More

    ಪ್ಯಾಲೆಸ್ತೇನಿಯನ್ನರನ್ನು ಸಿನಾಯ್ ದ್ವೀಪಕ್ಕೆ ಓಡಿಸುವುದನ್ನು ಒಪ್ಪಲಾಗದು: ಅರಬ್​ ನಾಯಕರು

    ಕೈರೋ(ಈಜಿಪ್ಟ್​): ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಹಮಾಸ್ ಯುದ್ಧವನ್ನು ನಿಲ್ಲಿಸಿ, ಶಾಂತಿ ನೆಲೆಸಲು ಕಂಡುಕೊಳ್ಳಬೇಕಾಗಿರುವ ಮಾರ್ಗೋಪಾಯಗಳ ಕುರಿತು ಚರ್ಚಿಸಲು ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಹಲವು ಮುಸ್ಲಿಂ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಇಸ್ರೇಲ್ ವಿರುದ್ಧ ಅರಬ್​ ರಾಷ್ಟ್ರಗಳ ನಾಯಕರು ಅಸಮಾದಾನ ವ್ಯಕ್ತಪಡಿಸಿದರು.

    ಇದನ್ನೂ ಓದಿ: ವೆಸ್ಟ್​ ಬ್ಯಾಂಕ್​ನಲ್ಲಿ ಮಸೀದಿ ಕೆಳಗಿದ್ದ ಹಮಾಸ್​ ನೆಲೆ ಮೇಲೆ ಇಸ್ರೇಲ್​ ದಾಳಿ: ಸ್ಥಳದ ರೇಖಾಚಿತ್ರದಲ್ಲಿ ಸ್ಫೋಟಕ ಮಾಹಿತಿ

    ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸ್ಸಿ ಮಾತನಾಡಿ, ಗಾಜಾದ 2.3 ಮಿಲಿಯನ್ ಪ್ಯಾಲೆಸ್ತೇನಿಯನ್ನರನ್ನು ಸಿನಾಯ್ ಪರ್ಯಾಯ ದ್ವೀಪಕ್ಕೆ ಓಡಿಸುವ ಮಾತನ್ನು ಒಪ್ಪಲಾಗದು. ಪ್ಯಾಲೆಸ್ತೀನ್ ನಾಶ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಯುದ್ಧದಲ್ಲಿ ಸಾವಿರಾರು ಜನ ಮೃತಪಟ್ಟಿದ್ದು, 3ನೇ ವಾರಕ್ಕೆ ಕಾಲಿಟ್ಟಿದ್ದರೂ ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಜೋರ್ಡಾನ್‌ ದೊರೆ ಅಬ್ದುಲ್ಲಾ ಮಾತನಾಡಿ, ಈ ಹಿಂದಿನ ಮಧ್ಯಪ್ರಾಚ್ಯ ಯುದ್ಧಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲೆಸ್ತೇನಿಯನ್ನರು ಸ್ಥಳಾಂತರಗೊಂಡಿದ್ದನ್ನು ಕಂಡಿದ್ದೇವೆ, ಈಗ ಇಸ್ರೇಲ್ ಮಾಡುತ್ತಿರುವುದು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಯುದ್ಧಾಪರಾಧವಾಗಿದೆ. ನಮಗೆಲ್ಲರಿಗೂ ಇದು ಎಚ್ಚರಿಕೆ ಸಂದೇಶವಾಗಿದೆ ಎಂದು ಹೇಳಿದರು.

    ಗಾಜಾದಲ್ಲಿ ಇಸ್ರೇಲ್ ಆಕ್ರಮಣವನ್ನು ನಿಲ್ಲಿಸುವಂತೆ ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಕರೆ ನೀಡಿದರು. ಪ್ಯಾಲೇಸ್ಟಿನಿಯನ್ನರನ್ನು ಕರಾವಳಿ ಪ್ರದೇಶದಿಂದ ಹೊರಹಾಕುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು. “ನಾವು ಬಿಡುವುದಿಲ್ಲ, ನಾವು ನಮ್ಮ ಭೂಮಿಯಲ್ಲಿ ಉಳಿಯುತ್ತೇವೆ” ಎಂದು ಅವರು ಸಭೆಯಲ್ಲಿ ಘೋಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts