More

    ಹುಚ್ಚರಾಯಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿ.ವೈ. ವಿಜಯೇಂದ್ರ

    ಬೆಂಗಳೂರು: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಬಿ.ವೈ. ವಿಜಯೇಂದ್ರ ಅವರು ಹುಚ್ಚರಾಯಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

    ಶಿಕಾರಿಪುರ‌ ಕ್ಷೇತ್ರದಿಂದ ಬಿ.ವೈ.‌ವಿಜಯೇಂದ್ರ ಅವರು ಚೊಚ್ಚಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇಂದು ಪ್ರಮಾಣವಚನ ಸ್ವೀಕರಿಸಲು ವಿಧಾನಸೌಧಕ್ಕೆ ಆಗಮಿಸಿದ ವಿಜಯೇಂದ್ರ ಒಳ ಪ್ರವೇಶಿಸುವ ಮುನ್ನ ಶಕ್ತಿಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದರು. ಬಳಿಕ ವಿಧಾನಸಭೆ ಪ್ರವೇಶಿಸಿ, ಹುಚ್ಚರಾಯಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷವೂ ಸಿಎಂ ಆಗಿ ಮುಂದುವರೆಯುತ್ತಾರೆ ಎಂದಿದ್ದ ಎಂಬಿ ಪಾಟೀಲ್; ಸ್ಪಷ್ಟನೆ ನೀಡಿ ಯು ಟರ್ನ್!

    ಶಿಕಾರಿಪುರ ಕ್ಷೇತ್ರವನ್ನು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಪ್ರತಿನಿಧಿಸುತ್ತಿದ್ದರು. ಆದರೆ, ಚುನಾವಣಾ ರಾಜಕೀಯದಿಂದ ಬಿಎಸ್​ವೈ ನಿವೃತ್ತಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಅವರ ಪುತ್ರ ಬಿ.ವೈ. ವಿಜಯೇಂದ್ರ ತುಂಬುತ್ತಿದ್ದಾರೆ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ವಿಜಯೇಂದ್ರ 11,008 ಅಂತರಗಳಿಂದ ಗೆಲುವು ಸಾಧಿಸಿದರು.

    ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಸ್ವತಂತ್ರ ಅಭ್ಯರ್ಥಿ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್‌.ಪಿ. ನಾಗರಾಜಗೌಡ ಅವರು 70,802 ಮತಗಳನ್ನು ಪಡೆದರೆ, ವಿಜಯೇಂದ್ರ ಅವರು 81,810 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಗೋಣಿ ಮಾಲತೇಶ 8,101 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. (ದಿಗ್ವಿಜಯ ನ್ಯೂಸ್​)

    VIDEO | ಚಾಲಕರ ಕಷ್ಟ-ಸುಖ ಆಲಿಸಲು ಲಾರಿ ಏರಿದ ರಾಹುಲ್ ಗಾಂಧಿ!

    ಒಂದೇ ಬಾರಿಗೆ 5 ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ; ತಾಯಿ, ಮಕ್ಕಳು ಸುರಕ್ಷಿತ

    45 ದಿನದೊಳಗೆ ಗಂಡಾಂತರ..ವಿನಯ್ ಗುರೂಜಿ ಹೆಸರಿನ ಫೇಕ್ ಅಕೌಂಟ್​​ನಿಂದ ಮೆಸೇಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts