ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

Vidya Balan
Published on

ಮುಂಬೈ: ಕೆಲ ನಟಿಯರು ತಮ್ಮ ಜೀವನದಲ್ಲಿ ಅನುಭವಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳು ಮುಂದೆ ಬಿಚ್ಚಿಟ್ಟ ಸಾಕಷ್ಟು ಉದಾಹರಣೆಗಳಿವೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಮುಜುಗರ ಪಡುವಂತಹ ಸನ್ನಿವೇಶಕ್ಕೆ ಒಳಗಾಗಿ ಮಾನಸಿಕ ವೇತನೆ ಅನುಭವಿಸಿದ ನಟಿಯರಲ್ಲಿ ಬಾಲಿವುಡ್​ ಬ್ಯೂಟಿ ವಿದ್ಯಾ ಬಾಲನ್ ಕೂಡ ಒಬ್ಬರಾಗಿದ್ದಾರೆ.​ ಅಷ್ಟಕ್ಕೂ ವಿದ್ಯಾ ಬಾಲನ್​ ಅನುಭವಿಸಿದ ಕರಾಳ ಘಟನೆಯಾದರೂ ಏನು ಅಂತೀರಾ? ಮುಂದೆ ಓದಿ.

ಬಾಲಿವುಡ್​ ನಟಿ ನೇಹಾ ಧುಪಿಯಾ ನಡೆಸಿಕೊಡುತ್ತಿದ್ದ ಪಾಡ್​ಕಾಸ್ಟ್​ "ನೋ ಫಿಲ್ಟರ್​ ನೇಹಾ" ತುಂಬಾ ಫೇಮಸ್ ಆಗಿತ್ತು. ಈ ಶೋನಲ್ಲಿ ಭಾಗವಹಿಸಿದವರು ಯಾವುದೇ ಫಿಲ್ಟರ್​ ಇಲ್ಲದೆ ಮುಕ್ತವಾಗಿ ಮಾತನಾಡುತ್ತಿದ್ದರು. ಇದೇ ಕಾರ್ಯಕ್ರಮಕ್ಕೆ ಹಿಂದೊಮ್ಮೆ ವಿದ್ಯಾ ಬಾಲನ್​ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಹಿ ಘಟನೆಯನ್ನು ಬಹಿರಂಗಪಡಿಸಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

ನಾನು ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ನಡೆದ ಘಟನೆ ಇದು. ನಾನು ನಿತ್ಯವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ನನ್ನ ಜೊತೆ ಮೂವರು ಫ್ರೆಂಡ್ಸ್​ ಇದ್ದರು. ನಾವೆಲ್ಲರು ಮಹಿಳಾ ಕಂಪಾರ್ಟ್​ಮೆಂಟ್​ನಲ್ಲಿದ್ದೆವು. ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ದಿಢೀರನೇ ಒಬ್ಬ ಯುವಕ ಬಂದು ನಮ್ಮ ಎದುರಿಗೆ ಕುಳಿತನು. ಇದು ಮಹಿಳಾ ಬೋಗಿ ಎಂದು ಹೇಳಿದರೂ ಕೇಳಲಿಲ್ಲ. ಸುಮ್ಮನೆ ಕುಳಿತಿದ್ದನು. ಮುಂದಿನ ನಿಲ್ದಾಣದಲ್ಲಿ ಇಳಿದುಕೊಳ್ಳಬಹುದು ಎಂದು ಭಾವಿಸಿದೆವು. ಆದರೆ ಇಳಿಯಲಿಲ್ಲ. ಆತನಿಂದ ತುಂಬಾ ಹಿಂಸೆಯನ್ನು ಅನುಭವಿಸಬೇಕಾಯಿತು.

ಆತನನ್ನೇ ನೋಡುತ್ತಿದ್ದೆವು. ಒಂದು ಕಡೆ ಭಯವೂ ಇತ್ತು. ಏನೋ ಕೆಟ್ಟದಾಗಿ ನಡೆಯಲಿದೆ ಅನಿಸುತ್ತಿತ್ತು. ನೋಡು ನೋಡುತ್ತಿದ್ದಂತೆ ಆತ ನಮ್ಮ ಕಣ್ಣೆದೆರುಲ್ಲೇ ತನ್ನ ಬಟ್ಟೆಗಳನ್ನು ಕಳಚಿ, ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ. ಆ ಕ್ಷಣ ಏನು ಮಾಡುವುದು ಎಂದು ತೋಚಲಿಲ್ಲ. ನನ್ನ ಕೈನಲ್ಲಿ ಬರೆಯುವ ಪ್ಯಾಡ್​ ಇತ್ತು. ಬಳಿಕ ಧೈರ್ಯ ಮಾಡಿ ಆತನ ಬಳಿ ಹೋಗಿ ಪ್ಯಾಡ್​ನಿಂದ ಬಡಿದು, ರೈಲಿನಿಂದ ಹೊರಗಾಕಿದೆವು ಎಂದು ವಿದ್ಯಾ ಬಾಲನ್​ ಕಹಿ ಘಟನೆಯನ್ನು ನೆನಪಿಸಿಕೊಂಡರು.

ಸಾರ್ವಜನಿಕವಾಗಿ ಅಸಹ್ಯಕರ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಗೆ ವಿದ್ಯಾ ಬಾಲನ್​ ಪ್ರತಿಕ್ರಿಯಿಸಿದ ಎಲ್ಲರ ಮೆಚ್ಚುಗೆ ಪಾತ್ರವಾಯಿತು. ಹೆಣ್ಣು ಹೆದರದೆ ಪರಿಸ್ಥಿತಿಗಳನ್ನು ಎದುರಿಸಬೇಕು ಸಂದೇಶವನ್ನು ಸಹ ವಿದ್ಯಾ ಅವರು ಸಂದರ್ಶನದ ಮೂಲಕ ರವಾನಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net