More

    ಅಮೆಜಾನ್ ಭಾರತದಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ

    ನವದೆಹಲಿ: ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಕಳೆದ ತಿಂಗಳಷ್ಟೇ  ಉದ್ಯೋಗಿಗಳನ್ನು ದೊಡ್ಡ ಪ್ರಮಾಣದಲ್ಲಿ ವಜಾಗೊಳಿಸುವುದಾಗಿ ಘೋಷಿಸಿತ್ತು. ಇದೀಗ ಭಾರತದಲ್ಲಿ ಸುಮಾರು 500 ಉದ್ಯೋಗಿಗಳನ್ನು ವಿವಿಧ ಭಾಗಗಳಿಂದ ವಜಾಗೊಳಿಸಿದೆ.

    ಈ ವರ್ಷದ ಮಾರ್ಚ್‌ನಲ್ಲಿ ಜಾಗತಿಕ ಮಟ್ಟದ ಉದ್ಯೋಗ ಕಡಿತವನ್ನು ಅಮೆಜಾನ್‌ ಘೋಷಣೆ ಮಾಡಿತ್ತು. ಅದರ ಪ್ರಕಾರವಾಗಿ ಸದ್ಯ ವಜಾ ಪ್ರಕ್ರಿಯೆ ನಡೆದಿದೆ. ಉದ್ಯೋಗ ಕಡಿತ ಮಾಡುವ ಅಮೆಜಾನ್‌ನ ನಿರ್ಧಾರದಿಂದಾಗಿ ಜಾಗತಿಕವಾಗಿ ಇನ್ನೂ 9,000 ಸಿಬ್ಬಂದಿ ನೌಕರಿ ಕಳೆದುಕೊಳ್ಳುವ ಆತಂಕವಿದೆ.

    ಇದನ್ನೂ ಓದಿ: ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?

    ಕಂಪನಿಯು ಮಾನವ ಸಂಪನ್ಮೂಲ ಮತ್ತು ಬೆಂಬಲ ಕಾರ್ಯಗಳು ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ಭಾರತದಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. ಅಮೆಜಾನ್ ಇದುವರೆಗೆ 500 ಉದ್ಯೋಗಿಗಳನ್ನು ವಜಾ ಮಾಡಿದೆ. ಈ ಪ್ರಕ್ರಿಯೆಯು ಇನ್ನೂ ಮುಂದುವರಿಯುತ್ತದೆ ಎನ್ನಲಾಗಿದೆ.

    ಕೊಚ್ಚಿ ಮತ್ತು ಲಕ್ಕೋದಂತಹ ನಗರಗಳಲ್ಲಿ ಅಮೆಜಾನ್‌ನ ಹಲವು ವಿಭಾಗಗಳನ್ನು ಮುಚ್ಚಲಾಗಿದೆ. ಅಮೆಜಾನ್ ಡಿಜಿಟಲ್ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಕಂಪನಿಯು ಮಾರಾಟಗಾರರ ಬೆಂಬಲ ಕಾರ್ಯದ ಅಮೆಜಾನ್ ಡಿಜಿಟಲ್ ಕೇಂದ್ರವನ್ನು ಮುಚ್ಚಿದೆ ಮತ್ತು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ತೆಗೆದುಹಾಕಲಾಗಿದೆ ಅಥವಾ ಇತರ ವ್ಯಾಪಾರ ಸ್ಥಳಗಳಿಗೆ ವರ್ಗಾಯಿಸಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸರ್ಕಾರ ರಚನೆಗೂ ಮುನ್ನ ಶುರುವಾಯ್ತು ಸಚಿವ ಸ್ಥಾನಕ್ಕೆ ಸ್ಪರ್ಧೆ; ವಿವಿಧ ಸಮುದಾಯದ ನಾಗರಿಕರಿಂದಲೂ ಒತ್ತಡ

    ಅಮೆಜಾನ್ ಡಿಜಿಟಲ್ ಸೆಂಟರ್ ಗೆ ಹೊಸ ಲುಕ್ ನೀಡಿ ಮತ್ತೆ ಲಾಂಚ್ ಮಾಡಲಿದೆ. ಇತ್ತೀಚಿನ ತಿಂಗಳುಗಳಲ್ಲಿ ಅಮೆಜಾನ್‌ನಲ್ಲಿ ಇದು ಎರಡನೇ ಸುತ್ತಿನ ವಜಾಗೊಳಿಸುವಿಕೆಯಾಗಿದೆ. ನಮ್ಮ ವಾರ್ಷಿಕ ವಹಿವಾಟು ನಿರ್ವಹಣೆ ಯೋಜನೆ ಪರಾಮರ್ಶೆ ಭಾಗವಾಗಿ ಪ್ರತಿ ವಹಿವಾಟನ್ನು ವಿಮರ್ಶಿಸುತ್ತೇವೆ ಮತ್ತು ನಮಗೆ ಅಗತ್ಯವೆಸಿದ ಬದಲಾವಣೆ ಮಾಡುತ್ತೇವೆ ಎಂದು ಕಂಪನಿಯ ವಕ್ತಾರರು ಈ ಹಿಂದೆ ಹೇಳಿದ್ದರು. ಈಗ ಆರಂಭವಾಗಿರುವ ಉದ್ಯೋಗ ಕಡಿತ ಮುಂದಿನ ವರ್ಷದವರೆಗೂ ಮುಂದುವರಿಯಲಿದೆ ಎಂದು ಕಂಪನಿ ಹೇಳಿದೆ.

    VIDEO|ರಾಘವ್ ಛಡ್ಡಾ ಜತೆ ಲಿಪ್ ಲಾಕ್ ಮಾಡಿದ ಪರಿಣೀತಿ ಚೋಪ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts