬ್ಬಂದಿ ಶಾಶ್ವತ. ಅಧಿಕಾರದ ಅವಧಿಯಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ಕಾರ್ಯಾಂಗ ಸಹಕರಿಸಿ ಅನುಷ್ಠಾನಕ್ಕೆ ತಂದಿದೆ ಎಂದ ಬೊಮ್ಮಾಯಿ‌, ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು‌.

    ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮಾತನಾಡಿ ಉತ್ತಮವಾಗಿ ಕೆಲಸ ಮಾಡುವುದಕ್ಕೆ ನಿಮ್ಮ ಮಾರ್ಗದರ್ಶನ, ಸಲಹೆ ಅನನ್ಯವಾದುದು. ಅಭಿವೃದ್ಧಿಯಲ್ಲಿ ಕರ್ನಾಟಕ ನಂಬರ್ ಒನ್ ಆಗಿ ಮಾಡಲು ಶ್ರಮಿಸುವುದಕ್ಕೆ ಅಧಿಕಾರಿ ವರ್ಗ ಬದ್ಧವಾಗಿದೆ ಎಂದರು‌.

    ಬಂಡವಾಳ ಹೂಡಿಕೆ, ಉದ್ಯನಸ್ನೇಹಿ ವಾತಾವರಣದಿಂದ ಜಾಗತಿಕವಾಗಿ ಕರ್ನಾಟಕ ಒಳ್ಳೆಯ ಛಾಪು ಮೂಡಿಸಿದೆ ಎಂದು ಇ.ವಿ.ರಮಣರೆಡ್ಡಿ ಶ್ಲಾಘಿಸಿದರು.

    ಇದನ್ನೂ ಓದಿ: ಸಾಧಕರ ಆತ್ಮವಿಶ್ವಾಸ ಹೆಚ್ಚಿಸುವ ಪ್ರಶಸ್ತಿ: ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಮತ

    ಡಿಜಿ ಐಜಿಪಿ ಪ್ರವೀಣ್ ಸೂದ್ ಮಾತನಾಡಿ ಗೃಹ ಮಂತ್ರಿಯಾಗಿ ನಂತರ ಮುಖ್ಯಮಂತ್ರಿಯಾಗಿದ್ದರಿಂದ ಇಲಾಖೆಯಲ್ಲಿ ಬಹುದೊಡ್ಡ ಸುಧಾರಣೆ ತರಲು ಸಾಧ್ಯವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ದಕ್ಷತೆಯಿಂದ ನಿರ್ವಹಿಸಲು ನೆರವಾಯಿತು. ಪೊಲೀಸ್ ಸಿಬ್ಬಂದಿ ನೇಮಕ, ಠಾಣೆಗಳು ಹಾಗೂ ವಸತಿ ಸಮುಚ್ಚಯ ನಿರ್ಮಾಣದಿಂದ ಮುಂದಿನ 10 ವರ್ಷಗಳಿಗೆ ಅಗತ್ಯವಿರುವ ಮೂಲ ಸವಲತ್ತುಗಳು ಸೃಜನೆಯಾಗಿವೆ ಎಂದರು.

    4 ಅಂತಸ್ತಿನ ಹಾಸ್ಟೆಲ್‌ಗೆ ಬೆಂಕಿ ಬಿದ್ದು 10 ಜನರು ಮೃತ್ಯು

    ಕಾಂಗ್ರೆಸ್​ ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ: ಜಿ. ಪರಮೇಶ್ವರ್​ ಹೇಳಿಕೆ

    ಮುಸ್ಲಿಂ ಸಮುದಾಯಕ್ಕೆ ಡಿಸಿಎಂ, ಗೃಹಖಾತೆ ನೀಡಬೇಕು; ಕರ್ನಾಟಕ ಮುಸ್ಲಿಂ ಸಂಘದಿಂದ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts