4 ಅಂತಸ್ತಿನ ಹಾಸ್ಟೆಲ್‌ಗೆ ಬೆಂಕಿ ಬಿದ್ದು 10 ಜನರು ಮೃತ್ಯು

fire
Published on

ನ್ಯೂಜಿಲೆಂಟ್​​​: ನ್ಯೂಜಿಲೆಂಡ್‌ನ ವೆಲ್ಲಿಂಗ್‌ಟನ್‌ನ ಹಾಸ್ಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು 10 ಜನರು ಸಾವನ್ನಪ್ಪಿದ್ದಾರೆ.

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಗರದಲ್ಲಿರುವ 4 ಅಂತಸ್ತಿನ ಹಾಸ್ಟೆಲ್ ಕಟ್ಟಡವೊಂದರಲ್ಲಿ ಮಂಗಳವಾರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ನಗರ ಶೋಧ ಮತ್ತು ರಕ್ಷಣಾ ಸಿಬ್ಬಂದಿ ವಲ್ಲಿಂಗ್ಟನ್ ಹಾಸ್ಟೆಲ್‌ನ ಹೊಗೆಯಾಡುತ್ತಿರುವ ಅವಶೇಷಗಳಲ್ಲಿ ಬದುಕುಳಿದಿರುವವರನ್ನು ಉಳಿಸಲು ಶೋಧ ಕಾರ್ಯ ಆರಂಭಿಸಿದ್ದಾರೆ. ಕಟ್ಟಡಕ್ಕೆ ಬೆಂಕಿ ಮತ್ತು ಹೊಗೆ ಆವರಿಸಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಐವತ್ತೆರಡು ಜನರು ಕಟ್ಟಡದಿಂದ ಹೊರಬಂದಿದ್ದಾರೆ ಆದರೆ ಅಗ್ನಿಶಾಮಕ ದಳದವರು ಇನ್ನೂ ಇತರರನ್ನು ಲೆಕ್ಕ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ವೆಲ್ಲಿಂಗ್ಟನ್ ಅಗ್ನಿಶಾಮಕ ಮುಖ್ಯಸ್ಥ ನಿಕ್ ಪ್ಯಾಟ್ ಹೇಳಿದ್ದಾರೆ.

ಅಗ್ನಿ ದುರಂತ ನಡೆದ ಕೆಲ ಗಂಟೆಗಳ ನಂತರ, ಪ್ರಧಾನ ಮಂತ್ರಿ ಕ್ರಿಸ್ ಹಿಪ್ಪಿನ್ಸ್ ಅವರು ದುರಂತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹೆಚ್ಚಿನವರು ಗಾಯಗೊಂಡಿರುವ ಸಾಧ್ಯತೆಯಿದೆ. ಇನ್ನೂ 20 ಜನರು ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net