More

    ಐಸಿಸಿ ಟೂರ್ನಿಯಲ್ಲಿ ಕಿವೀಸ್​ ವಿರುದ್ಧ 20 ವರ್ಷಗಳಿಂದ ಗೆಲ್ಲದ ಕೊರತೆ ನೀಗಿಸುವುದೇ ರೋಹಿತ್​ ಪಡೆ?

    ಧರ್ಮಶಾಲಾ: ಏಕದಿನ ವಿಶ್ವಕಪ್​ನಲ್ಲಿ ಇದುವರೆಗೆ ಅಜೇಯವಾಗಿರುವ ತಂಡಗಳೆಂದರೆ ಆತಿಥೇಯ ಭಾರತ ಹಾಗೂ ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​. ಸತತ 4 ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಇವೆರಡು ತಂಡಗಳು ಭಾನುವಾರ ನಯನಮನೋಹರವಾದ ಎಚ್​ಪಿಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಇನ್ನು ಒಂದು ತಂಡಕ್ಕೆ ಮಾತ್ರ ಟೂರ್ನಿಯಲ್ಲಿ ಅಜೇಯ ಓಟ ವಿಸ್ತರಿಸುವ ಅವಕಾಶವಿದೆ. ಆದರೆ ಕಳೆದ 20 ವರ್ಷಗಳಿಂದ ಕಿವೀಸ್​ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ಕೊರತೆ ಭಾರತವನ್ನು ಕಾಡುತ್ತಿದೆ.

    ಭಾರತ ತಂಡ ಕೊನೆಯದಾಗಿ ನ್ಯೂಜಿಲೆಂಡ್​ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಗೆದ್ದಿರುವುದು 2003ರ ಏಕದಿನ ವಿಶ್ವಕಪ್​ನಲ್ಲಿ! ಆ ಬಳಿಕ 2007, 2016, 2021ರ ಟಿ20 ವಿಶ್ವಕಪ್​ ಲೀಗ್​ ಪಂದ್ಯ ಮತ್ತು 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕಿವೀಸ್​ಗೆ ಶರಣಾಗಿದೆ. 2021ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲೂ ಭಾರತ ಮುಗ್ಗರಿಸಿತ್ತು. ಒಟ್ಟಾರೆಯಾಗಿ ಐಸಿಸಿ ಟೂರ್ನಿಯ 13 ಮುಖಾಮುಖಿಗಳಲ್ಲಿ ಭಾರತ 3ರಲ್ಲಿ ಮಾತ್ರ ಜಯಿಸಿದೆ. ತವರಿನಲ್ಲೇ ನಡೆದ 1987ರ ಏಕದಿನ ವಿಶ್ವಕಪ್​ನಲ್ಲಿ 2 ಬಾರಿ ಕಿವೀಸ್​ ವಿರುದ್ಧ ಗೆದ್ದಿರುವುದು ಭಾರತಕ್ಕೆ ಈಗ ಸ್ಫೂರ್ತಿಯಾಗಬೇಕಿದೆ.

    ವೇಗದ ಬೌಲಿಂಗ್-ಸ್ನೇಹಿ ಪಿಚ್​
    ಬೆಟ್ಟಗುಡ್ಡಗಳ ನಡುವೆ ಇರುವ ಎಚ್​ಪಿಸಿಎ ಕ್ರೀಡಾಂಗಣದ ಪಿಚ್​ ವೇಗದ ಬೌಲರ್​ಗಳಿಗೆ ಸಹಕಾರಿಯಾಗುವ ನಿರೀಕ್ಷೆ ಇದೆ. ಚೆಂಡಿನ ಚಲನೆಗೆ ಗಾಳಿಯ ನೆರವು ಲಭಿಸುವುದು ಇದಕ್ಕೆ ಕಾರಣ. ಉಭಯ ತಂಡಗಳೂ ಅನುಭವಿ ವೇಗಿಗಳನ್ನು ಹೊಂದಿರುವುದರಿಂದ ಪಂದ್ಯ ಕುತೂಹಲ ಕೆರಳಿಸಿದೆ. ಭಾರತೀಯ ಬ್ಯಾಟರ್​ಗಳಿಗೆ ಟ್ರೆಂಟ್​ ಬೌಲ್ಟ್​, ಮ್ಯಾಟ್​ ಹೆನ್ರಿ, ಲಾಕಿ ಗ್ಯುರ್ಸನ್​ ಸವಾಲಾಗಲಿದ್ದರೆ, ಕಿವೀಸ್​ ಬ್ಯಾಟರ್​ಗಳಿಗೆ ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ಮೊಹಮದ್​ ಶಮಿ ಕಂಟಕವಾಗಬಲ್ಲರು.

    ವಿಶ್ವಕಪ್​ನಲ್ಲಿ ‘ಓಂ’ ಬರೆದ ಬ್ಯಾಟ್​ನಲ್ಲಿ ಆಡುತ್ತಿದ್ದಾರೆ ದಕ್ಷಿಣ ಆಫ್ರಿಕಾ ಸ್ಪಿನ್ನರ್​ ಕೇಶವ್​ ಮಹಾರಾಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts