ಬೆಂಗಳೂರು: ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಎರಡನೇ ಪಂಚಾಯಿತಿ ಕಟ್ಟೆಯನ್ನು ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ಸರ್ಧಿಗಳು ಮಾಡಿದ ತಪ್ಪನ್ನು ಸರಳವಾಗಿ ಅರ್ಥೈಸಿ, ಬುದ್ದಿ ಹೇಳಿದರು. ತಮ್ಮ ಖಡಕ್ ಮಾತಲ್ಲೇ ಅವರವರ ತಪ್ಪುಗಳನ್ನು ತಿಳಿ ಹೇಳಿ ಅವರವರ ಭಾವಕ್ಕೆ ಬಿಟ್ಟ ಸುದೀಪ್, ತುಕಾಲಿ ಸಂತೋಷ್ ಮಾಡಿದ ಎಡವಟ್ಟನ್ನು ಮೆಲುಕು ಹಾಕಿ ಮನೆಯವರನ್ನು ನಗೆಗಡಲಲ್ಲಿ ತೇಲಿಸಿದರು.
ಇದನ್ನೂ ಓದಿ: ಭಾರತಕ್ಕೆ ಒಟ್ಟಿಗೆ ಅಪ್ಪಳಿಸಲಿವೆ ಎರಡು ಸೈಕ್ಲೋನ್: ಇದು ಅಪರೂಪದ ವಿದ್ಯಾಮಾನ, ಹವಾಮಾನ ತಜ್ಞರ ಎಚ್ಚರಿಕೆ
ಇದೀಗ ಶನಿವಾರ ಕಿಚ್ಚನ ಪಂಚಾಯಿತಿ ಕಟ್ಟೆಯನ್ನು ಮುಗಿಸಿಕೊಂಡು ಭಾನುವಾರ ಸೂಪರ್ ಸಂಡೆಗೆ ರೆಡಿಯಾಗುತ್ತಿರುವ ಸದಸ್ಯರಿಗೆ ಹೊಸ ಟಾಸ್ಕ್ ಒಂದು ಎದುರಾಗಿದೆ. ಮನೆಯಲ್ಲಿ ಈಗಾಗಲೇ ಎರಡು ತಂಡಗಳಾಗಿ ಅಖಾಡಕ್ಕಿಳಿದಿರುವ ಸರ್ಧಿಗಳು ವಿನಯ್ ನೇತೃತ್ವದ ಮಾಣಿಕ್ಯ ಹಾಗೂ ಕಾರ್ತಿಕ್ ನೇತೃತ್ವದ ರಣಶಕ್ತಿ ತಂಡಗಳ ಮುಖೇನ ಭಾರೀ ಪೈಪೋಟಿ ಕೊಡಲು ಸಕಲ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಹೂ ಅಂತಿಯಾ ಊಹೂ ಅಂತಿಯಾ? ಎಂಬ ಆಟದಲ್ಲಿ ಮನೆ ಮಂದಿಯೆಲ್ಲಾ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಆಟದ ಸ್ವರೂಪ ಮತ್ತು ನಿಯಮಗಳು ಹೀಗಿದ್ದವು: ಇದರ ಅನುಸಾರ ಆಡುವ ಪ್ರತಿ ಸದಸ್ಯರು ಕಣ್ಣುಪಟ್ಟಿ ಧರಿಸಿ ಆರಂಭಿಕ ಸ್ಥಾನದಿಂದ ಅಂತಿಮ ಸ್ಥಾನಕ್ಕೆ ಬಂದು, ಅಲ್ಲಿಯ ಆನೆಯ ಚಿತ್ರಕ್ಕೆ ಬಾಲ ಬಿಡಿಸಬೇಕಿತ್ತು. ಆಡುವ ಪ್ರತಿ ಸದಸ್ಯರಿಗೆ ಎದುರಾಳಿ ತಂಡದ ಸದಸ್ಯರು ಕಣ್ಣುಪಟ್ಟಿ ಕಟ್ಟಿ, ಆರಂಭಿಕ ಸ್ಥಾನದಲ್ಲಿ ಸುತ್ತಿಸಿ, ಆನೆಯ ಚಿತ್ರವಿರುವ ಸ್ಥಳದತ್ತ ಬಿಡಬೇಕು. ಆಡುವ ಸದಸ್ಯ ಸಾಗುತ್ತಿರುವ ದಾರಿ ಸರಿಯೇ ಇಲ್ಲವೇ ಎಂದು ಅವರ ತಂಡದ ಸದಸ್ಯರು ಹೂಂ ಅಥವಾ ಊಹೂಂ ಎಂದು ಹೇಳುವ ಮೂಲಕ ಸೂಚಿಸಬೇಕು.
ತನ್ನ ತಂಡದವರ ಸೂಚನೆಯ ಪ್ರಕಾರ ಆಡುವ ಸದಸ್ಯ, ಆರಂಭಿಕ ಸ್ಥಾನದಿಂದ ಬಾಲವಿಲ್ಲದ ಆನೆಯ ಚಿತ್ರದ ಬಳಿ ಬಂದು ಅದಕ್ಕೆ ಬಾಲ ಬಿಡಿಸಬೇಕು. ಟಾಸ್ಕ್ ಮುಗಿಯುವ ಹೊತ್ತಿಗೆ, ಅತಿ ಹೆಚ್ಚು ಬಾರಿ ಸರಿಯಾಗಿ ಬಾಲ ಬಿಡಿಸಿದ ತಂಡ ಈ ಟಾಸ್ಕ್ ಗೆಲ್ಲುತ್ತದೆ. ಮೊದಲು ಕಣಕ್ಕಿಳಿದಿದ್ದು, ರಣಶಕ್ತಿ ತಂಡದದಿಂದ ಸಂಗೀತಾ ಶೃಂಗೇರಿ. ಅವರಿಗೆ ವಿನಯ್ ಕಪ್ಪುಪಟ್ಟಿ ಕಟ್ಟಿ ಬಿಟ್ಟರು.
ತನಿಷಾ ಅವರಿಗೆ ಸಹಾಯ ಮಾಡುತ್ತಿದ್ದರು. ಸಂಗೀತಾ ತುಂಬ ಸುಲಭವಾಗಿ ಆನೆಯ ಚಿತ್ರದ ಬಳಿ ತೆರಳಿ, ತನಿಷಾ ಅವರ ಸಂಕೇತಗಳ ಮೂಲಕ ಮೊದಲ ಆನೆಗೆ ಬಾಲ ಬಿಡಿಸಿಬಿಟ್ಟರು. ಅದಕ್ಕೆ ಎರಡೂ ತಂಡಗಳ ಚಪ್ಪಾಳೆಯೂ ಸಿಕ್ಕಿತು. ನಂತರ ಮಾಣಿಕ್ಯ ತಂಡದಿಂದ ನಮ್ರತಾ ಅಖಾಡಕ್ಕಿಳಿದರು. ಅವರ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿದ್ದು ಕಾರ್ತಿಕ್. ನಮ್ರತಾ ಸಹಾಯಕ್ಕೆ ನಿಂತಿದ್ದು, ವಿನಯ್. ನಮ್ರತಾ ನೇರವಾಗಿ ಚಿತ್ರದ ಬಳಿ ತೆರಳಿದರು.
ಇದನ್ನೂ ಓದಿ: 2003ರಿಂದ ಕಿವೀಸ್ ವಿರುದ್ಧ ಗೆದ್ದೇ ಇಲ್ಲ ಇಂದು ಗೆಲ್ಲುತ್ತೇವೆಯೇ? ಗಿಲ್ ಪ್ರಶ್ನೆಗೆ ರೋಹಿತ್ ಉತ್ತರ ವೈರಲ್
ಬಾಲ ಬಿಡಿಸುವ ಜಾಗಹುಡುಕಲು ತುಸು ಪರದಾಡಿದರು. ಆದರೆ ವಿನಯ್ ಸೂಚನೆಯ ನೆರವಿನಿಂದ ಸರಿಯಾದ ಜಾಗ ಗುರುತಿಸಿ ಬಾಲ ಬಿಡಿಸಿಯೇಬಿಟ್ಟರು. ನಂತರ ರಣಶಕ್ತಿ ತಂಡದಿಂದ ನೀತು ಕೂಡ ಸುಲಭವಾಗಿ ಚಿತ್ರದ ಬಳಿ ತೆರಳಿ ಬಾಲ ಬಿಡಿಸಿದರು. ಮಾಣಿಕ್ಯ ತಂಡದಿಂದ ಸ್ಪರ್ಧೆಗಿಳಿದ ಇಶಾನಿ. ರಾಂಪ್ ವಾಕ್ ಮಾಡಿದಷ್ಟೇ ಸಲೀಸಾಗಿ ಚಿತ್ರದ ಬಳಿ ತೆರಳಿ, ಬಾಲವನ್ನೂ ಬಿಡಿಸಿದರು. ಬಾಲ ತುಸು ಗಿಡ್ಡವಾಗಿತ್ತಷ್ಟೆ!
ಮನೆಯಲ್ಲಿನ ಸ್ಪರ್ಧಿಗಳು ಈ ಆಟದವನ್ನು ನಗುನಗುತ್ತಲೇ ಸಖತ್ ಎಂಜಾಯ್ ಮಾಡಿಕೊಂಡು ಮುಗಿಸಿದ್ದಾರೆ. ಕಡೆಯಲ್ಲಿ ಎಲ್ಲ ಸ್ಪರ್ಧಿಗಳು ತಾವು ಬಾಲ ಬಿಡಿಸಿದ ಚಿತ್ರಗಳನ್ನು ಹಿಡಿದು ನಿಂತರು. ನಾಯಕರಾದ ವಿನಯ್ ಮತ್ತು ಕಾರ್ತಿಕ್ ಚರ್ಚೆ ಮಾಡಿ ‘ರಣಶಕ್ತಿ’ ತಂಡದ ಸದಸ್ಯರೇ ಹೆಚ್ಚು ಸರಿಯಾಗಿ ಬಾಲ ಬಿಡಿಸಿದೆ ಎಂಬ ನಿರ್ಧಾರಕ್ಕೆ ಬಂದರು. ಬಳಿಕ ವಿನಯ್ ‘ರಣಶಕ್ತಿ ತಂಡ ಗೆದ್ದಿದೆ ಎಂದು ಘೋಷಿಸಿದರು.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.