More

  ಕೇವಲ 2 ಗಂಟೆಗೆ 13 ಲಕ್ಷ ರೂಪಾಯಿ! ನಟಿ ಮೀನಾ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್​ ನಟ

  ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಮಗಳು ನೈನಿಕಾ ಕೂಡ ಬಾಲನಟಿಯಾಗಿ ಮಿಂಚುತ್ತಿದ್ದಾರೆ. ಈ ಹಿಂದೆ ಮೀನಾ ಅವರ ಎರಡನೇ ಮದುವೆ ವಿಚಾರದಲ್ಲಿ ಗಾಸಿಪ್​ ಹರಿಬಿಟ್ಟಿದ್ದ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಇದೀಗ ಮೀನಾ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

  ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್​ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್​ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ. ಅದರಲ್ಲೂ ನಟಿಯರೇ ಹೆಚ್ಚು.

  ಧನುಷ್​ ಜತೆ ಮದ್ವೆ
  ನಟ ಧನುಷ್​, ದಕ್ಷಿಣ ಭಾರತದ ನಟಿ ಮೀನಾ ಅವರನ್ನು ಮದುವೆ ಆಗಲು ಪ್ಲಾನ್​ ಮಾಡಿದ್ದಾರಂತೆ. ಕೆಲವೇ ತಿಂಗಳ ಹಿಂದೆ ಮೀನಾ ಅವರ ಪತಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಧನುಷ್ ಕಡಿದುಕೊಂಡಿರುವುದರಿಂದ ಮೀನಾರನ್ನು ಧನುಷ್​ ಮದುವೆ ಆಗಲಿದ್ದಾರೆ ಎಂದು ಬೈಲ್ವಾನ್​ ರಂಗನಾಥ್ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ​ ಹೇಳಿದ್ದರು.

  ಮೀನಾ ಪ್ರತಿಕ್ರಿಯೆ
  ಧನುಷ್​ ಜತೆಗಿನ ಮದುವೆ ವದಂತಿಗೆ ಮೀನಾ ಸ್ಪಷ್ಟನೆ ನೀಡಿದ್ದರು. ನೀವು ಕೇಳುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಇಂದಿಗೂ ನನ್ನ ಪತಿ ಇಲ್ಲ ಎಂಬುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಇಂಥಹ ಕತೆಗಳನ್ನು ಅದು ಹೇಗೆ ಹುಟ್ಟುಹಾಕುತ್ತಾರೆ. ಸದ್ಯ ಒಳ್ಳೆಯ ಸಿನಿಮಾ ಮತ್ತು ಪಾತ್ರಗಳಲ್ಲಿ ನಟಿಸಬೇಕು ಎಂಬುದು ಮತ್ತು ನನ್ನ ಮಗಳನ್ನು ನೋಡಿಕೊಳ್ಳಬೇಕು ಎಂಬುದೇ ನನ್ನ ಬಯಕೆಯಾಗಿದೆ ಎಂದು ಹೇಳುವ ಮೂಲಕ ನಟಿ ಮೀನಾ ವದಂತಿಗೆ ತೆರೆ ಎಳೆದಿದ್ದರು.

  ಇದೀಗ ಗಂಭೀರ ಆರೋಪ
  ಫೇಮಸ್​ ಆಗುವ ಮುನ್ನ ಯಾವುದೇ ಕಲಾವಿದರಾಗಲಿ ಸಂದರ್ಶನಕ್ಕಾಗಿ ಸ್ಟುಡಿಯೋಗೆ ಭೇಟಿ ನೀಡುತ್ತಾರೆ. ಆದರೆ, ಫೇಮಸ್​ ಆದ ಬಳಿಕ ಕೆಲವರ ವರ್ತನೆಯೇ ಬದಲಾಗಿಬಿಡುತ್ತದೆ. ಸಂದರ್ಶನ ಕೊಡುವಿರಾ ಎಂದು ಕೇಳಿದರೆ, ಎಷ್ಟು ಗಂಟೆ? ಎಷ್ಟು ಕೊಡುತ್ತೀರಾ? ಎಂದು ಸಂಧಾನದ ಮಾತುಗಳನ್ನು ಆಡುತ್ತಾರೆ. ಆ ಸಾಲಿಗೆ ಮೀನಾ ಕೂಡ ಸೇರಿದ್ದಾರೆ. ಇತ್ತೀಚೆಗೆ ಪ್ರಖ್ಯಾತ ಯೂಟ್ಯೂಬ್​ ಕಂಪನಿ ಒಂದು ಮೀನಾ ಅವರ ಸಂದರ್ಶನ ಕೇಳಲು ಹೋಗಿತ್ತು. ಈ ವೇಳೆ ಮೀನಾ ಅವರು ಎಷ್ಟು ಗಂಟೆ ಮತ್ತು ಎಷ್ಟು ಹಣ ಕೊಡುತ್ತೀರಾ ಎಂದು ಕೇಳಿದರು. ಎರಡು ಗಂಟೆ ಸಂದರ್ಶನ ಸಾಕು ಎಂದು ಯೂಟ್ಯೂಬರ್​ ಕೇಳಿದ್ದ. ತಕ್ಷಣವೇ ಮೀನಾ ಅವರು 2 ಗಂಟೆಗೆ 13 ಲಕ್ಷ ರೂ. ಹಣ ಕೇಳಿದರು. ತಮ್ಮ ಚಾನೆಲ್​ ಬೆಳವಣಿಗೆಗಾಗಿ ಯೂಟ್ಯೂಬ್​ ಕಂಪನಿ 13 ಲಕ್ಷ ರೂ. ಹಣ ಸಹ ನೀಡಿತು ಮತ್ತು ಸಂದರ್ಶನ ಮಾಡಿತು ಎಂದು ಬೈಲ್ವಾನ್ ರಂಗನಾಥನ್ ಗಂಭೀರ ಆರೋಪ ಮಾಡಿದ್ದಾರೆ.

  ರಂಗನಾಥನ್​ ಅವರ ಈ ಆರೋಪಕ್ಕೆ ಮೀನಾ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  ಅಂದಹಾಗೆ ಮೀನಾ ಅವರ ಪತಿ ವಿದ್ಯಾಸಾಗರ್​ 2022ರ ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)

  ಗಂಡ ಏಕೆ ಬೇಕು ಅದೇ ಸಾಕು! ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು ಕಿರಾತಕ ಬೆಡಗಿಯ ಈ ಮಾತು…​

  ಉದ್ಯಮಿ ಜತೆ ಅಫೇರ್​; ಪತಿಗೆ ಡಿವೋರ್ಸ್​ ಕೊಡಲು ಮುಂದಾದ ನಮಿತಾ!? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

  ಅವರೇನೋ ಕೇಳ್ಬಿಟ್ರು ಆದ್ರೆ ನನ್ನಿಂದ ರೂಮ್​ನಿಂದ ಹೊರಗೆ ಬರಲು ಆಗಲಿಲ್ಲ: ನಟಿ ಮೀನಾ ಓಪನ್​ ಟಾಕ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts