More

    ಪಂಜಾಬ್ ವಿರುದ್ಧ ಭರ್ಜರಿ ಗೆಲುವು: ಆರ್‌ಸಿಬಿ ಪ್ಲೇಆಫ್ ಆಸೆ ಜೀವಂತವಿರಿಸಿದ ಕೊಹ್ಲಿ

    ಧರ್ಮಶಾಲಾ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (92 ರನ್, 47 ಎಸೆತ, 7 ಬೌಂಡರಿ, 6 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್ -17ರ ತನ್ನ 12ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ರನ್‌ಮಳೆ ಹರಿಸಿ 60 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಸತತ 4ನೇ ಜಯ ದಾಖಲಿಸಿದ ಡು ಪ್ಲೆಸಿಸ್ ಪಡೆ ಪ್ಲೇಆ್ ಆಸೆ ಜೀವಂತವಿರಿಸಿಕೊಂಡಿದ್ದರೆ, ಪಂಜಾಬ್ ಕಿಂಗ್ಸ್ ಸೋಲಿನೊಂದಿಗೆ 2ನೇ ತಂಡವಾಗಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.

    ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಮಾಡು ಇಲ್ಲವೆ ಮಡಿ’ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ, ಮಳೆ ಅಡಚಣೆಯ ನಡುವೆ ಭರ್ಜರಿ ಬ್ಯಾಟಿಂಗ್ ನಿರ್ವಹಣೆಯೊಂದಿಗೆ 7 ವಿಕೆಟ್‌ಗೆ 241 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ರಿಲೀ ರೋಸೌ (61 ರನ್, 27 ಎಸೆತ, 9 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ನಡುವೆಯೂ ಪಂಜಾಬ್ ಕಿಂಗ್ಸ್ 17 ಓವರ್‌ಗಳಲ್ಲಿ 181 ರನ್‌ಗಳಿಗೆ ಸರ್ವಪತನ ಕಂಡಿತು.

    ಪಂಜಾಬ್‌ಗೆ ಸ್ಪಿನ್ ಕಡಿವಾಣ: ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ಪಂಜಾಬ್‌ಗೆ ಸ್ವಪ್ನಿಲ್ ಸಿಂಗ್(28ಕ್ಕೆ 2) , ಪ್ರಭ್‌ಸಿಮ್ರಾನ್ (0) ವಿಕೆಟ್ ಕಬಳಿಸಿ ಆಘಾತ ನೀಡಿದರು. ಬಳಿಕ ಜಾನಿ ಬೇರ್‌ಸ್ಟೋ (27) ಜತೆಯಾದ ರಿಲೀ ರೋಸೌ 2ನೇ ವಿಕೆಟ್‌ಗೆ 31 ಎಸೆತದಲ್ಲಿ 65 ರನ್‌ಗಳಿಸಿ ಚೇಸಿಂಗ್‌ಗೆ ಬಲ ತುಂಬಿದರು. ಬೇರ್‌ಸ್ಟೋ ನಿರ್ಗಮನದ ಬಳಿಕವೂ ಆರ್‌ಸಿಬಿಗೆ ಸವಾಲಾದ ರೋಸೌ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಪಂಜಾಬ್ ಆಸೆ ಹೆಚ್ಚಿಸಿದರು. ಶಶಾಂಕ್ ಸಿಂಗ್ ಜತೆಯಾಗಿ 3ನೇ ವಿಕೆಟ್‌ಗೆ 19 ಎಸೆತಗಳಲ್ಲಿ 65 ರನ್‌ಗಳಿಸಿದರು. ಆಗ ದಾಳಿಗಿಳಿದ ಕರ್ಣ್‌ಶರ್ಮ (36ಕ್ಕೆ2), ರೋಸೌ ಅಬ್ಬರಕ್ಕೆ ಕಡಿವಾಣ ಹೇರಿದರು. ನಂತರದಲ್ಲಿ ಜಿತೇಶ್ ಶರ್ಮ (5), ಲಿಯಾಮ್ ಲಿವಿಂಗ್‌ಸ್ಟೋನ್ (0) ವಿಕೆಟ್ ಪಡೆದ ಆರ್‌ಸಿಬಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಶಶಾಂಕ್ ಸಿಂಗ್ (37) ಹಾಗೂ ಸ್ಯಾಮ್ ಕ್ರರನ್ (22) ಹೋರಾಟ ಸೋಲಿನ ಅಂತರ ತಗ್ಗಿಸಿತು. ಲಾಕಿ ರ್ಗ್ಯುಸನ್ (29ಕ್ಕೆ 2) ಹಾಗೂ ಮೊಹಮದ್ ಸಿರಾಜ್ (43ಕ್ಕೆ 3) ಬಾಲಗೊಂಚಿಗಳನ್ನು ಕಟ್ಟಿಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts