More

    ಕಾಂಪ್ರೊಮೈಸ್ ಅನ್ನೋದು​ ಇಲ್ಲವೇ ಇಲ್ಲ ಎಂದ ಅರ್ಜುನ್ ಸರ್ಜಾ: ಮೀಟೂ ಪ್ರಕರಣ ಕುರಿತು ಏನೂ ಹೇಳದೆ ‘ಸತ್ಯ’ ತೆರೆದಿಟ್ರು..

    ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಮತ್ತೆ ಮುನ್ನೆಲೆಗೆ ಬಂದಿದ್ದು, ಮೂರು ವರ್ಷಗಳ ಬಳಿಕ ಇದೀಗ ಆ ಕುರಿತಂತೆ ನಟ ಅರ್ಜುನ್ ಸರ್ಜಾ ಬಾಯ್ಬಿಟ್ಟಿದ್ದಾರೆ. ಇದೀಗ ಏನೂ ಹೇಳದೆ ಏನು ಹೇಳಬೇಕಿತ್ತೋ ಅದನ್ನು ಅವರು ಹೇಳಿಕೊಂಡು ಸತ್ಯ ಏನು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

    ‘ವಿಸ್ಮಯ’ ಸಿನಿಮಾ ಚಿತ್ರೀಕರಣ ವೇಳೆ ತಾವು ಮೀಟೂಗೆ ಒಳಗಾಗಿದ್ದಾಗಿ 2018ರಲ್ಲಿ ಹೇಳಿಕೊಂಡಿದ್ದ ನಟಿ ಶ್ರುತಿ ಹರಿಹರನ್​, ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪ ಹೊರಿಸಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರವಿಲ್ಲ ಹಾಗೂ ಅಗತ್ಯ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಖುದ್ದು ಶ್ರುತಿ ಹರಿಹರನ್ ವಿಫಲರಾಗಿದ್ದಾರೆ ಎಂದು ಹೇಳಿ ಕಬ್ಬನ್​ ಪಾರ್ಕ್​ ಪೊಲೀಸರು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ?

    ಕೊನೆಗೂ ಆರೋಪ ಸುಳ್ಳು ಎಂದಾಗಿದ್ದನ್ನು ಅರ್ಜುನ್ ಸರ್ಜಾ ಹೊಸದಾಗಿ ಏನೂ ಹೇಳದೆ ಸತ್ಯ ಏನು ಎಂಬುದನ್ನು ಹೇಳಿಕೊಂಡಿದ್ದಾರೆ. ಆರೋಪ ಕೇಳಿ ಬಂದ ಸಮಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿಡಿಯೋ ತುಣುಕನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

    ‘ಕಾಂಪ್ರೊಮೈಸ್ ಅನ್ನೋ ವರ್ಡ್ ​ ಇಲ್ಲವೇ ಇಲ್ಲ. ಇದು ಒಂದು ಉದಾಹರಣೆ ಆಗಬೇಕು. ಮುಂದೆ ಎಷ್ಟೋ ಜನರು ಅಮಾಯಕರು ಇದಕ್ಕೆ ಬಲಿಯಾಗಬಾರದು. ನಾನು ಇದನ್ನು ತಡ್ಕೊಳ್ತೀನಿ, ಆದರೆ ತಡ್ಕೊಳ್ದಿರೋ ತುಂಬಾ ಜನ ಇರ್ತಾರೆ. ಕಾಲ ನ್ಯಾಯ ಹೇಳುತ್ತೆ, ಆಲ್ರೆಡಿ ಇದು ಕೋರ್ಟಿಗೆ ಹೋಗಾಯ್ತು, ನಾನ್ ತಪ್ ಮಾಡಿದ್ರೆ ನನಗೆ, ಅವರು ತಪ್ಪು ಮಾಡಿದ್ರೆ ಅವರಿಗೆ ಖಂಡಿತ ಶಿಕ್ಷೆ ಆಗ್ಬೇಕು..’ ಎಂದು ಅಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಮಾತುಗಳಿರುವ ವಿಡಿಯೋ ತುಣುಕನ್ನು ‘ಸತ್ಯಮೇವ ಜಯತೇ’ ಎಂಬ ಕ್ಯಾಪ್ಷನ್​ನೊಂದಿಗೆ ಹಂಚಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ-ರಿಪೋರ್ಟ್​ ಸಲ್ಲಿಕೆ ಆಗಿರುವ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಫೋಟೋಗಳನ್ನು ಆ ವಿಡಿಯೋದ ಕೊನೆಯಲ್ಲಿ ಸೇರಿಸಿ ಹಂಚಿಕೊಳ್ಳುವ ಮೂಲಕ ತಾವು ನಿರ್ದೋಷಿ ಎನ್ನುವುದನ್ನು ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts