ಹುಡುಗರಿಗೂ ಅಂಟಿದ ಕಾಸ್ಮೆಟಿಕ್ ಪ್ರೇಮ!

10
Published on

ಸೌಂದರ್ಯಪ್ರಜ್ಞೆ (ಕಾಸ್ಮೆಟಿಕ್)    ಎಂಬುದು ಸಾಮಾನ್ಯವಾಗಿ ಹುಡುಗಿಯರಲ್ಲೇ ಹೆಚ್ಚು ಎನ್ನುವ ಮಾತಿದೆ. ಆದರೆ ಈಗ ಅದು ಹುಡುಗರಲ್ಲೂ ಹೆಚ್ಚಾಗಿ ಕಾಣಿಸಲಾರಂಭಿಸಿದೆ.  ಅದರಲ್ಲೂ ಹುಡುಗಿಯರಂತೆ ಹುಡುಗರೂ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಿದ್ದು, ಕೃತಕವಾಗಿ ಅಂದ ಹೆಚ್ಚಿಸಿಕೊಳ್ಳಲಾರಂಭಿಸಿದ್ದಾರೆ. ಆ ಕುರಿತ ಕಿರು ಲೇಖನ ಇಲ್ಲಿದೆ - ಮರಿದೇವ ಹೂಗಾರ, ಹುಬ್ಬಳ್ಳಿ

ಹುಡುಗರು ಕಾಸ್ಮೆಟಿಕ್ ಸರ್ಜರಿಗೆ (ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ) ಒಳಗಾಗುತ್ತಿರುವ ಟ್ರೆಂಡ್ 

ತುಂಟ ಕೆನ್ನೆಯ ಮೇಲೆ ಗುಳಿ ಬಿದ್ದರೆ ಎಷ್ಟು ಚೆನ್ನ ಅಲ್ವಾ?, ತಂಬಿಟ್ಟಿನಂಥ ಗದ್ದ ಇದ್ದರೆ?, ಅಯ್ಯೋ ನಿನ್ನ ಮುದ್ದು ಮುಖಕ್ಕೆ ಗಿಣಿಯಂಥ ಮೂಗಿರಲಿ, ನೀ ನಕ್ಕರೆ ವಸಡು ಕಾಣದಿರಲಿ.. ಹೀಗೆ ಹುಡುಗಿಯರಿಗೆ ಹುಡುಗರು ಸಂಭೋದಿಸುವುದು ವಾಡಿಕೆ. ಆದರೆ, ಕಾಲ ಬದಲಾಗಿದೆ. ಈಗ ಪ್ರೀತಿಯಿಂದ ಹುಡುಗಿಯರೇ ಹುಡುಗರಿಗೆ ಕೇಳುವ ಕಾಲ ಬಂದಾಗಿದೆ! ಆಧುನಿಕ ಕಾಲದ ಜತೆಗೆ ಹೊಂದಿಕೊಳ್ಳಲು ಯತ್ನಿಸುತ್ತಿರುವ ದಿನಗಳಿವು. ಹುಡುಗರಿಗೆ ಹುಡುಗಿಯರು ಸಿಗುವುದೂ ದುರ್ಲಭ. ಇಂಥದ್ದರಲ್ಲಿ ಹುಡುಗಿಯರ ಪ್ರೀತಿಯ ಮಾತಿಗೆ ಮನಸೋತು, ಹುಡುಗರು ಕಾಸ್ಮೆಟಿಕ್ ಸರ್ಜರಿಗೆ (ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ) ಒಳಗಾಗುತ್ತಿರುವ ಟ್ರೆಂಡ್ ಹೆಚ್ಚುತ್ತಿದೆ. ಈ ಮೊದಲೆಲ್ಲ ಬೃಹತ್ ಮಹಾನಗರಗಳಲ್ಲಿ ಹುಡುಗಿಯರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿದ್ದರು.

ಬಾಯ್​ಫ್ರೆಂಡ್, ಭಾವಿ ಪತಿ, ಪತಿಯ ಓಲೈಕೆಗೆ ಕಾಸ್ಮೆಟಿಕ್ ಸರ್ಜರಿ ನಂಟು ಬೆಳೆಸಿಕೊಂಡಿದ್ದರು. ಇವರ ಅನುಪಾತ ಶೇ. 75ರಷ್ಟಿತ್ತು. ತುಟಿ, ಮುಖ, ಸ್ತನ, ಮೂಗು, ದೇಹದ ಮರು ಸೌಂದರ್ಯವೃದ್ಧಿಗೆ ಅಧಿಕ ಒತ್ತು ಕೊಡುತ್ತಿದ್ದರು. ಈಗ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿರುವ ಹುಡುಗರ ಸಂಖ್ಯೆ ಶೇ. 60 ದಾಟಿದೆ. ಅದರಲ್ಲೂ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರು ಹೆಚ್ಚೆಂಬುದು ನಿಮ್ಮ ಊಹೆ ಆಗಿದ್ದರೆ ಅದು ಸುಳ್ಳು. ಕೆಳ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚುತ್ತಿರುವುದನ್ನು ಪ್ಲ್ಯಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರೇ ಅಚ್ಚರಿಯಿಂದ ಹೇಳುತ್ತಿದ್ದಾರೆ.

ಕಾರಣಗಳೇನು?

ಈಗೀಗ ಸೋಷಿಯಲ್ ಮೀಡಿಯಾ ಟ್ರೆಂಡ್ ಶುರುವಾಗಿದೆ. ನಟರಾದ ಶಾರುಖ್ ಖಾನ್, ಹೃತಿಕ್ ರೋಷನ್, ರಣಬೀರ್ ಕಪೂರ್, ಸಿದ್ಧಾರ್ಥ, ವರುಣ್ ಧವನ್​ನಂತೆ ಕಾಣಬೇಕೆಂದು ಹುಡುಗಿಯರು ಬಯಸುತ್ತಿದ್ದಾರೆ. ಪ್ರಿ-ವೆಡ್ಡಿಂಗ್ ಶೂಟ್, ಸೆಲ್ಪಿ ಕ್ರೇಜ್​ಗಳೂ ಅಂದವನ್ನು ಪರಿಗಣಿಸುವಂತೆ ಮಾಡುತ್ತಿವೆೆ. ಮೊದಲೆಲ್ಲ ಹುಡುಗಿಯರು ಹೀಗೇ ಇರಬೇಕು ಎಂದು ಹುಡುಗರೇ ಅಪೇಕ್ಷೆ ಪಡುತ್ತಿದ್ದರು. ಈಗ ಹಾಗಿಲ್ಲ.. ಹುಡುಗಿಯರೇ ಹುಡುಗರನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಈ ಟ್ರೆಂಡ್ ಜೋರಾಗಿ ಶುರುವಾಗಿದೆ.

ಹೆಚ್ಚು ಕಾಸ್ಮೆಟಿಕ್ ಸರ್ಜರಿ ಯಾವುದು?

ಗುಳಿ ಕೆನ್ನೆ, ಸ್ತನ ಗಾತ್ರ ಸಣ್ಣ ಮಾಡುವುದು, ಅಂಚೆಬೊಟ್ಟು ತೆಗೆಯುವುದು, ಮೂಗಿನ ಸೌಂದರ್ಯ, ದಪ್ಪ ತುಟಿ ತೆಳ್ಳಗಾಗಿಸುವುದು, ವಸಡು ಕಾಣದಂತೆ ಮಾಡುವುದು, ಹೊಟ್ಟೆ ಕರಗಿಸುವುದು. ಇವು ಹುಡುಗಿಯರ ಮೊದಲ ಆದ್ಯತೆ. ಯುವತಿಯರ ಮನಸ್ಸಿಗೆ ಒಪ್ಪುವಂತೆ ಅಂದರೆ ಸುಲಕ್ಷಣವಾಗಿ ಇರಲು ಹುಡುಗರು ಬಯಸುತ್ತಿದ್ದಾರೆ. ಸಾಲ ಮಾಡಿಯಾದರೂ ಸೈ, ಸರ್ಜರಿ ಮಾಡಿಸಿಕೊಂಡು ಸಂಗಾತಿಯ ಮನ ಮೆಚ್ಚಿಸುತ್ತಿದ್ದಾರೆ ಯುವಕರು.

ಕಾಸ್ಮೆಟಿಕ್

ಮೂರು ಚಿಕ್ಕ ಕಥೆಗಳು

ಕಥೆ1:

  • ಬೈಕ್ ಹಿಂದಿನ ಸೀಟ್​ನಲ್ಲಿ ಕುಳಿತಿದ್ದ ಭಾವಿ ಪತ್ನಿ, ಭಾವಿ ಪತಿಯ ಎದೆಯನ್ನು ಹಿಂದಿನಿಂದ ಅವುಚಿಕೊಂಡಾಗ ಆಕೆಗೆ ಅಚ್ಚರಿ ಆಗಿತ್ತು. ಇದೇನು ಹೀಗೆ? ಎಂದು ಪ್ರಶ್ನಿಸಿಯೇ ಬಿಟ್ಟಳು. ಒಮ್ಮೆಲೆ ದಿಗ್ಭ್ರಾಂತನಾಗಿ ಸಮಾಧಾನದಿಂದಲೆ ಉತ್ತರಿಸಿದ ಭಾವಿ ಪತಿ, ಒಂದೇ ದಿನದಲ್ಲಿ ಎದೆಯ ಗಾತ್ರ ಕುಗ್ಗಿಸಿಕೊಂಡು ಭಾವಿ ಪತ್ನಿಗೆ ಅಚ್ಚರಿ ಮೂಡಿಸಿದ್ದ. ಯುವ ವೈದ್ಯೆ ಆಗಿರುವ ಭಾವಿ ಪತ್ನಿ ಮಾತಿಗೆ ಕಟ್ಟು ಬಿದ್ದು ಯುವ ವೈದ್ಯ, ಭಾವಿ ಪತಿಯು ಕಾಸ್ಮೆಟಿಕ್ ಸರ್ಜರಿ ಮೂಲಕ ತನ್ನ ಎದೆಯ ದೊಡ್ಡ ಗಾತ್ರವನ್ನೇ ಚಿಕ್ಕದಾಗಿಸಿಕೊಂಡಿದ್ದ (ಗೈನೊಕಾಮೆಸ್ಟಿಯಾ).

ಕಥೆ2:

  • ಆತ ದೊಡ್ಡ ಹೊಟ್ಟೆಯ ಉದ್ಯಮಿ. ಆತನಿಗೆ ಮದುವೆ ಫಿಕ್ಸ್ ಆಯ್ತು. ಆದರೆ ಮದುವೆ ದಿನಾಂಕ ನಿಗದಿಯಾಗಿರಲಿಲ್ಲ. ಆಗಾಗ ಭಾವಿ ಪತ್ನಿಯ ಭೇಟಿಗೆ ಊರಿಗೆ ಹೋಗುತ್ತಿದ್ದ. ಆಕೆಯ ಕುಟುಂಬದವರೊಂದಿಗೆ ಮಾತನಾಡುತ್ತ ಕುಳಿತಿದ್ದಾಗ ಒಬ್ಬ ಹುಡುಗ ಬಂದು ಅಂಕಲ್ ಅಂದುಬಿಟ್ಟ. ಭಾವಿ ಪತ್ನಿಯೂ ಅಂಕಲ್ ಥರ ಕಾಣಬೇಡಿ ಈಗಲೇ. ದೊಡ್ಡ ಹೊಟ್ಟೆ ಕರಗಿಸಿಕೊಳ್ಳಿ ಎಂದು ಸಲಹೆ ಇಟ್ಟಳು. ಅಂದು ಸಂಜೆಯೇ ಊರು ಬಿಟ್ಟ ಉದ್ಯಮಿ, ಸೀದಾ ಹೋಗಿದ್ದು ಪ್ಲ್ಯಾಸ್ಟಿಕ್ ಸರ್ಜರಿ ಕ್ಲಿನಿಕ್​ಗೆ. ಒಂದೇ ದಿನ ಆಸ್ಪತ್ರೆಯಲ್ಲಿದ್ದು ‘ಸಿಕ್ಸ್ ಪ್ಯಾಕ್’ ಭಾಗ್ಯ ಪಡೆದಿದ್ದನ್ನು ಕನ್ನಡಿಯಲ್ಲಿ ನೋಡಿಕೊಂಡ. ಭಾವಿ ಪತ್ನಿಗೆ ತನ್ನ ಸಿಕ್ಸ್ ಪ್ಯಾಕ್ ಹೊಟ್ಟೆಯ ಫೋಟೋ ಕಳುಹಿಸಿ, ಭೇಷ್ ಎನಿಸಿಕೊಂಡ.

ಕಥೆ3:

  • ಒಬ್ಬ ಸೇಲ್ಸ್ ಬಾಯ್, ಅವನಿಗೆ ತಿಂಗಳಿಗೆ 23 ಸಾವಿರ ರೂ. ಸಂಬಳ. ಆತನಿಗೆ ಮದುವೆ ಫಿಕ್ಸ್ ಆಯ್ತು. ಮೂಗು ಸ್ವಲ್ಪ ಮೊಂಡು. ರಾಜಕುಮಾರನ ತರಹ ಮೂಗು ನಿಮಗೇಕಿಲ್ಲ ? ಎಂದು ಭಾವಿ ಪತ್ನಿ ಪ್ರಶ್ನಿಸಿಯೇ ಬಿಟ್ಟಳು. ಇಂಥ ಪ್ರಶ್ನೆಯಿಂದ ಕಸಿವಿಸಿಗೊಂಡ ಸೇಲ್ಸ್ ಬಾಯ್, ಎಲ್ಲೋ ಕೇಳಿದ್ದ ಪ್ಲ್ಯಾಸ್ಟಿಕ್ ಸರ್ಜರಿ ಆಸ್ಪತ್ರೆಯ ಕದ ತಟ್ಟಿದ. ವೈದ್ಯರಿಂದ ಸರ್ಜರಿಗೆ ತಗಲುವ ಖರ್ಚಿನ ಲೆಕ್ಕ ಕೇಳಿದ. ಸರ್ಜರಿ ಮಾಡಿಸಿಕೊಳ್ಳಲು ಬ್ಯಾಂಕ್​ನಲ್ಲಿ ಪರ್ಸನಲ್ ಲೋನ್ ಪಡೆದ. ಮೂಗು ಚೂಪು ಮಾಡಿಸಿಕೊಂಡ. ಕೆನ್ನೆಯ ಮೇಲೆ ಗುಳಿಯೂ ಬೀಳಿಸಿಕೊಂಡು ಭಾವಿ ಪತ್ನಿಯ ಮನದಿಂಗಿತದಂತೆ ನಡೆದುಕೊಂಡ. ಸಂಗಾತಿಯಿಂದ ಆಗಾಗ ಕೆನ್ನೆ, ಮೂಗು ಹಿಂಡಿಸಿಕೊಂಡು ‘ಕ್ಯೂಟ್ ಆಗಿದಿಯಾ ನೀ’ ಎಂದೆನಿಸಿಕೊಳ್ಳತೊಡಗಿದ.
  • ಒಬ್ಬ ಸೇಲ್ಸ್ ಬಾಯ್, ಅವನಿಗೆ ತಿಂಗಳಿಗೆ 23 ಸಾವಿರ ರೂ. ಸಂಬಳ. ಆತನಿಗೆ ಮದುವೆ ಫಿಕ್ಸ್ ಆಯ್ತು. ಮೂಗು ಸ್ವಲ್ಪ ಮೊಂಡು. ರಾಜಕುಮಾರನ ತರಹ ಮೂಗು ನಿಮಗೇಕಿಲ್ಲ ? ಎಂದು ಭಾವಿ ಪತ್ನಿ ಪ್ರಶ್ನಿಸಿಯೇ ಬಿಟ್ಟಳು. ಇಂಥ ಪ್ರಶ್ನೆಯಿಂದ ಕಸಿವಿಸಿಗೊಂಡ ಸೇಲ್ಸ್ ಬಾಯ್, ಎಲ್ಲೋ ಕೇಳಿದ್ದ ಪ್ಲ್ಯಾಸ್ಟಿಕ್ ಸರ್ಜರಿ ಆಸ್ಪತ್ರೆಯ ಕದ ತಟ್ಟಿದ. ವೈದ್ಯರಿಂದ ಸರ್ಜರಿಗೆ ತಗಲುವ ಖರ್ಚಿನ ಲೆಕ್ಕ ಕೇಳಿದ. ಸರ್ಜರಿ ಮಾಡಿಸಿಕೊಳ್ಳಲು ಬ್ಯಾಂಕ್​ನಲ್ಲಿ ಪರ್ಸನಲ್ ಲೋನ್ ಪಡೆದ. ಮೂಗು ಚೂಪು ಮಾಡಿಸಿಕೊಂಡ. ಕೆನ್ನೆಯ ಮೇಲೆ ಗುಳಿಯೂ ಬೀಳಿಸಿಕೊಂಡು ಭಾವಿ ಪತ್ನಿಯ ಮನದಿಂಗಿತದಂತೆ ನಡೆದುಕೊಂಡ. ಸಂಗಾತಿಯಿಂದ ಆಗಾಗ ಕೆನ್ನೆ, ಮೂಗು ಹಿಂಡಿಸಿಕೊಂಡು ‘ಕ್ಯೂಟ್ ಆಗಿದಿಯಾ ನೀ’ ಎಂದೆನಿಸಿಕೊಳ್ಳತೊಡಗಿದ

ಹುಡುಗರು ಹೀಗೆ ಇರಬೇಕೆಂದು ಬಹಳಷ್ಟು ಯುವತಿಯರು ಇಚ್ಛೆ ಪಡುವುದು ಸಾಮಾನ್ಯವಾಗಿದೆ. ಹಾಗಾಗಿ ಬಹಳಷ್ಟು ಯುವಕರು, ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಹಾಗೂ ಕೆಳ ಮಧ್ಯಮ ವರ್ಗದ ಜನರೂ ಸೌಂದರ್ಯಪ್ರಜ್ಞೆ ಬೆಳೆಸಿಕೊಳ್ಳುತ್ತಿದ್ದಾರೆ.

| ಡಾ.ಎಸ್.ಎಸ್. ಶಿರೋಳ ಸಹ ಪ್ರಾಧ್ಯಾಪಕರು, ಕಿಮ್ಸ್ ಪ್ಲ್ಯಾಸ್ಟಿಕ್ ಸರ್ಜರಿ ವಿಭಾಗ ಹುಬ್ಬಳ್ಳಿ

ಇನ್ನು ಹೆಚ್ಚಿನ ಮಾಹಿತಿಗಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net