More

    ಹೋಟೆಲ್​ಗೆ ಬಂದು ಅಮಾಯಕನಂತೆ ನಿಂತೇ ಇದ್ದ, ನೋಡ್ತನೋಡ್ತ ಮೊಬೈಲ್​ಫೋನ್​ ಕದ್ದ, ಏನೂ ಆಗಿಲ್ಲ ಎಂಬಂತೆ ಹೋದ…

    ಬೆಂಗಳೂರು: ಎಂಥೆಂಥ ಕಳ್ಳರಿರುತ್ತಾರೆ, ಹೇಗ್ಹೇಗೆ ಕಳವು ಮಾಡುತ್ತಾರೆ ಎಂಬುದಕ್ಕೆ ಇದೂ ಒಂದು ಉದಾಹರಣೆ. ಮಾತ್ರವಲ್ಲ, ಇನ್ನುಳಿದವರಿಗೆ ಒಂದು ಎಚ್ಚರಿಕೆ ಗಂಟೆ. ನಮ್ಮದೇ ಜಾಗ, ಯಾರು ಮುಟ್ಟುತ್ತಾರೆ ಎಂದುಕೊಂಡು ಎಲ್ಲೆಂದರಲ್ಲಿ ಏನನ್ನಾದರೂ ಇಟ್ಟರೆ ಏನಾಗುತ್ತದೆ ಎಂಬುದಕ್ಕಿದು ಪಾಠ ಕೂಡ.

    ಇದನ್ನೂ ಓದಿ: ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…

    ಬೆಂಗಳೂರಿನ ಯಶವಂತಪುರದ ‘ಕಾಫಿ ಸಂತೆ’ ಎಂಬ ಹೋಟೆಲ್​ಗೆ ಗ್ರಾಹಕನಂತೆ ಬಂದವ, ಅಮಾಯಕನಂತೆ ಕೆಲವು ಕ್ಷಣ ನಿಂತು ನೋಡನೋಡುತ್ತಿದ್ದಂತೆ ಹೋಟೆಲ್​ ಸಿಬ್ಬಂದಿಯದ್ದೇ ಮೊಬೈಲ್​ಫೋನ್​ ಎಗರಿಸಿಕೊಂಡು ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಸರ್ಕಾರಿ ಕಾಲೇಜು ಗೋಡೆಗಳಿಗೆ ಬಣ್ಣ ಬಳಿದ ನಟಿ ನೀತೂ ಶೆಟ್ಟಿ!

    ಹೋಟೆಲ್​ನಲ್ಲಿ ಕಾಫಿ-ಟೀ ಹಾಕಿ ಕೊಡುವವ ಕಾಫಿ ಫಿಲ್ಟರ್ ಮೇಲಿಟ್ಟಿದ್ದ ಮೊಬೈಲ್​ಫೋನನ್ನು ಆತ ತಿರುಗಿ ಆ ಕಡೆ ಹೋಗಿ ಮರಳುವಷ್ಟರಲ್ಲಿ ಈ ಕಳ್ಳ ಕದ್ದುಕೊಂಡು ಏನೂ ಆಗಿಲ್ಲ ಎಂಬಂತೆ ಆರಾಮವಾಗಿ ನಡೆದುಕೊಂಡು ಹೋಗಿದ್ದಾನೆ. ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts