More

    ಮಹಿಳೆಯರ ಈ ವಿಡಿಯೋ ನೋಡಿದ ಬಳಿಕ ಪುರುಷರು ಅಸೂಯೆ ಪಡುವುದರಲ್ಲಿ ಸಂದೇಹವೇ ಇಲ್ಲ!

    ಸಾಮಾನ್ಯವಾಗಿ ಯಾವುದೇ ಮದುವೆ ಸಮಾರಂಭದಲ್ಲಿ ಮನರಂಜನೆ ಮತ್ತು ಔತಣಕೂಟಗಳು ಅದ್ಧೂರಿಯಾಗೇ ಇರುತ್ತವೆ. ಆದರೆ, ಬದಲಾಗುತ್ತಿರುವ ಕಾಲದಲ್ಲಿ ಕಾಲಕ್ಕೆ ತಕ್ಕಂತೆ ಮದುವೆಗಳಲ್ಲೂ ಹೊಸ ಸಂಪ್ರದಾಯಗಳು ಶುರುವಾಗಿವೆ. ಮನೆ ಮುಂದೆ ಹಾಕುವ ಚಪ್ಪರದಿಂದ ಹಿಡಿದು ಊಟದ ಐಟಂಗಳವರೆಗೂ ಇತರರಿಗಿಂತ ಸ್ವಲ್ಪ ಭಿನ್ನವಾಗಿರಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಮದುವೆ ವೇಳೆ ಊಟಕ್ಕೂ ಮುನ್ನ ತಿಂಡಿ, ತಂಪು ಪಾನೀಯಗಳನ್ನು ನೀಡುವುದನ್ನು ನೋಡುತ್ತೇವೆ. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅದರಲ್ಲೂ ಈ ವಿಡಿಯೋ ನೋಡಿದ ಬಳಿಕ ಪುರುಷರು ಹೊಟ್ಟೆ ಕಿಚ್ಚು ಪಡುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

    ಸದ್ಯ, ಮದುವೆ ಸಮಾರಂಭವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾಣಸಿಗುವ ಮಹಿಳೆಯರೂ ಸರತಿ ಸಾಲಿನಲ್ಲಿ ಕುಳಿತು ಊಟ ಮಾಡುತ್ತಿರುವುದು ದೃಶ್ಯ ಸಾಮಾನ್ಯವಾಗಿದೆ. ಆದರೆ, ವಿಶೇಷ ಸಂಗತಿ ಏನೆಂದರೆ, ಊಟಕ್ಕೆ ಕುಳಿತಿರುವ ಮಹಿಳಾ ಅತಿಥಿಗಳಿಗೂ ಆಲ್ಕೋಹಾಲ್​ ಬಡಿಸಲಾಗಿದೆ. ಪ್ಲಾಸ್ಟಿಕ್​ ಬಾಟಲ್​ಗೆ ಮದ್ಯವನ್ನು ಸುರಿಯಲಾಗಿದೆ. ಗಮನಾರ್ಹ ಸಂಗತಿ ಏನೆಂದರೆ, ಅಲ್ಲಿರುವುದು ಎಲ್ಲರೂ ಹೆಂಗಸರೇ ಮತ್ತು ಬಡಿಸುತ್ತಿರುವವರೂ ಹೆಂಗಸರೇ. ಇದೀಗ ಈ ವಿಡಿಯೋ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

    ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬ ಮಾಹಿತಿ ಇಲ್ಲ. ಹಸ್ನ ಜರೂರಿ ಹೈ ಹೆಸರಿನ ಎಕ್ಸ್​ ಖಾತೆಯಲ್ಲಿ ಫೆ. 20ರಂದು ವಿಡಿಯೋ ಪೋಸ್ಟ್​ ಮಾಡಲಾಗಿದ್ದು, 60 ಸಾವಿರಕ್ಕೂ ಅಧಿಕ ವೀಕ್ಷಣೆ ಗಳಿಸಿದೆ.

    ಈ ವಿಡಿಯೋ ನೋಡಿದ ನೆಟಿಜನ್‌ಗಳು ವಿವಿಧ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮಹಿಳೆಯರು ತುಂಬಾ ಖುಷಿ ಪಡುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಹೇಳಿದರೆ, ಈ ವಿಡಿಯೋ ನೋಡಿದ ಮೇಲೆ ಪುರುಷರು ನಿಜಕ್ಕೂ ಅಸೂಯೆ ಪಟ್ಟುಕೊಳ್ಳುತ್ತಾರೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ. ಮಹಿಳೆಯರು ಈಗ ಎಲ್ಲದರಲ್ಲೂ ಪುರುಷರೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ ಎಂದು ನಾನಾ ರೀತಿಯಲ್ಲಿ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಬಹುದಾಗಿದೆ. (ಏಜೆನ್ಸೀಸ್​)

    ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿಕಾಂತ್ ಗಲಿಬಿಲಿಗೊಂಡಿದ್ದರು!

    ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

    ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts