More

    ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ತೂರಿಬಂತು ಕಬ್ಬಿಣದ ರಾಡ್: ಕುತ್ತಿಗೆಗೆ ಚುಚ್ಚಿ ಪ್ರಯಾಣಿಕ ಸಾವು​

    ನವದೆಹಲಿ: ಸಾವು ಯಾವಾಗ? ಹೇಗೆ? ಬರುತ್ತದೆ ಎಂಬುದನ್ನು ಯಾರೂ ಕೂಡ ಊಹಿಸಲಾಗದು. ಈ ಯಾಂತ್ರಿಕ ಜಗತ್ತಿನಲ್ಲಿ ಯಾವುದು ಕೂಡ ಸುರಕ್ಷಿತವಲ್ಲ. ಸುಮ್ಮನೆ ಕುಳಿತಿದ್ದರು ಸಹ ಸಾವು ನಮ್ಮ ಪಕ್ಕದಲ್ಲೇ ಇರುತ್ತದೆ ಎಂಬುದಕ್ಕೆ ಈ ಭಯಾನಕ ಘಟನೆ ತಾಜಾ ಉದಾಹರಣೆಯಾಗಿದೆ.

    ಹೌದು, ಪ್ರಯಾಣಿಕನೊಬ್ಬ ರೈಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಆರಾಮಾಗಿ ಕುಳಿತು ಪ್ರಯಾಣಿಸುತ್ತಿದ್ದಾಗ ಕಿಟಕಿಯಿಂದ ತೂರಿ ಬಂದ ಕಬ್ಬಿಣ ಸಲಾಕೆಯೊಂದು ಪ್ರಯಾಣಿಕನ ಕುತ್ತಿಗೆಯನ್ನು ಇರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಹರಿಕೇಶ್​ ಕುಮಾರ್​ ದುಬೆ ಎಂದು ಗುರುತಿಸಲಾಗಿದೆ. ಈತ ನಿನ್ನೆ (ಡಿ.02) ದೆಹಲಿಯಿಂದ ಉತ್ತರ ಪ್ರದೇಶದ ಕಾನ್ಪುರ್​ಗೆ ತೆರಳುತ್ತಿದ್ದ ನಿಲಾಂಚಲ್​ ಎಕ್ಸ್​ಪ್ರೆಸ್​ ರೈಲನ್ನು ಏರಿದ್ದ. ರೈಲು ಬಿಹಾರದ ದನ್ವಾರ್​ ಮತ್ತು ಉತ್ತರ ಪ್ರದೇಶದ ಸೊಮ್ನಾ ನಡುವೆ ಇದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

    ರೈಲ್ವೆ ಹಳಿಗಾಗಿ ಬಳಸುತ್ತಿದ್ದ ಕಬ್ಬಿಣದ ಸಲಾಕೆ ಕಿಟಕಿಯಿಂದ ತೂರಿ ಬಂದು ದುಬೆ ಕುತ್ತಿಗೆಯನ್ನು ನುಸುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬೆನ್ನಲ್ಲೇ ರೈಲನ್ನು ಆಲಿಗಢ ಜಂಕ್ಷನ್​ನಲ್ಲಿ ನಿಲ್ಲಿಸಲಾಯಿತು. ಬಳಿಕ ಆತನ ಮೃತದೇಹವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರ ಮಾಡಿ ಮಾಹಿತಿ ನೀಡಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಣ್ವ ಕ್ಲೇಮ್​ ಸಂತ್ರಸ್ತ ವಯೋವೃದ್ಧರ ಪರದಾಟ: 23 ದಿನದಲ್ಲೇ 12 ಸಾವಿರ ಅರ್ಜಿ; ಇನ್ನೂ ಸಾವಿರಾರು ಜನ ಉಳಿಕೆ, ಅವಧಿ ವಿಸ್ತರಣೆಗೆ ಮನವಿ

    ವರ್ಗಾವಣೆ ಪ್ರಸ್ತಾವನೆಗೆ ಬೊಮ್ಮಾಯಿ ಬ್ರೇಕ್: ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಮುಗಿಯದ ಸರದಿ

    ಕಾಂಗ್ರೆಸ್ ಶಸ್ತ್ರತ್ಯಾಗ, ಬಿಜೆಪಿಗೆ ಅನುಕೂಲಯೋಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts