ಸತ್ತ ಮಗನ ವೀರ್ಯದಿಂದ ಮಗು ಪಡೆದ ನಟಿ..ಯಾವ ತಾಯಿಯೂ ಮಾಡದ ಕೆಲಸ..!

actor
Published on

ಮ್ಯಾಡ್ರಿಡ್(ಸ್ಪೇನ್): ತಾಯ್ತನವೇ ಒಂದು ಸೌಭಾಗ್ಯ. ಪಾಲಕರು ಸಾಮಾನ್ಯವಾಗಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜನ್ಮ ನೀಡಲು ಎದುರು ನೋಡುತ್ತಾರೆ. ಆದರೆ, ಇಲ್ಲಿ ಮಹಿಳೆಯೊಬ್ಬರು 69ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಅದೂ ತನ್ನ ಕಿರಿಯ ಮಗನ ವೀರ್ಯದಿಂದ.

ಮಗನ ವೀರ್ಯಾಣು ಇರುವ ಮತ್ತೊಂದು ಮಗುವಿಗೆ ಜನ್ಮ ನೀಡಿದರೆ ಹೇಗಿರುತ್ತದೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಾರೆ. ಆದರೆ, ಇದರ ಹಿಂದಿನ ಕಾರಣಗಳು ತಿಳಿದರೆ ಯಾರೂ ಅಳುಕನ್ನು ನಿಲ್ಲಿಸುವುದಿಲ್ಲ.

ಒಂದು ಕಾಲದಲ್ಲಿ ಮಕ್ಕಳಿಗೆ ಜನ್ಮ ನೀಡುವುದು ತಾಯಂದಿರಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಅವಸಾನದ ಅಂಚಿಗೆ ಹೋದ ಅನೇಕ ಮಾತೆಯರೂ ಇದ್ದಾರೆ. ಆದರೆ ಈಗ ಕಾಲ ಬದಲಾಗಿದೆ. ಕಾಲಾನಂತರದಲ್ಲಿ ಹೊಸ ತಂತ್ರಜ್ಞಾನಗಳು ಹೊರಹೊಮ್ಮಿವೆ. ಈಗ ಅನೇಕ ತಾಯಂದಿರು ಬಾಡಿಗೆ ತಾಯ್ತನದ ಮೂಲಕ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.

ಇಲ್ಲಿ ಹಿರಿಯ ನಟಿಯೊಬ್ಬರು ತಮ್ಮ ಕಿರಿಯ ಮಗನ ವೀರ್ಯದೊಂದಿಗೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾದರೆ ಯಾರು ಆ ನಟಿ.. ಇದರ ಹಿಂದಿನ ಕಾರಣಗಳೇನು ಎಂದು ತಿಳಿಯೋಣ.

ಅನಾ ಒಬ್ರೆಗಾನ್ ಸ್ಪೇನ್‌ನ ಮಾಜಿ ನಟಿ. ಈಗ ಆಕೆಗೆ 69 ವರ್ಷ. ಮಗ ಅಲೆಸ್ ಲೆಕ್ವಿಯೊ 27 ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಸಾಯುವ ಮೊದಲು ತಂದೆಯಾಗಬೇಕೆಂದು ಕನಸು ಕಂಡಿದ್ದ. ಅದರಂತೆ ಆತನ ಮರಣಕ್ಕೂ ಮೊದಲು ಆರೋಗ್ಯ ಕೇಂದ್ರದಲ್ಲಿ ವೀರ್ಯವನ್ನು ಎಚ್ಚರಿಕೆಯಿಂದ ಸಂಗ್ರಹಿಸಲಾಗಿತ್ತು.

ಅಲೆಸ್ ಲೆಕ್ವಿಯೊ ಮರಣದ ನಂತರ ಬಹಳ ಸಮಯದವರೆಗೆ ಅವನ ತಾಯಿಗೆ ಮಗನ ಕೊನೆಯ ಆಸೆ ತಿಳಿದಿರಲಿಲ್ಲ. ಇದರೊಂದಿಗೆ ಅಲೆಸ್ ಲೆಕ್ವಿಯೊ ವೀರ್ಯ ಸಂಗ್ರಹದ ಬಗ್ಗೆ ಅವಳು ತಿಳಿದುಕೊಂಡಳು. ಬಳಿಕ ಆ ವೃದ್ಧ ತಾಯಿ ತನ್ನ ಮಗನ ಆಸೆ ಪೂರೈಸಲು ನಿರ್ಧರಿಸಿದಳು.

ಅದರಂತೆ ಹಲವು ವೈದ್ಯರನ್ನು ಸಂಪರ್ಕಿಸಿ, ಮಗನ ವೀರ್ಯದ ಮೂಲಕ ಮಗುವಿಗೆ ಜನ್ಮ ನೀಡಬೇಕೆಂದುಕೊಂಡಳು. ಕಳೆದ ವರ್ಷ ಅವರು ವೈದ್ಯರ ಬಳಿಗೆ ಹೋಗಿ ಎಲ್ಲಾ ಅಗತ್ಯ ಔಪಚಾರಿಕತೆ ಪೂರ್ಣಗೊಳಿಸಿದರು. ತನ್ನ ಜೀವಕ್ಕೆ ಅಪಾಯವಿದ್ದರೂ ಮಗನ ವೀರ್ಯಾಣುನೊಂದಿಗೆ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಮಗುವಿಗೆ ಅನಿತಾ ಎಂದು ಹೆಸರಿಟ್ಟಿದ್ದಾಳೆ ಅನಾ ಒಬ್ರೆಗಾನ್. ಮಗುವಿನ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆಕೆಯ ಪೋಸ್ಟ್ ಮಗುವಿನ ತಂದೆಯ ಬಗ್ಗೆ ಬರೆದಿತ್ತು.. “ಅನಿತಾ, ನೀನು ಈಗಷ್ಟೇ ಒಂದು ವರ್ಷ ಪೂರೈಸಿದ್ದೀಯಾ. ಗಾಢವಾದ ಕತ್ತಲೆಯಲ್ಲಿ ತುಂಬಿ ನೋವಿನಲ್ಲಿ ಮುಳುಗಿದ್ದ ನನ್ನ ಮನದಾಳದಲ್ಲಿ ನನೀನು ಬೆಳಕನ್ನು ತುಂಬಿದ್ದೀಯಾ.. ನಿನ್ನ ನಗು ಮುತ್ತು, ನವಿರಾದ ಹೆಜ್ಜೆಗಳೇ ಸಾಕು ನನಗೆ.. ನಿನ್ನ ತಂದೆಯಂತೆಯೇ ಪ್ರೀತಿಯಿಂದ ನನ್ನನ್ನು ನೋಡಿದ್ದಕ್ಕೆ ಧನ್ಯವಾದಗಳು..ಇಲ್ಲಿಯವರೆಗೆ ಯಾರೂ ನನ್ನನ್ನು ಹಾಗೆ ನೋಡಿಲ್ಲ”ಎಂದು ಭಾವುಕಳಾಗಿ ಪೋಸ್ಟ್‌ನಲ್ಲಿ ಹೇಳಿದ್ದಾಳೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net