ಸಿನಿವಾಣಿ

5 ನಿಮಿಷ ಮಾತಾಡಲು 10 ಸಾವಿರ ರೂ.: ಒಳ್ಳೇ ಹುಡ್ಗೀರು ಇತಿಹಾಸ ಸೃಷ್ಟಿಸಲಾರರು ಎಂದ ನಟಿ ಕಿರಣ್​

ಹೈದರಾಬಾದ್​: ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಇಲ್ಲದಿರುವುದರಿಂದ ಸಿನಿ ಲೋಕದಿಂದ ದೂರವಿರುವ ಕಿರಣ್​, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

ಆ್ಯಪ್​ ಡೌನ್​ಲೋಡ್​ಗೆ 49 ರೂ.

41 ವರ್ಷದ ಕಿರಣ್​, ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಇನ್​ಸ್ಟಾಗ್ರಾಂಗೆ ಸೀಮಿತವಾಗದ ಕಿರಣ್​, ಆ್ಯಪ್​ ಒಂದನ್ನು ಆರಂಭಿಸಿ ಆ ಮೂಲಕ ಉದ್ಯಮಕ್ಕೂ ಕೈಹಾಕಿದ್ದಾರೆ. ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್​ ಮತ್ತು ವೆಬ್​ಸೈಟ್​ ತೆರೆದಿದ್ದಾರೆ. ಮೊಬೈಲ್​ನಲ್ಲಿ ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು.

ಮಾತನಾಡಲು ಹಣ ಕೊಡಬೇಕು

ಆ್ಯಪ್​ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್​ ಅವರು ಗ್ಲಾಮರಸ್​ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಅದೇ ರೀತಿ ನೀವೇನಾದರೂ ಕಿರಣ್​ ಅವರ ಜತೆ 5 ನಿಮಿಷ ಮಾತನಾಡಲು ಬಯಸಿದರೆ, 10 ಸಾವಿರ ರೂ. ಪಾವತಿಸಬೇಕಾಗುತ್ತದೆ. ನೀವೇನಾದರೂ ವಿಡಿಯೋ ಮೂಲಕ 15 ನಿಮಿಷ ಮಾತನಾಡಲು ಇಚ್ಛಿಸಿದರೆ 14 ಸಾವಿರ ರೂ. ಪಾವತಿಸಬೇಕಾಗುತ್ತದೆ.

25 ನಿಮಿಷಕ್ಕೆ 25 ಸಾವಿರ ರೂ.

25 ನಿಮಿಷಗಳ ಕಾಲ ವಿಡಿಯೋ ಕಾಲ್​ನಲ್ಲಿ ಮಾತನಾಡಲು ಬಯಸಿದರೆ 25 ಸಾವಿರ ರೂ. ನೀಡಬೇಕಾಗುತ್ತದೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್​ ಅವತಾರವನ್ನು ಕಿರಣ್​ ರಾಥೋಡ್​ ಅನಾವರಣಗೊಳಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳು ಸಣ್ಣ ಝಲಕ್​ ಅನ್ನು ಕಿರಣ್​ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್​ ಅವತಾರಕ್ಕಾಗಿ ಆ್ಯಪ್​ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ.

ಫೋಟೋವೊಂದಕ್ಕೆ ಒಳ್ಳೆಯ ಹುಡುಗಿಯರು ಇತಿಹಾಸ ನಿರ್ಮಿಸಲಾರರು, ಬೋಲ್ಡ್​ ಹುಡುಗಿಯರು ಇತಿಹಾಸ ಸೃಷ್ಟಿಸಬಲ್ಲರು ಎಂದು ಅಡಿಬರಹ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. (ಏಜೆನ್ಸೀಸ್​)