More

    ಭಾರತಕ್ಕೆ ಒಟ್ಟಿಗೆ ಅಪ್ಪಳಿಸಲಿವೆ ಎರಡು ಸೈಕ್ಲೋನ್​: ಇದು ಅಪರೂಪದ ವಿದ್ಯಾಮಾನ, ಹವಾಮಾನ ತಜ್ಞರ ಎಚ್ಚರಿಕೆ

    ನವದೆಹಲಿ: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಅವಳಿ ಚಂಡಮಾರುತಗಳು ಸೃಷ್ಟಿಯಾಗುವ ಬಗ್ಗೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಟ್ಟಿಗೆ ಎರಡು ಸೈಕ್ಲೋನ್​ಗಳು ರಚನೆಯಾಗುತ್ತಿರುವುದು ಅಪರೂಪದ ವಿದ್ಯಾಮಾನವಾಗಿದ್ದು, 2018ರಲ್ಲಿ ಈ ರೀತಿ ಒಮ್ಮೆ ಸೃಷ್ಟಿಯಾಗಿತ್ತು.

    ಅರಬ್ಬಿ ಸಮುದ್ರದಲ್ಲಿ ಏಳುವ ತೇಜ್​ ಹೆಸರಿನ ಸೈಕ್ಲೋನ್​ ಗಂಭೀರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದ್ದು, ಬಂಗಾಳ ಕೊಲ್ಲಿಯಲ್ಲಿ ರಚನೆಯಾಗುವ ಹಾಮೂನ್ ಹೆಸರಿನ ಸೈಕ್ಲೋನ್​​ ಅಕಾಲಿಕ ಹಂತದಲ್ಲಿ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆಯ ಮಾಹಿತಿಯನ್ನು ನೀಡಿದ್ದಾರೆ.

    ನೈಋತ್ಯ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ತೇಜ್ ಚಂಡಮಾರುತವು ತೀವ್ರಗೊಳ್ಳುತ್ತಲೇ ಇದೆ ಮತ್ತು ಭಾನುವಾರ (ಅ.22) ಮಧ್ಯಾಹ್ನದ ವೇಳೆಗೆ ತೀವ್ರ ಚಂಡಮಾರುತವಾಗಿ ಬದಲಾಗಲಿದೆ. ಇದು ಅಂತಿಮವಾಗಿ ಒಮಾನ್‌ನ ದಕ್ಷಿಣ ಕರಾವಳಿ ಮತ್ತು ಪಕ್ಕದ ಯೆಮೆನ್‌ನ ಕಡೆಗೆ ಚಲಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

    ಏಕಕಾಲದಲ್ಲಿ, ಹಾಮೂನ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಹೊರಹೊಮ್ಮಲಿದ್ದು, ಪಶ್ಚಿಮದ ಅಡಚಣೆಯಿಂದ ಬೇರೆಡೆಗೆ ತಿರುಗುವ ಮೊದಲು ಆಂಧ್ರ ಕರಾವಳಿಯ ಹತ್ತಿರ ಚಲಿಸುತ್ತದೆ. ಅಮರಾವತಿಯ ಹವಾಮಾನ ಇಲಾಖೆ ಶುಕ್ರವಾರ ನೈಋತ್ಯ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವನ್ನು ವರದಿ ಮಾಡಿದೆ. ಅ. 23ರ ಸುಮಾರಿಗೆ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.

    ಈ ಎರಡೂ ಚಂಡಮಾರುತಗಳು ಹವಾಮಾನದ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ, ಆದರೆ, ಚಂಡಮಾರುತಗಳು ದೂರ ಸರಿಯುವುದರಿಂದ ಚೆನ್ನೈ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಸ್ವಲ್ಪ ಹವಾಮಾನ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಆದಾಗ್ಯೂ, ಖಾಸಗಿ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕೇರಳ ಮತ್ತು ತಮಿಳುನಾಡಿನ ಒಳಭಾಗಗಳಲ್ಲಿ ಅ. 23ರ ಸಂಜೆ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ.

    ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತಗಳನ್ನು ಹೆಸರಿಸಲು ಅನುಸರಿಸಿದ ಸೂತ್ರದ ಆಧಾರದ ಮೇಲೆಯೇ ಈ ಚಂಡಮಾರುತಗಳನ್ನು ಹೆಸರಿಸಲಾಗಿದೆ. ಭಾರತದ ಕರಾವಳಿಯ ಎರಡೂ ಬದಿಗಳಲ್ಲಿ ಉಷ್ಣವಲಯದ ಬಿರುಗಾಳಿಗಳು ಏಕಕಾಲದಲ್ಲಿ ಸಂಭವಿಸುವುದು ಅಪರೂಪದ ವಿದ್ಯಮಾನವಾಗಿದೆ. ಆದಾಗ್ಯೂ, ಈ ಚಂಡಮಾರುತಗಳು ತೇಜ್ ಮತ್ತು ಹಾಮೂನ್ ಆಕಾರವನ್ನು ಪಡೆದರೆ, ಅವು 2,500 ಕಿಮೀ ದೂರದಿಂದ ಬೇರ್ಪಟ್ಟು ಪ್ರತ್ಯೇಕ ಮಾರ್ಗಗಳಲ್ಲಿ ಚಲಿಸುತ್ತವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

    1000 ರೂ. ಮುಖಬೆಲೆಯ ನೋಟು ಮತ್ತೆ ಮಾರುಕಟ್ಟೆಗೆ ಬರಲಿದೆಯೇ? ಸ್ಪಷ್ಟನೆ ನೀಡಿದ ಆರ್​ಬಿಐ

    ಯುದ್ಧ ಪೀಡಿತ ಗಾಜಾಗೆ ನೆರವು ಕಳುಹಿಸಿದ ಭಾರತ: ಈಜಿಪ್ಟ್​ನ ರಫಾ ಗಡಿಯ ಮೂಲಕ ರವಾನೆ

    ಚೆಂದದ ನರ್ಸ್‌ಗಳು ನಂಗೆ ಅಜ್ಜಾ ಎನ್ನುವುದು ತ್ರಾಸ್​ ಆಗೇತಿ ಎಂದ ಕಾಂಗ್ರೆಸ್​ ಶಾಸಕ ರಾಜು ಕಾಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts