More

    ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲೇ ಹರಡಿತು ಒಮಿಕ್ರಾನ್!: ಎಲ್ಲವೂ ಗುಟ್ಟುಗುಟ್ಟು.. ಮಾಡಲಾಯಿತೇ ನಿರ್ಲಕ್ಷ್ಯ?

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನ.21ರಿಂದ ನ.23ರವೆರಗೆ ಖಾಸಗಿ ಹೋಟೆಲ್‌ನಲ್ಲಿ ನಡೆದ ವೈದ್ಯರ ಅಂತಾರಾಷ್ಟ್ರೀಯ ಸಮ್ಮೇಳನದಿಂದಲೇ ದೇಶದಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಲು ಮೂಲ ಕಾರಣವಾಗಿದೆ ಎಂದು ತಿಳಿದುಬಂದಿದೆ.

    ರಾಜಧಾನಿಯ ಖಾಸಗಿ ಹೋಟೆಲ್‌ನಲ್ಲಿ ವಿವಿಧ ದೇಶಗಳ ವೈದ್ಯರನ್ನು ಒಳಗೊಂಡ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನ ನಡೆಸಲಾಗಿದೆ. ಅದರಲ್ಲಿ ನ.20ರಿಂದ ಬಂದಿದ್ದ ಆಫ್ರಿಕದ ವೈದ್ಯರು ಭಾಗವಹಿಸಬೇಕಿತ್ತು. ಆದರೆ, ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಕ್ವಾರಂಟೈನ್ ಆಗಿದ್ದರು. ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ವರದಿ ಬಂದಿದೆ. ಇದನ್ನು ಮುಂದಿಟ್ಟುಕೊಂಡು ವೈದ್ಯರ ಸಮ್ಮೇಳನದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ.

    ಇದನ್ನೂ ಓದಿ: ಕಾಂಪ್ರೊಮೈಸ್ ಅನ್ನೋದು​ ಇಲ್ಲವೇ ಇಲ್ಲ ಎಂದ ಅರ್ಜುನ್ ಸರ್ಜಾ: ಮೀಟೂ ಪ್ರಕರಣ ಕುರಿತು ಏನೂ ಹೇಳದೆ ‘ಸತ್ಯ’ ತೆರೆದಿಟ್ರು..

    ಇನ್ನು ವೈದ್ಯನಾಗಿದ್ದರಿಂದ ಪ್ರಭಾವ ಬಳಸಿಕೊಂಡು ಜೀನೋಮಿಕ್ ಪರೀಕ್ಷಾ ವರದಿ ಬರುವ ಮುಂಚೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಅವರೊಂದಿಗೆ ಪಾಲ್ಗೊಂಡ ನಗರದ ಪುಟ್ಟೇನಹಳ್ಳಿಯ ವೈದ್ಯನಿಗೂ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ರೂಪಾಂತರಿ ವೈರಸ್ ನಗರದಲ್ಲಿ ಹರಡುತ್ತಿದೆ.

    ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಮೂರು ದಿನಕ್ಕೆ 264 ಸಂಪರ್ಕಿತರು: ದಕ್ಷಿಣ ಆಫ್ರಿಕದಿಂದ ಬಂದಿದ್ದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟಿದ್ದು, ಹೋಟೆಲ್ ಕ್ವಾರಂಟೈನ್ ಆಗಿದ್ದರೂ 24 ಪ್ರಾಥಮಿಕ ಮತ್ತು 240 ಮಂದಿ ದ್ವಿತೀಯ ಸಂಪರ್ಕಕ್ಕೆ ಬಂದಿರುವುದು ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಇನ್ನು ಸ್ಥಳೀಯ ಸೋಂಕಿತ ವ್ಯಕ್ತಿ (ವೈದ್ಯ)ಯ ಸಂಪರ್ಕಕ್ಕೂ 218 ಮಂದಿ ಸಂಪರ್ಕಕ್ಕೆ ಬಂದಿದ್ದು, ಅವರಲ್ಲಿ 5 ಜನರಿಗೆ ಸೋಂಕು ದೃಢಪಟ್ಟಿದೆ. ಇವರ ಮನೆಗಳನ್ನು ಬಿಬಿಎಂಪಿ ಸೀಲ್‌ಡೌನ್ ಮಾಡಿದೆ. ವಿವಿಧೆಡೆ ನಗರದ ವಿವಿಧ ಆಸ್ಪತ್ರೆಗಳನ್ನು ಪಾಲಿಕೆ ಸೀಲ್‌ಡೌನ್ ಮಾಡುತ್ತಿದ್ದು, ಜನರಿಗೆ ಆತಂಕ ಹೆಚ್ಚಾಗಿದೆ.

    ಇದನ್ನೂ ಓದಿ: ಯಾವ ಗುಂಪಿನ ರಕ್ತದವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಅಧಿಕ?; ಇಲ್ಲಿದೆ ನೋಡಿ ಮಾಹಿತಿ…

    ಎಲ್ಲವೂ ಗುಟ್ಟುಗುಟ್ಟು: ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡಬೇಕಾದ ವೈದ್ಯರೇ ಜಾಗತಿಕವಾಗಿ ಭಯ ಹುಟ್ಟಿಸಿರುವ ಒಮಿಕ್ರಾನ್ ಸೋಂಕು ದೇಶದಲ್ಲಿ ಹರಡಲು ಕಾರಣವಾಗಿದ್ದಾರೆ. ಇನ್ನು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಅನುಮಾನಗಳೂ ಕಾಡುತ್ತಿವೆ. ವೈದ್ಯರ ಸಮ್ಮೇಳನದಲ್ಲಿ ನೂರಾರು ವೈದ್ಯರು, ಹೋಟೆಲ್ ಸಿಬ್ಬಂದಿ ಸೇರಿ ಹಲವು ಜನರು ಒಂದೆಡೆ ಸೇರಿದ್ದರು. ಇನ್ನು ಈಗಾಗಲೆ ಒಮಿಕ್ರಾನ್ ಸೋಂಕಿತ ವ್ಯಕ್ತಿ ನಗರಕ್ಕೆ ಬಂದು ಹೋಗಿ 12 ದಿನಗಳಾಗಿದ್ದು, ಈ ವೈರಸ್ ಎಷ್ಟು ಜನರಿಗೆ ಹರಡಿದೆ ಎಂಬುದು ಊಹಿಸಲೂ ಅಸಾಧ್ಯವಾಗಿದೆ. ಒಮಿಕ್ರಾನ್ ಸೋಂಕಿತ ವ್ಯಕ್ತಿ ಮತ್ತು ಆತನ ಸಂಪರ್ಕಕ್ಕೆ ಬಂದವರು ಎಲ್ಲೆಲ್ಲಿ ಸಂಚಾರ ಮಾಡಿದ್ದಾರೆ ಎಂದು ತಿಳಿದುಕೊಂಡು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಹೊಸ ಸೋಂಕು ನಿಯಂತ್ರಣ ಮಾಡುವುದು ಪಾಲಿಕೆಗೆ ಸವಾಲಾಗಿದೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts