More

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಬೆಂಗಳೂರು: ಜಗತ್ತಿನಲ್ಲಿ ಹತ್ತಕ್ಕೂ ಅಧಿಕ ದೇಶಗಳಲ್ಲಿ ಒಮಿಕ್ರಾನ್​ ಪತ್ತೆಯಾಗಿದ್ದರೂ ಭಾರತದಲ್ಲಿ ಅದರ ಸುಳಿವೇ ಇರಲಿಲ್ಲ. ಆದರೆ ಇಂದು ಅದರಿಂದಾಗಿ ಜಗತ್ತೇ ಒಮ್ಮೆ ಭಾರತದತ್ತ, ಅದರಲ್ಲೂ ಕರ್ನಾಟಕದ ಬೆಂಗಳೂರಿನತ್ತ ತಿರುಗಿ ನೋಡುವಂತಾಗಿದೆ. ಬೆಂಗಳೂರಿನಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ನಿಂದ ದೃಢಪಟ್ಟ ಒಮಿಕ್ರಾನ್​ ಸೋಂಕಿನಿಂದಾಗಿ ಭಾರತದಲ್ಲೇ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾದಂತಾಗಿದೆ.

    ಇದನ್ನೂ ಓದಿ: ಮನುಷ್ಯ ಇದನ್ನೆಲ್ಲ ತಿಂದರೆ ಭೂಮಿಗೇ ಆಪತ್ತು!; ಸಮೀಕ್ಷೆಯಿಂದ ಆತಂಕಕಾರಿ ಮಾಹಿತಿ ಹೊರಬಿತ್ತು..

    ಆದರೆ ಭಾರತದಲ್ಲಿನ ಮೊದಲ ಒಮಿಕ್ರಾನ್​ ಸೋಂಕಿತ ಎಂಬ ಹಣೆಪಟ್ಟಿಗೆ ಒಳಗಾಗಿರುವ ವ್ಯಕ್ತಿ ಈಗ ಭಾರತದಲ್ಲಿಲ್ಲ, ಅಸಲಿಗೆ ಆತ ಭಾರತೀಯನೂ ಅಲ್ಲ ಎನ್ನಲಾಗಿದೆ. ಅದಾಗ್ಯೂ ಭಾರತದಲ್ಲಿನ ಮೊದಲ ಒಮಿಕ್ರಾನ್ ಪ್ರಕರಣ ಕರ್ನಾಟಕದ ಬೆಂಗಳೂರಿನಲ್ಲಿ ಪತ್ತೆಯಾಗುವ ಮೂಲಕ ಬೆಂಗಳೂರಿಗೆ ವಿನಾಕಾರಣ ಮೊದಲ ಒಮಿಕ್ರಾನ್ ಸೋಂಕಿನ ಕಳಂಕ ತಟ್ಟಿತೇ ಎಂಬ ಮಾತುಗಳು ಕೇಳಲಾರಂಭಿಸಿವೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ 

    ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ನೀಡಿರುವ ಮಾಹಿತಿ ಪ್ರಕಾರ 66 ವರ್ಷದ ವ್ಯಕ್ತಿಯೊಬ್ಬ ದುಬೈ ಮೂಲಕ ದಕ್ಷಿಣ ಆಫ್ರಿಕದಿಂದ ನ. 20ರಂದು ಬೆಂಗಳೂರಿಗೆ ಬಂದಿದ್ದ. ಆತ ದಕ್ಷಿಣ ಆಫ್ರಿಕದಿಂದ ನೆಗೆಟಿವ್ ವರದಿ ಹಿಡಿದುಕೊಂಡು ಬಂದಿದ್ದು, ಇಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿಗೆ ಬಂದಿಳಿದ ಬಳಿಕ ಆತ ಹೋಟೆಲ್​ವೊಂದರಲ್ಲಿ ತಂಗಿದ್ದ. ಆತನಿಂದ ಪಡೆದಿದ್ದ ಸ್ಯಾಂಪಲ್​ನಲ್ಲಿ ಸೋಂಕಿರುವುದು ನಂತರ ದೃಢಪಟ್ಟಿತ್ತು. ಅದಾಗ್ಯೂ ಆತ ಯಾವುದೇ ರೋಗಲಕ್ಷಣ ಹೊಂದಿರದಿದ್ದರೂ ಐಸೋಲೇಷನ್ ಆಗುವಂತೆ ಸೂಚಿಸಲಾಗಿತ್ತು.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ನ. 22ರಂದು ಆತನ ಸ್ಯಾಂಪಲನ್ನು ಬಿಬಿಎಂಪಿ ಮೂಲಕ ಜೀನೋಮಿಕ್ ಸೀಕ್ವೆನ್ಸಿಂಗ್​ಗೆ ಕಳುಹಿಸಲಾಗಿತ್ತು. ಮತ್ತೊಂದೆಡೆ ನ. 23ರಂದು ಆತ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗೆಟಿವ್ ವರದಿ ಬಂದಿತ್ತು. ನ. 27ರಂದು ಆ ನೆಗೆಟಿವ್ ವರದಿ ಹಿಡಿದುಕೊಂಡು ಆತ ಮಧ್ಯರಾತ್ರಿ ವಿಮಾನನಿಲ್ದಾಣಕ್ಕೆ ತೆರಳಿದ್ದು, ಅಲ್ಲಿಂದ ದುಬೈಗೆ ತೆರಳಿದ್ದಾನೆ.

    ಆದರೆ ಇಂದು ಎಲ್ಲೆಡೆ ಭಾರತದ ಮೊದಲ ಒಮಿಕ್ರಾನ್ ಪ್ರಕರಣ ಕರ್ನಾಟಕದ ಬೆಂಗಳೂರಿನಲ್ಲಿ ಪತ್ತೆ ಎಂದು ದೊಡ್ಡ ಸುದ್ದಿಯಾಗುವ ಹೊತ್ತಿಗೆ ಆತ ಭಾರತದಲ್ಲೇ ಇಲ್ಲ. ಅಸಲಿಗೆ ಆತ ಭಾರತೀಯನೂ ಅಲ್ಲ ಎಂಬ ಮಾಹಿತಿಯಿದ್ದು, ವಿನಾಕಾರಣ ಬೆಂಗಳೂರು ದೇಶದ ಮೊದಲ ಒಮಿಕ್ರಾನ್​ ಪ್ರಕರಣದ ಕಳಂಕಕ್ಕೆ ಒಳಗಾಗುವಂತಾಗಿದೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!
    ಬಿಬಿಎಂಪಿ ವರದಿಯ ತುಣುಕು

    ಮತ್ತೊಂದೆಡೆ ದೇಶಕ್ಕೆ ಒಮಿಕ್ರಾನ್​ ಪ್ರವೇಶ ಮಾಡಿರುವುದು ಬಿಬಿಎಂಪಿ ಸಂಗ್ರಹಿಸಿದ ಸ್ಯಾಂಪಲ್ ಹಾಗೂ ಅದರ ಫಾಲೋವಪ್ ಟೆಸ್ಟ್​ಗಳಿಂದಾಗಿ ಪತ್ತೆಯಾಗಿದ್ದು, ಅದು ಮತ್ತಷ್ಟು ಜನರಿಗೆ ಹರಡದಂತೆ, ಬಂದಿರುವ ಸೋಂಕನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಲು ನೆರವಾಗಿದೆ. ಆ ಮಟ್ಟಿಗೆ ಬಿಬಿಎಂಪಿಯ ಕಾರ್ಯ ಹಲವರಿಂದ ಶ್ಲಾಘನೆಗೆ ಪಾತ್ರವಾಗಿದೆ.

    ಒಮಿಕ್ರಾನ್ ಸೋಂಕಿತರ​ ಸಂಪರ್ಕಿತ ಐವರಲ್ಲಿ ಕೋವಿಡ್​ ಸೋಂಕು!; ನಗರದಲ್ಲಿ ಮತ್ತಷ್ಟು ಜನರಲ್ಲಿ ಒಮಿಕ್ರಾನ್​ ಸೋಂಕಿರುವ ಶಂಕೆ…

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಯಾವ ಗುಂಪಿನ ರಕ್ತದವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಅಧಿಕ?; ಇಲ್ಲಿದೆ ನೋಡಿ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts