More

    ಅವರೇನೋ ಕೇಳ್ಬಿಟ್ರು ಆದ್ರೆ ನನ್ನಿಂದ ರೂಮ್​ನಿಂದ ಹೊರಗೆ ಬರಲು ಆಗಲಿಲ್ಲ: ನಟಿ ಮೀನಾ ಓಪನ್​ ಟಾಕ್​

    ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಮಗಳು ಸಹ ಬಾಲ ನಟಿಯಾಗಿ ಮಿಂಚುತ್ತಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ.

    ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ. ಆ ಕಾಲದಲ್ಲಿ ಈಜುಡುಗೆ ತೊಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದರು ನಟಿ ಮೀನಾ. ಇದೀಗ ತಾವು ಮೊದಲ ಬಾರಿಗೆ ಈಜುಡುಗೆ ತೊಟ್ಟಂತಹ ಅನುಭವವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

    ಯಾಕೆ ಟ್ರೈ ಮಾಡಬಾರದು?
    ನನ್ನ ಸುತ್ತಲೂ ಇದ್ದ ಜನರು ನೀನು ಯಾಕೆ ಗ್ಲಾಮರಸ್​ ಪಾತ್ರ ಪ್ರಯತ್ನ ಮಾಡಬಾರದು ಎಂದು ಸದಾ ಕೇಳುತ್ತಿದ್ದರು. ಗ್ಲಾಮರಸ್​ ಪಾತ್ರ ಪ್ರಯತ್ನಿಸಿದರೆ ಏನು ತಪ್ಪು? ಒಮ್ಮೆ ಪ್ರಯತ್ನ ಮಾಡಿಯೇ ಬಿಡೋಣ ಎಂದು ನಾನೂ ಕೂಡ ಯೋಚಿಸಿದೆ. ಪ್ರಭುದೇವ ನಟನೆಯ ಸಿನಿಮಾದಲ್ಲಿ ಈಜುಡುಗೆಯಲ್ಲಿ ನಟಿಸಲು ಒಪ್ಪಿದೆ ಎಂದರು.

    ಮಾತು ಮುಂದುವರಿಸಿದ ಮೀನಾ, ಸ್ವಿಮ್ಮಿಂಗ್​ ಡ್ರೆಸ್​ ಧರಿಸಿದ ಬಳಿಕ ಮೇಕಪ್​ ರೂಮ್​ನಿಂದ ಹೊರಗೆ ಬರಲು ಆಗುತ್ತಿರಲಿಲ್ಲ. ಡ್ರೆಸ್​ ತುಂಬಾ ಟೈಟ್​ ಆಗಿತ್ತು. ಈ ವೇಷದಲ್ಲಿ ಹೇಗಪ್ಪಾ ಹೊರಗೆ ಹೋಗೋದು ಅಂತಾ ನಾನು ಆತಂಕಗೊಂಡಿದ್ದೆ. ಈ ಸಂದರ್ಭದಲ್ಲಿ ಗ್ಲಾಮರಸ್ ಮತ್ತು ಮಾದಕ ದೃಶ್ಯಗಳಲ್ಲಿ ನಟಿಸುವ ನಟಿಯರ ನೆನಪಾಗಿ ಅವರ ಕಾಲಿಗೆ ನಮಸ್ಕರಿಸಬೇಕೆಂಬ ಆಲೋಚನೆ ಬಂದಿತು ಎಂದರು.

    ಕೊನೆಗೂ ಮೀನಾ ಈಜುಡುಗೆಯಲ್ಲಿ ನಟಿಸುವ ಮೂಲಕ ತಮ್ಮ ಗ್ಲಾಮರಸ್​ ಪ್ರದರ್ಶನವನ್ನು ತೋರಿದರು.

    ಅನಾರೋಗ್ಯದಿಂದ ಮೀನಾ ಪತಿ ಮರಣ
    ಮೀನಾ ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)

    ನಟಿ ಮೀನಾಗೆ ಈ ನಟನ ಮೇಲೆ ನಿಜವಾಗಿ ಲವ್​ ಆಗಿತ್ತಂತೆ! ಮದ್ವೆ ದಿನ ಕಣ್ಣೀರು ಸಹ ಹಾಕಿದ್ದರಂತೆ

    ಪತಿಯ ಸ್ನೇಹಿತನ ಜತೆ 2ನೇ ಮದುವೆಗೆ ತಯಾರಿ! ನಟಿ ಮೀನಾ ಕೊಟ್ಟ ಸ್ಪಷ್ಟನೆ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts