More

    ಒಂದೇ ಬಾರಿಗೆ 5 ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ; ತಾಯಿ, ಮಕ್ಕಳು ಸುರಕ್ಷಿತ

    ಜಾರ್ಖಂಡ್‌: ಮಹಿಳೆಯೊಬ್ಬರು ಜಾರ್ಖಂಡ್‌ನ ರಾಂಚಿಯ ರಿಮ್ಸ್‌ ಆಸ್ಪತ್ರೆಯಲ್ಲಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.

    ಐದು ಶಿಶುಗಳು ಆರೋಗ್ಯಕರ ಸ್ಥಿತಿಯಲ್ಲಿವೆ. ನವಜಾತ ಶಿಶುಗಳು ಕಡಿಮೆ ತೂಕವನ್ನು ಹೊಂದಿದ್ದು, ಸದ್ಯಕ್ಕೆ ತೀವ್ರನಿಗಾ ಘಟಕ (NICU)ನಲ್ಲಿ ಇರಿಸಲಾಗಿದೆ.

    ಜಾರ್ಖಂಡ್‌ನ ಅನಿತಾ ಕುಮಾರಿ (27) ಸೋಮವಾರ ರಿಮ್ಸ್‌ನಲ್ಲಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ನವಜಾತ ಶಿಶುಗಳು 750 ಗ್ರಾಂ ಮತ್ತು 1.1 ಕೆಜಿ ತೂಕವಿದ್ದು, ಅವುಗಳನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ: ವಾತಾವರಣದ ವಿಚಿತ್ರ ಆಟ; ಈ ಬಾರಿ ಬೆಂಗಳೂರಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಯಾಕೆ ಗೊತ್ತಾ?

    ಒಂದೇ ಹೆರಿಗೆಯಲ್ಲಿ ಐದು ಶಿಶುಗಳು ಜನಿಸಿದ್ದು, ಡಾ.ಶಶಿಬಾಲಾ ಸಿಂಗ್ ಹೆರಿಗೆ ಮಾಡಿದ್ದಾರೆ ಎಂದು ರಾಂಚಿ ಒಬ್‌ಸ್ಟೆಟ್ರಿಕ್ ಗೈನೆಕಾಲಜಿಕಲ್ ಸೊಸೈಟಿಯ ಅಧ್ಯಕ್ಷ ಡಾ.ಸುಮನ್ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ರಿಮ್ಸ್ ಇತಿಹಾಸದಲ್ಲಿ ಒಂದೇ ಹೆರಿಗೆಯಲ್ಲಿ ಐದು ಶಿಶುಗಳು ಜನಿಸಿರುವುದು ಇದೇ ಮೊದಲು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

    ರಿಮ್ಸ್‌ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಚಾರವಾಗಿ ಬರೆದುಕೊಂಡಿದೆ, “ಮಹಿಳೆಯೊಬ್ಬರು ರಿಮ್ಸ್‌ ಆಸ್ಪತ್ರೆಯಲ್ಲಿ ಸ್ತ್ರೀರೋಗ ವಿಭಾಗದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿಶುಗಳು ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದೆ. ವೈದ್ಯರ ನೇತೃತ್ವದಲ್ಲಿ ಯಶಸ್ವಿ ಹೆರಿಗೆ ನಡೆಸಲಾಯಿತು” ಎಂದು ಟ್ವೀಟ್​​ ಮಾಡಲಾಗಿದೆ.

    45 ದಿನದೊಳಗೆ ಗಂಡಾಂತರ..ವಿನಯ್ ಗುರೂಜಿ ಹೆಸರಿನ ಫೇಕ್ ಅಕೌಂಟ್​​ನಿಂದ ಮೆಸೇಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts