ಪತಿಯ ಸ್ನೇಹಿತನ ಜತೆ 2ನೇ ಮದುವೆಗೆ ತಯಾರಿ! ನಟಿ ಮೀನಾ ಕೊಟ್ಟ ಸ್ಪಷ್ಟನೆ ಇಲ್ಲಿದೆ…

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇತ್ತೀಚೆಗಷ್ಟೇ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಉದ್ಯಮಿ ವಿದ್ಯಾಸಾಗರ್​ 48ನೇ ವಯಸ್ಸಿನಲ್ಲಿ ಶ್ವಾಸಕೋಸ ಸಮಸ್ಯೆಯಿಂದ ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಪತಿ ಮೃತಪಟ್ಟು ಇನ್ನು ಒಂದು ವರ್ಷವೂ ತುಂಬಿಲ್ಲ. ಆಗಲೇ ಮೀನಾ ಮತ್ತೊಂದು ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ನಟಿ ಮೀನಾ ಗಂಡನ ಸ್ನೇಹಿತನೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಈ ವಿಚಾರವಾಗಿ ಸ್ವತಃ ಮೀನಾ ಅವರೇ ಪ್ರತಿಕ್ರಿಯೆ ನೀಡಿದ್ದು, ಎರಡನೇ ಮದುವೆಯನ್ನು ಅಲ್ಲಗೆಳೆದಿದ್ದಾರೆ.

ಪತಿಯ ಅಕಾಲಿಕ ಮರಣದ ದುಃಖದಿಂದ ನಾನಿನ್ನೂ ಆಚೆ ಬಂದಿಲ್ಲ ಎಂದಿರುವ ಮೀನಾ, ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದಾರಂತೆ. ಅಲ್ಲದೆ, ಎರಡನೇ ಮದುವೆ ಸುದ್ದಿಯನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ನೆಟ್ಟಿಗರು ಸಹ ಮೀನಾ ಅವರ ಬೆಂಬಲಕ್ಕೆ ನಿಂತಿದ್ದು, ಮಾಧ್ಯಮಗಳು ಮೀನಾ ಅವರ ಬಗ್ಗೆ ಸಹಾನುಭೂತಿ ತೋರಿಸಬೇಕಿದೆ. ಯಾರಾದರೂ ಮರುಮದುವೆ ಬಗ್ಗೆ ಅಧಿಕೃತವಾಗಿ ತಿಳಿಸದೇ ಹೊರತು ಮಾಧ್ಯಮವು ಊಹಾಪೋಹಗಳನ್ನು ಹಬ್ಬಿಸಬಾರದು ಎಂದು ಫೇಸ್‌ಬುಕ್ ಬಳಕೆದಾರರು ಬರೆದುಕೊಂಡಿದ್ದಾರೆ.

ಮೀನಾ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಆಗಸ್ಟ್​ನಲ್ಲಿ ಘೋಷಣೆ ಮಾಡಿದರು. ಅಂಗಾಂಗ ದಾನವು ಜೀವ ಉಳಿಸುವ ಉದಾತ್ತ ಮಾರ್ಗಗಳಲ್ಲಿ ಒಂದಾಗಿದೆ ಮತ್ತು ಇದು ವರದಾನವಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಹೋರಾಡುತ್ತಿರುವ ಅನೇಕರಿಗೆ ಇದು ಎರಡನೇ ಅವಕಾಶವಾಗಿದೆ ಎಂದು ಹೇಳಿದ್ದಾರೆ.

ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)

ಖ್ಯಾತ ನಟಿ ಮೀನಾ ಬಾಳಲ್ಲಿ ಬಡಿದ ಬರಸಿಡಿಲು: ಚೆನ್ನೈನಲ್ಲಿ ಕೊನೆಯುಸಿರೆಳೆದ ಪತಿ ವಿದ್ಯಾಸಾಗರ್​

ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್​ ಬ್ಯಾನ್! ಮದ್ರಾಸ್​ ಹೈಕೋರ್ಟ್ ಆದೇಶ, ಕಾರಣ ಹೀಗಿದೆ….

ಮುದ್ದಿನ ನಾಯಿಗೆ ಅದ್ಧೂರಿ ಬರ್ತಡೇ! ಬಂದ ಅತಿಥಿಗಳಿಂದ 3 ಚಿನ್ನದ ಲಾಕೆಟ್ ಸೇರಿದಂತೆ ಭರ್ಜರಿ ಗಿಫ್ಟ್​

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…