ಚೆನೈ: ಸದ್ಯ ತಮಿಳಿನಲ್ಲಿ ಬಿಡುಗಡೆಯಾಗಲಿರುವ ನಟ ವಿಜಯ್ ಸೇತುಪತಿ ಅವರ ಸಿನಿಮಾ 'ಕಡೈಸಿ ವಿವಸಾಯಿ' ವಿವಾದಕ್ಕೆ ಸಿಲುಕಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಈ ಸಿನಿಮಾದ ವಿರುದ್ಧ ಸಂಗೀತ ನಿರ್ದೇಶಕರ ಸಂಘಕ್ಕೆ ದೂರು ದಾಖಲಿಸಿದ್ದಾರೆ. ಅಂದಹಾಗೆ, ಈ ಸಿನಿಮಾಗೆ ಇಳಯರಾಜ ನೀಡಿದ ಹಿನ್ನೆಲೆ ಸಂಗೀತವನ್ನು ಅವರಿಗೆ ಹೇಳದೆ ಕೇಳದೆ ರಿಲೀಸ್ ಮಾಡಿದ್ದಾರೆ. ಜೊತೆಗೆ, ಇಳಯರಾಜಗೆ ತಿಳಿಸದೆ ಈ ಸಿನಿಮಾ ತಂಡ ಬೇರೆ ಸಂಗೀತ ನಿರ್ದೇಶಕರನ್ನು ಸಿನಿಮಾಗೆ ಕಲಸ ಮಾಡಲು ತೆಗೆದುಕೊಂಡಿದ್ದಾರಂತೆ.
ಇದನ್ನೂ ಓದಿ: ಹೋಟೆಲ್ಗೆ ಬಂದು ಅಮಾಯಕನಂತೆ ನಿಂತೇ ಇದ್ದ, ನೋಡ್ತನೋಡ್ತ ಮೊಬೈಲ್ಫೋನ್ ಕದ್ದ, ಏನೂ ಆಗಿಲ್ಲ ಎಂಬಂತೆ ಹೋದ…
'ಕಡೈಸಿ ವಿವಸಾಯಿ' ಸಿನಿಮಾಗೆಂದು ಸಂಗೀತ ನಿರ್ದೇಶಕರಾಗಿ ಇಳಯರಾಜ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ನಂತರ ಇಳಯರಾಜ ಕೊಟ್ಟ ಒಂದು ಹಿನ್ನೆಲೆ ಸಂಗೀತ ಇಷ್ಟವಾಗದೆ ನಿರ್ದೇಶಕ ಎಂ.ಮಣಿಕಂಠನ್ ಇಳಯರಾಜ ಅವರಿಗೆ ಅದನ್ನು ಸ್ವಲ್ಪ ಬದಲಿಸಲು ಹೇಳಿದ್ದಾರೆ. ಅದಕ್ಕೆ ಇಳಯರಾಜ ಒಪ್ಪದ ಕಾರಣ ನಿರ್ದೇಶಕ ಮತ್ತು ಅವರ ನಡುವೆ ವೈಮನಸ್ಸು ಉಂಟಾಗಿದೆ.
ಇದರ ನಂತರ, ಈ ಸಿನಿಮಾ ತಂಡ ಇಳಯರಾಜರಿಗೆ ಗೊತ್ತಿಲ್ಲದೆ ಬೇರೆ ಸಂಗೀತ ನಿರ್ದೇಶಕರನ್ನು ತೆಗೆದುಕೊಂಡು, ಇಳಯರಾಜರು ನೀಡಿದ ಹಿನ್ನೆಲೆ ಸಂಗೀತವನ್ನು ಹೊಸ ಸಂಗೀತ ನಿರ್ದೇಶಕರಿಂದ ಬದಲಿಸಿ ರಿಲೀಸ್ ಮಾಡಿದ್ದಾರೆ. ಇದು ಇಳಯರಾಜರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…
ನಟ ವಿಜಯ್ ಸೇತುಪತಿ ಒಟ್ಟಿಗೆ ಯೋಗಿ ಬಾಬು, ಮುನೀಶ್ವರನ್ ಮತ್ತು ಹಲವು ತಾರೆಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿಯೇ ಬಿಡುಗಡೆಯಾಬೇಕಿದ್ದ ಈ ಕೃಷಿ ಆಧರಿತ ಸಿನಿಮಾ ಜನವರಿ 2022ರಲ್ಲಿ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.