More

  100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?

  ಚೆನ್ನೈ: ಜೀವನದಲ್ಲಿ ಒಮ್ಮೆಯಾದರೂ ತನ್ನಿಷ್ಟದ ಕಲಾವಿದರ ಜೊತೆ ನಟಿಸಬೇಕೆಂದು ಕೆಲ ನಟ-ನಟಿಯರು ಅನೇಕ ಸಂದರ್ಭಗಳಲ್ಲಿ ಹೇಳಿರುವುದನ್ನು ನಾವು ಕೇಳಿರುತ್ತೇವೆ. ನೆಚ್ಚಿನ ನಟ-ನಟಿಯರ ಜತೆ ತೆರೆ ಹಂಚಿಕೊಳ್ಳುವ ಕನುಸು ಕಾಣುವುದರಲ್ಲಿ ತಪ್ಪೇನು ಇಲ್ಲ. ಅದೇ ರೀತಿ ಓರ್ವ ನಟ ಲೇಡಿ ಸೂಪರ್​ ಸ್ಟಾರ್​ ಎಂದೇ ಖ್ಯಾತಿಯಾಗಿರುವ ನಯನತಾರಾ ಜತೆ ನಟಿಸಲು ಬಯಸಿದ್ದರು. ತನ್ನೊಂದಿಗೆ ನಟಿಸಲು ಒಪ್ಪುವುದಾದರೆ ಡಬಲ್​ ಸಂಭಾವನೆ ನೀಡುವುದಾಗಿಯೂ ಹೇಳಿದ್ದರು. ಆದರೆ, ನಯನತಾರಾ ಮಾತ್ರ 100 ಕೋಟಿ ರೂ. ಕೊಟ್ಟರು ಆ ನಟನೊಂದಿಗೆ ನಟಿಸುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರಂತೆ. ಹಾಗಾದರೆ, ಆ ನಟ ಯಾರು? ಆ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

  ಶಾರುಖ್​ ಖಾನ್​ ಅಭಿನಯದ ಜವಾನ್​ ಸಿನಿಮಾದಲ್ಲಿ ನಟಿಸಿದ ಬಳಿಕ ನಯನತಾರಾ ಪಂಚಭಾಷಾ ತಾರೆಯಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ದಕ್ಷಿಣ ಭಾರತ ಸಿನಿರಂಗದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಸ್ಟಾರ್​ ನಟಿಯಾಗಿದ್ದಾರೆ. ಮೂಲಗಳ ಪ್ರಕಾರ ನಯನತಾರಾ ಸಂಭಾವನೆ 10 ಕೋಟಿಯಿಂದ 15 ಕೋಟಿ ರೂ.ವರೆಗೂ ಇದೆ ಎಂದು ಹೇಳಲಾಗಿದೆ. ಆದರೆ, ಈ ಹೀರೋ, ನಯನತಾರಾಗೆ ಡಬಲ್​ ಸಂಭಾವನೆ ಕೊಡಲು ರೆಡಿಯಾಗಿದ್ದರು. ಆದರೂ ಆ ಚಿತ್ರವನ್ನು ನಯನಾ ನಿರಾಕರಿಸಿದರು.

  ಆ ನಟ ಯಾರು ಎಂದು ಯೋಚಿಸುತ್ತಿದ್ದೀರಾ? ಬೇರೆ ಯಾರೂ ಅಲ್ಲ ತಮಿಳುನಾಡಿನ ಅತಿದೊಡ್ಡ ಉದ್ಯಮಿ ಹಾಗೂ ನಟ ಸರವಣನ್​. ಇವರು ಲೆಜೆಂಡ್​ ಸರವಣನ್​ ಎಂದೇ ಖ್ಯಾತರಾಗಿದ್ದಾರೆ. 2022ರಲ್ಲಿ ತೆರೆಕಂಡ ದಿ ಲೆಜೆಂಡ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡದೆ ಫ್ಲಾಪ್​ ಆಯಿತು.

  ದಿ ಲೆಜೆಂಡ್​ ಸಿನಿಮಾಗೆ ನಯನತಾರಾರನ್ನು ಹೀರೋಯಿನ್​ ಆಗಿ ಕರೆತರಬೇಕೆಂದು ಮಾತುಕತೆ ನಡೆದಿತ್ತು. ಭಾರಿ ಮೊತ್ತದ ಸಂಭಾವನೆ ಕೊಡಲು ಸರವಣನ್​ ಕೂಡ ರೆಡಿಯಾಗಿದ್ದರು. ಅದೇನೆ ಆಗಲಿ ಈ ಸಿನಿಮಾಗೆ ನಯನತಾರಾ ಅವರೇ ನಾಯಕಿಯಾಗಬೇಕೆಂದು ಬಯಸಿದ್ದರು. ಆದರೆ, 100 ಕೋಟಿ ರೂಪಾಯಿ ಕೊಟ್ಟರು ನಿಮ್ಮ ಜೊತೆ ನಟಿಸುವುದಿಲ್ಲ ಎಂದು ನಯನತಾರಾ ಮುಖಕ್ಕೆ ಹೊಡೆದಂತೆ ಸರವಣನ್​ಗೆ ಹೇಳಿದರಂತೆ.

  ಆ ಸಮಯದಲ್ಲಿ ಐಷಾರಾಮಿ ರೋಲ್ಸ್​ ರಾಯ್​ ಕಾರು ನಿತ್ಯವೂ ನಯನತಾರಾ ಮನೆಗೆ ಹೋಗುತ್ತಿತ್ತು. ಆ ಕಾರು ಸರವಣನ್​ ಅವರಿಗೆ ಸೇರಿದ್ದಾಗಿತ್ತು. ನಯನತಾರಾ ಮನವೊಲಿಸಲು ಅನೇಕ ಭಾರಿ ಅವರ ಮನೆಗೆ ಸರವಣನ್​ ಹೋಗಿದ್ದರು ಎನ್ನಲಾಗಿದೆ. ಎಷ್ಟು ಬಾರಿ ಮನವೊಲಿಸಲು ಪ್ರಯತ್ನಿಸಿದರು ಎಂಬುದು ತಿಳಿದಿಲ್ಲ. ಆದರೆ, ನಯನತಾರಾ ಮಾತ್ರ ಯಾವುದಕ್ಕೂ ಒಪ್ಪಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಬೇರೆ ದಾರಿ ಕಾಣದೆ ದಿ ಲೆಜೆಂಡ್​ ಚಿತ್ರಕ್ಕೆ ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು. (ಏಜೆನ್ಸೀಸ್​)

  ಇದಕ್ಕೂ ಹಣ ಕೊಡಬೇಕಾ? ಬಾಲಿವುಡ್​ನ ಈ ಕೆಟ್ಟ ಸಂಸ್ಕೃತಿ ದಕ್ಷಿಣಕ್ಕೂ ಬಂದಿದೆ ಎಂದ ಪ್ರಿಯಾಮಣಿ!

  ಹುಡುಗಿಯರಿಗೆ ಇದು ಸುಲಭ, ಹುಡುಗರ ಬಗ್ಗೆ ಯೋಚಿಸಿದ್ರೆ ಅಯ್ಯೋ ಪಾಪ ಅನ್ಸುತ್ತೆ ಎಂದ ನಿತ್ಯಾ ಮೆನನ್!​

  ಕೇವಲ 2 ಗಂಟೆಗೆ 13 ಲಕ್ಷ ರೂಪಾಯಿ! ನಟಿ ಮೀನಾ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್​ ನಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts