More

    2003ರಿಂದ ಕಿವೀಸ್​ ವಿರುದ್ಧ ಗೆದ್ದೇ ಇಲ್ಲ ಇಂದು ಗೆಲ್ಲುತ್ತೇವೆಯೇ? ಗಿಲ್​ ಪ್ರಶ್ನೆಗೆ ರೋಹಿತ್​ ಉತ್ತರ ವೈರಲ್​

    ನವದೆಹಲಿ: ಪಸ್ತುತ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯಲ್ಲಿ ಆತಿಥೇಯ ಭಾರತ ಅತ್ಯದ್ಭುತ ಪ್ರದರ್ಶನ ನೀಡುತ್ತಿದೆ. ಇದವರೆಗೂ ಎದುರಿಸಿದ ನಾಲ್ಕೂ ಪಂದ್ಯಗಳಲ್ಲೂ ರೋಹಿತ್​ ಶರ್ಮ ಪಡೆ ಅಮೋಘ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಭಾರತ ಸುಲಭವಾಗಿ ಜಯಿಸಿದೆ.

    ಆದರೆ, ಇದೀಗ ಭಾರತಕ್ಕೆ ನ್ಯೂಜಿಲೆಂಡ್​ ತಂಡ ಬಹುದೊಡ್ಡ ಸವಾಲಾಗಿದೆ. ಇಂದು (ಅ.22) ಮಧ್ಯಾಹ್ನ 2 ಗಂಟಗೆ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಕಿವೀಸ್​ ಪಡೆ ಕೂಡ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ, ರನ್​ ರೇಟ್​ನಲ್ಲಿ ಭಾರತವನ್ನು ಮೀರಿಸಿ, 10 ತಂಡಗಳ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

    ವಿಶ್ವಕಪ್​ ಇತಿಹಾಸ ನೋಡಿದರೆ ಕಿವೀಸ್​ ಪಡೆ ಭಾರತಕ್ಕೆ ಒಂದು ಸವಾಲಾಗಿದೆ. 2019ರ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಮನೆಗೆ ಕಳುಹಿಸಿತ್ತು. ವಿಶ್ವಕಪ್​ನಲ್ಲಿ ಇದುವರೆಗೆ ಕಿವೀಸ್​ ಮತ್ತು ಭಾರತ 9 ಪಂದ್ಯಗಳನ್ನು ಎದುರಿಸಿದ್ದು, 5 ಪಂದ್ಯಗಳಲ್ಲಿ ಕಿವೀಸ್​ ಗೆದ್ದರೆ, ಮೂರು ಪಂದ್ಯಗಳಲ್ಲಿ ಮಾತ್ರ ಭಾರತ ಗೆಲುವು ಸಾಧಿಸಿದೆ. ಉಳಿದ ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿತು.

    ಭಾರತದ ಟ್ರ್ಯಾಕ್​ ರೆಕಾರ್ಡ್​ ಈ ರೀತಿ ಇರುವಾಗ ಭಾರತದ ನಾಯಕ ರೋಹಿತ್​ ಶರ್ಮ, ತಂಡದ ಸಹ ಆಟಗಾರ ಶುಭಮನ್​ ಗಿಲ್​ನಿಂದ ಅನಿರೀಕ್ಷಿತ ಪ್ರಶ್ನೆಯೊಂದನ್ನು ಎದುರಿಸಿದ್ದಾರೆ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಸಾಧನೆ ಗಮನಾರ್ಹವಾಗಿ ಇಲ್ಲದಿರುವುದರಿಂದ ಭಾನುವಾರ (ಅ.22) ನಡೆಯುವ ಪಂದ್ಯದಲ್ಲಿ ನಾವು ಗೆಲ್ಲುತ್ತೇವೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

    2003ರಿಂದ ಐಸಿಸಿ ಟೂರ್ನಮೆಂಟ್‌ನಲ್ಲಿ ನಾವು ನ್ಯೂಜಿಲೆಂಡ್ ಅನ್ನು ಸೋಲಿಸಿಲ್ಲ ಎಂದು ಒಬ್ಬರು ಪತ್ರಿಕಾಗೋಷ್ಠಿಯಲ್ಲಿ ನನ್ನನ್ನು ಕೇಳಿದರು ಎಂದು ಶುಭಮನ್​ ಗಿಲ್​, ರೋಹಿತ್​ಗೆ ಹೇಳುತ್ತಾರೆ. ಇದಕ್ಕೆ ಉತ್ತರಿಸುವ ರೋಹಿತ್​, ಹೌದು ನಿಜ. ಆದರೆ, ಆದರೆ ನಾವೀಗ ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ನಮ್ಮ ಕಡೆಯಿಂದ ನಾವು ಮಾಡಬಹುದಾದುದು ಅಷ್ಟೆ ಎಂದಿದ್ದಾರೆ.

    ಹಾಗಾದರೆ ನಾವು ಖಂಡಿತವಾಗಿಯೂ ಭಾನುವಾರದಂದು ಪಂದ್ಯವನ್ನು ಗೆಲ್ಲುತ್ತೇವೆಯೇ ಎಂದು ಗಿಲ್​ ಪ್ರಶ್ನೆ ಮಾಡಿದಾಗ, ಉತ್ತರ ನೀಡುವ ರೋಹಿತ್​​, ನೋಡು ಗಿಲ್​, ನಾವು ಯಾವುದಕ್ಕೂ ಗ್ಯಾರಂಟಿ ಕೊಡುವಂತಹ ಕ್ರಿಕೆಟ್ ಆಡುವುದಿಲ್ಲ. ನಾವು ಮೈದಾನವನ್ನು ತಲುಪಿದಾಗ, ನಾವು ತಂಡವಾಗಿ ಮಾಡುತ್ತಿರುವುದನ್ನು ನಾವು ಮಾಡಬೇಕು. ನಾವು ತುಂಬಾ ಮುಂದೆ ಯೋಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಅಂದಹಾಗೆ ಭಾರತ ತಂಡ ಕೊನೆಯದಾಗಿ ನ್ಯೂಜಿಲೆಂಡ್​ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಗೆದ್ದಿರುವುದು 2003ರ ಏಕದಿನ ವಿಶ್ವಕಪ್​ನಲ್ಲಿ! ಆ ಬಳಿಕ 2007, 2016, 2021ರ ಟಿ20 ವಿಶ್ವಕಪ್​ ಲೀಗ್​ ಪಂದ್ಯ ಮತ್ತು 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕಿವೀಸ್​ಗೆ ಶರಣಾಗಿದೆ. 2021ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲೂ ಭಾರತ ಮುಗ್ಗರಿಸಿತ್ತು. ಒಟ್ಟಾರೆಯಾಗಿ ಐಸಿಸಿ ಟೂರ್ನಿಯ 13 ಮುಖಾಮುಖಿಗಳಲ್ಲಿ ಭಾರತ 3ರಲ್ಲಿ ಮಾತ್ರ ಜಯಿಸಿದೆ. ತವರಿನಲ್ಲೇ ನಡೆದ 1987ರ ಏಕದಿನ ವಿಶ್ವಕಪ್​ನಲ್ಲಿ 2 ಬಾರಿ ಕಿವೀಸ್​ ವಿರುದ್ಧ ಗೆದ್ದಿರುವುದು ಭಾರತಕ್ಕೆ ಈಗ ಸ್ಫೂರ್ತಿಯಾಗಬೇಕಿದೆ. (ಏಜೆನ್ಸೀಸ್​)

    ಐಸಿಸಿ ಟೂರ್ನಿಯಲ್ಲಿ ಕಿವೀಸ್​ ವಿರುದ್ಧ 20 ವರ್ಷಗಳಿಂದ ಗೆಲ್ಲದ ಕೊರತೆ ನೀಗಿಸುವುದೇ ರೋಹಿತ್​ ಪಡೆ?

    ವಿಶ್ವಕಪ್​ನಲ್ಲಿ ಅಜೇಯ ಪಟ್ಟ ಕಾಯ್ದುಕೊಳ್ಳಲು ಇಂದು ಭಾರತ-ಕಿವೀಸ್​ ಕಾದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts