

ನವದೆಹಲಿ: ಏಕದಿನ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡುತ್ತಿರುವ ಭಾರತ ಮೂಲದ ಸ್ಪಿನ್ನರ್ ಕೇಶವ್ ಮಹಾರಾಜ್ ಬ್ಯಾಟ್ ಮೇಲೆ ಓಂ ಎಂದು ಬರೆಸಿರುವುದು ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದೆ.
ನೆದರ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದ ವೇಳೆ ದಣ ಆಫ್ರಿಕಾದ 38 ರನ್ ಸೋಲಿನ ನಡುವೆ ಕೊನೇ ಹಂತದಲ್ಲಿ 40 ರನ್ ಸಿಡಿಸಿ ಹೋರಾಟ ತೋರಿದ ಕೇಶವ್, ಬ್ಯಾಟ್ ಮೇಲೆ ಓಂ ಎಂದು ಬರೆದಿರುವುದು ಕ್ರಿಕೆಟ್ ಪ್ರೇಮಿಗಳ ಕಣ್ಣಿಗೆ ಬಿದ್ದಿತ್ತು. ಬಳಿಕ ಅವರ ಬ್ಯಾಟ್ ಚಿತ್ರ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದ ಹಾಗೆ ಉತ್ತರ ಪ್ರದೇಶದ ಸುಲ್ತಾನ್ಪುರ ಮೂಲದ ಕೇಶವ್ ಹಿಂದು ಧಾರ್ಮಿಕ ನಂಬಿಕೆಗಳಿಂದ ಗಮನಸೆಳೆದಿರುವುದು ಇದೇ ಮೊದಲೇನಲ್ಲ. ವಿಕೆಟ್ ಬಿದ್ದಾಗಲೆಲ್ಲ ಕೈಮುಗಿದು ನಮಿಸುವ ಅವರು, ಭಾರತ ಪ್ರವಾಸದ ವೇಳೆ ಸ್ಥಳಿಯ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ವಿಶ್ವಕಪ್ಗೆ ಮುನ್ನ ಅಭ್ಯಾಸ ಪಂದ್ಯಕ್ಕಾಗಿ ಕೇರಳದ ತಿರುವನಂತಪುರಕ್ಕೆ ಹೋಗಿದ್ದಾಗ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.