More

    ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್​ ಬ್ಯಾನ್! ಮದ್ರಾಸ್​ ಹೈಕೋರ್ಟ್ ಆದೇಶ, ಕಾರಣ ಹೀಗಿದೆ….

    ಚೆನ್ನೈ: ತಮಿಳುನಾಡಿನಾದ್ಯಂತ ಇರುವ ದೇವಸ್ಥಾನಗಳಲ್ಲಿ ಮೊಬೈಲ್​ (Mobile Ban) ಬಳಕೆ ನಿಷೇಧಿಸಿದ ಮದ್ರಾಸ್​ ಹೈಕೋರ್ಟ್ (Madras High Court)​ ಮಹತ್ವದ ಆದೇಶ ಹೊರಡಿಸಿದೆ.

    ನ್ಯಾಯಮೂರ್ತಿಗಳಾದ ಆರ್​. ಮಹದೇವನ್​ ಮತ್ತು ಜೆ ಸತ್ಯ ನಾರಾಯಣ ಪ್ರಸಾದ್​ ಒಳಗೊಂಡ ಹೈಕೋರ್ಟ್​ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ. ಒಂದು ಉದ್ದೇಶವನ್ನಿಟ್ಟುಕೊಂಡು ದೇವಸ್ಥಾನಕ್ಕೆ ಬರುವ ಭಕ್ತರ ಗಮನವನ್ನು ಈ ಮೊಬೈಲ್​ ಫೋನ್​ಗಳು​ ಬೇರೆಡೆಗೆ ತಿರುಗಿಸುತ್ತವೆ. ಹೀಗಾಗಿ ದೇವಸ್ಥಾನ (Temple) ಗಳಲ್ಲಿ ಮೊಬೈಲ್​ ನಿಷೇಧ ಮಾಡುವಂತೆ ತಮಿಳುನಾಡಿನ (Tamil Nadu) ಅನೇಕ ಪ್ರಸಿದ್ಧ ದೇವಾಲಯಗಳನ್ನು ನಿರ್ವಹಿಸುತ್ತಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರಿಗೆ ನ್ಯಾಯಾಮೂರ್ತಿಗಳು ಸೂಚನೆ ನೀಡಿದ್ದಾರೆ.

    ದೇವಾಲಯಗಳು ಶ್ರೇಷ್ಠ ಸಂಸ್ಥೆಗಳಾಗಿದ್ದು, ಸಾಂಪ್ರದಾಯಿಕವಾಗಿ ಪ್ರತಿಯೊಬ್ಬರ ಜೀವನಕ್ಕೆ ಕೇಂದ್ರವಾಗಿವೆ. ಇದು ಕೇವಲ ಪೂಜಾ ಸ್ಥಳ ಮಾತ್ರವಲ್ಲ, ಜನರ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನದ ಅವಿಭಾಜ್ಯವಾಗಿದೆ. ಇದು ಜೀವಂತ ಸಂಪ್ರದಾಯವಾಗಿದ್ದು, ದೇವಾಲಯವು ನೀಡುವ ದೈವಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಅನುಭವಿಸಲು ಲಕ್ಷಾಂತರ ಭಕ್ತರನ್ನು ಇನ್ನೂ ಸೆಳೆಯುತ್ತದೆ. ದೇವಾಲಯದ ವ್ಯವಸ್ಥೆಗಳು ಮತ್ತು ರಚನೆಗಳು ಇಂತಹ ಅನುಭವಗಳನ್ನು ಬೆಂಬಲಿಸಬೇಕು. ಹೀಗಾಗಿ ತನ್ನದೇಯಾದ ನಿರ್ವಹಣಾ ಅಗತ್ಯಗಳನ್ನು ಹೊಂದಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

    ಪೂಜೆ-ಪುನಸ್ಕಾರಗಳು ನಡೆಯುವಂತಹ ದೇವಾಲಯಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಡೆ ಅನುಸರಿಸಿರುವುದಾಗಿ ತಿಳಿಸಿರುವ ನ್ಯಾಯಾಲಯ, ಜನರಿಗೆ ತೊಂದರೆಯಾಗದಂತೆ ದೇವಸ್ಥಾನಗಳಲ್ಲಿ ಫೋನ್ ಠೇವಣಿ ಲಾಕರ್‌ಗಳನ್ನು ಸ್ಥಾಪಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಹೈಕೋರ್ಟ್​ ನೀಡಿರುವ ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ಸಹ ನೇಮಿಸಲಾಗುವುದು ಎಂದು ತಿಳಿಸಿದೆ. (ಏಜೆನ್ಸೀಸ್​)

    ಮುದ್ದಿನ ನಾಯಿಗೆ ಅದ್ಧೂರಿ ಬರ್ತಡೇ! ಬಂದ ಅತಿಥಿಗಳಿಂದ 3 ಚಿನ್ನದ ಲಾಕೆಟ್ ಸೇರಿದಂತೆ ಭರ್ಜರಿ ಗಿಫ್ಟ್​

    ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ತೂರಿಬಂತು ಕಬ್ಬಿಣದ ರಾಡ್: ಕುತ್ತಿಗೆಗೆ ಚುಚ್ಚಿ ಪ್ರಯಾಣಿಕ ಸಾವು​

    ಮೀಸಲಾತಿ ಲಾಭ ದೊರೆಯಲಿ; ರೋಸ್ಟರ್ ಬಿಂದು ಗುರುತು ಕಾರ್ಯ ತ್ವರಿತಗೊಳ್ಳಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts