More

    ಕಣ್ವ ಕ್ಲೇಮ್​ ಸಂತ್ರಸ್ತ ವಯೋವೃದ್ಧರ ಪರದಾಟ: 23 ದಿನದಲ್ಲೇ 12 ಸಾವಿರ ಅರ್ಜಿ; ಇನ್ನೂ ಸಾವಿರಾರು ಜನ ಉಳಿಕೆ, ಅವಧಿ ವಿಸ್ತರಣೆಗೆ ಮನವಿ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಮಕ್ಕಳ ವಿದ್ಯಾಭ್ಯಾಸ, ಮಗಳ ಮದುವೆ, ಆಸ್ಪತ್ರೆ ಚಿಕಿತ್ಸೆ, ಕುಟುಂಬ ನಿರ್ವಹಣೆ ಹೀಗೆ ತುರ್ತು ಸಂದರ್ಭದಲ್ಲಿ ಬಳಕೆಗೆ ಬರುತ್ತದೆಂದು ಕೂಡಿಟ್ಟು ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣವೆಲ್ಲ ವಂಚಕರ ಪಾಲಾಗಿ ತಲೆ ಮೇಲೆ ಕೈಹೊತ್ತಿರುವಾಗಲೇ ಸರ್ಕಾರದ ಮಧ್ಯಪ್ರವೇಶದಿಂದ ಅಷ್ಟೋ ಇಷ್ಟೋ ಕೈಗೆ ಸಿಗಲಿರುವ ಹಣಕ್ಕೂ ಈಗ ಪರದಾಟ ಅನುಭವಿಸುವಂತಾಗಿದೆ.

    ಇದು ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ಕಣ್ವ ಸಮೂಹ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವ ಸಾವಿರಾರು ಜನರ ಸಂಕಷ್ಟ ಇದು. ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆ 2004ರ ಅನ್ವಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರನ್ನು ಸಕ್ಷಮ ಪ್ರಾಧಿಕಾರದ ಅಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ. ಆದರೆ, ಇವರು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಸಾವಿರಾರು ಹೂಡಿಕೆದಾರರು ಕ್ಲೇಮ್ೆ ಅರ್ಜಿ ಸಲ್ಲಿಸಲಾಗದೆ ಪರಿತಪಿಸುವಂತಾಗಿದೆ.

    ಅಂದಾಜಿನ ಪ್ರಕಾರ 22 ಸಾವಿರ ರೇವಣಿದಾರಿಗೆ 950 ಕೋಟಿ ರೂ. ವಂಚನೆಯಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮೋಸ ಹೋದ ಠೇವಣಿದಾರರಿದ್ದರೂ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಡದೆ ಅರ್ಜಿ ಸಲ್ಲಿಸುವ ಅವಧಿಯನ್ನು ಕೇವಲ 30 ದಿನ ನಿಗದಿ ಮಾಡಲಾಗಿತ್ತು. ರಜೆ ದಿನಗಳನ್ನು ಕಳೆದರೆ 23 ದಿನಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ 10 ರಿಂದ 12 ಸಾವಿರ ಮಂದಿ ಕ್ಲೇಮ್ ಅರ್ಜಿ ಸಲ್ಲಿಸಿದ್ದು, ಒಬ್ಬೊಬ್ಬರು ಮೂರ್ನಾಲ್ಕು ಅರ್ಜಿ ಸಲ್ಲಿಸಿರುವ ಪರಿಣಾಮ 55 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಇನ್ನೂ 10 ಸಾವಿರ ಠೇವಣಿದಾರರು ಅರ್ಜಿಯೇ ಸಲ್ಲಿಸಲು ಸಾಧ್ಯವಾಗದೆ ಹೊರಗೆ ಉಳಿದಿದ್ದಾರೆ. ಇದಕ್ಕೆ ನೂರೇಂಟು ತೊಡಕುಗಳು ಎದುರಾಗಿವೆ. ಇಡೀ ರಾಜ್ಯಕ್ಕೆ ಬೆಂಗಳೂರು ನಗರದಲ್ಲಿ ವಿಶ್ವೇಶ್ವರಯ್ಯ ಟವರ್ ಮತ್ತು ಶಾಂತಿನಗರದಲ್ಲಿ ಅರ್ಜಿ ಸ್ವೀಕಾರ ಕೇಂದ್ರ ತೆರೆಯಲಾಗಿತ್ತು. ಎಲ್ಲ ಜಿಲ್ಲೆಯಿಂದ ನಗರಕ್ಕೆ ಬರಬೇಕಾಗಿತ್ತು. ಅದರಲ್ಲಿ ಖುದ್ದು ಠೇವಣಿದಾರರೇ ಬಂದು ಅಸಲಿ ದಾಖಲೆ ತೋರಿಸಿ ಅರ್ಜಿ ಪಡೆದು ಆನಂತರ ಭರ್ತಿ ಮಾಡಿ ಸಲ್ಲಿಸಬೇಕಾಗಿತ್ತು.

    ಒಂದು ದಾಖಲೆ ಇಲ್ಲದಿದ್ದರೂ ಅರ್ಜಿ ಸ್ವೀಕರಿಸುತ್ತಿರಲಿಲ್ಲ. ವಾಪಸ್ ಊರಿಗೆ ಹೋಗಿ ಬರಲು ಸಮಯ ಸಿಗದೆ ಕ್ಲೇಮ್ುಂದ ವಂಚಿತರಾಗಿದ್ದಾರೆ. ಅಲ್ಪ ಸಮಯ ಇದ್ದ ಕಾರಣಕ್ಕೆ ರಾತ್ರಿಯೇ ಸಕ್ಷಮ ಪ್ರಾಧಿಕಾರ ಕಚೇರಿ ಬಳಿ ಬಂದು ಮಲಗಿ ಅರ್ಜಿ ಸಲ್ಲಿಸಿದರೂ ಕೆಲವರು ಪೂರ್ಣವಾಗಿಲ್ಲ ಎಂದು ನೊಂದ ರೇವಣಿದಾರರು ನೋವು ಹಂಚಿಕೊಂಡಿದ್ದಾರೆ.

    ಬರೀ 23 ದಿನ ಅವಕಾಶ ಇತ್ತು: ಹೈಕೋರ್ಟ್ ಸೂಚನೆ ಮೇರೆಗೆ ತಾರತೂರಿಯಲ್ಲಿ ನ.2 ರಿಂದ ಡಿ.1ರ ಸಂಜೆ 5.30ರವರೆಗೆ ಕ್ಲೇಮ್ ಅರ್ಜಿಯನ್ನು ಸ್ವೀಕರಿಸುವುದಾಗಿ ಪಬ್ಲಿಕ್ ನೋಟಿಫಿಕೇಷನ್ ಹೊರಡಿಸಲಾಯಿತು. ಇದೀಗ ಗಡುವು ಮುಗಿದಿದ್ದು, ಕ್ಲೇಮ್ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಸಾವಿರಾರು ಮಂದಿ ಹೊರಗೆ ಉಳಿದಿದ್ದಾರೆ. ಒಂದೆಡೆ ಕಣ್ವ ಸೊಸೈಟಿಯಲ್ಲಿ ಹೂಡಿಕೆ ಮಾಡಿ ಮೋಸಕ್ಕೆ ಒಳಗಾದವರು ಮತ್ತೆ ವಂಚಿತರಾದರು. ಶ್ರೀಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ಕಣ್ವ ಸಮೂಹ ಸಂಸ್ಥೆಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಮಾಯಕ ಜನರಿಂದ ದುಬಾರಿ ಬಡ್ಡಿ, ಅಧಿಕ ಲಾಭಾಂಶ ಆಮಿಷ ಒಡ್ಡಿ 10 ಸಾವಿರದಿಂದ ಕೋಟಿ ರೂ. ವರೆಗೂ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿದೆ.

    ಸಲ್ಲಿಸಿದ್ದ 4 ಅರ್ಜಿಗಳಲ್ಲಿ 1 ತಿರಸ್ಕೃತ: ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧಿಕಾರಿಗಳ ಆಮಿಷಕ್ಕೆ ಒಳಗಾಗಿ ವಿವಿಧ ಸ್ಕೀಮ್ಲ್ಲಿ 7 ಲಕ್ಷ ರೂ. ಹೂಡಿಕೆ ಮಾಡಿ ಮೋಸಕ್ಕೆ ಒಳಗಾದೆ. ಆದರೆ, ಇದೀಗ ಬೀದರ್​ನಿಂದ ಬೆಂಗಳೂರಿಗೆ ಬಂದು ಪ್ರತ್ಯೇಕ 4 ಕ್ಲೇಮ್ ಅರ್ಜಿ ಸಲ್ಲಿಸಿದೆ. ಒಂದಕ್ಕೆ ಅಸಲಿ ದಾಖಲೆ ತೋರಿಸಿಲ್ಲ ಎಂದು ವಾಪಸ್ ನೀಡಿದ್ದರು. ಶುಕ್ರವಾರ ಬಂದು ಕೊಡಲು ಹೋಗಿದಕ್ಕೆ ಸಮಯ ಮುಗಿದಿದೆ ಎಂದು ಹೇಳಿ ವಾಪಸ್ ಕೊಟ್ಟಿದ್ದಾರೆ ಎಂದು ಬೀದರ್ ಮೂಲದ ಜಯಪ್ರಕಾಶ್ ನಾರಾಯಣ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮುಂದೇನು?: ಕೆಪಿಐಡಿ ವಿಶೇಷ ಕೋರ್ಟ್ ನಲ್ಲಿ ಡಿ.12ಕ್ಕೆ ಅರ್ಜಿಯ ವಿಚಾರಣೆ ಬರಲಿದೆ. ಈ ವೇಳೆ ಸಕ್ಷಮ ಪ್ರಾಧಿಕಾರದ ಆಯುಕ್ತರು, ಕ್ಲೇಮ್ ಅರ್ಜಿ ಸ್ವೀಕಾರದ ಮಾಹಿತಿ ಕೊಟ್ಟು ಅವಧಿ ವಿಸ್ತರಣೆಗೆ ಅವಕಾಶ ಕೋರಬಹುದು. ಇಲ್ಲದೇ ಇರಬಹುದು. ಇದೇ ವೇಳೆ ಅರ್ಜಿದಾರರು ಕ್ಲೇಮ್ೆ ಅವಧಿ ವಿಸ್ತರಣೆಗೆ ಕೋರಲು ನಿರ್ಧರಿಸಿದ್ದಾರೆ. ಕೋರ್ಟ್ ಒಪ್ಪಿದರೆ ಮತ್ತೆ 15 ದಿನಗಳ ಕಾಲ ಅವಕಾಶ ಸಿಗಲಿದೆ.

    ಕ್ಲೇಮ್ ಅರ್ಜಿಗೆ ಅವಧಿ ವಿಸ್ತರಿಸಿ: ಕ್ಲೇಮ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಬೇಕು. 22 ಸಾವಿರ ಠೇವಣಿದಾರರು ಕ್ಲೇಮ್ ಮಾಡಲು ಸಾಧ್ಯವಾಗಿಲ್ಲ. ಅದರಲ್ಲಿಯೂ ಸಕ್ಷಮ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನ್​ಲೈನ್​ನಲ್ಲಿ ಸ್ವೀಕರಕ್ಕೆ ಅವಕಾಶ ಸಿಗಲಿಲ್ಲ. ಕೆಪಿಐಡಿ ಕಾಯ್ದೆ ಅನ್ವಯ 30 ದಿನ ನೀಡಿದರೂ ಸಿಕ್ಕಿದು ಮಾತ್ರ 23 ದಿನಗಳು. ಅಲ್ಲದೆ, ಅರ್ಜಿ ಸಹ ಆನ್​ಲೈನ್​ನಲ್ಲಿ ಸಿಗಲಿಲ್ಲ. ಐಎಂಎ ವಂಚನೆ ಪ್ರಕರಣದಲ್ಲಿ 15 ದಿನಗಳ ಕಾಲ ವಿಸ್ತರಣೆ ಜತೆ ಆನ್​ಲೈನ್​ನಲ್ಲಿ ಅಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೇ ರೀತಿ ಕಣ್ವ ಸೌಹಾರ್ದ ಕ್ರೆಡೆಟ್ ಕೋ-ಆಪರೇಟಿವ್ ಸೊಸೈಟಿಗೂ ಅವಧಿ ವಿಸ್ತರಣೆ ಮಾಡುವಂತೆ ಹೈಕೋರ್ಟ್​ನಲ್ಲಿ ಮನವಿ ಮಾಡುವುದಾಗಿ ಅರ್ಜಿದಾರ ನರೇಂದ್ರ ಕುಮಾರ್ ತಿಳಿಸಿದ್ದಾರೆ.

    ಅರ್ಜಿ ಸಲ್ಲಿಕೆಗೇನು ಸಮಸ್ಯೆ?

    • ರಾಜ್ಯ ವ್ಯಾಪಿ ನಡೆದಿರುವ ವಂಚನೆಗೆ ಬೆಂಗಳೂರಿನಲ್ಲಿ ಅರ್ಜಿ ಸ್ವೀಕಾರ
    • ಆನ್​ಲೈನ್​ನಲ್ಲಿ ಅರ್ಜಿಯೂ ಇಲ್ಲ, ಕ್ಲೇಮ್ೂ ಅವಕಾಶ ನೀಡದೆ ನಿರ್ಲಕ್ಷ್ಯ
    • ಠೇವಣಿದಾರರೇ ಖುದ್ದು ಬಂದು ಅರ್ಜಿ ಸಲ್ಲಿಸುವಂತೆ ಷರತ್ತು
    • ವಯಸ್ಸಾದವರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ದೂರ ಉಳಿದರು
    • ಅರ್ಜಿ ಸ್ವೀಕಾರದ ವೇಳೆ ಪರಿಶೀಲನೆಗೆ ಅವಕಾಶ ಇಲ್ಲದಿದ್ದರೂ ತಿರಸ್ಕಾರ
    • ಅಸಲಿ ದಾಖಲೆ ತೊರಿಸಿದವರಿಗೆ ಮಾತ್ರ ಅರ್ಜಿ ವಿತರಣೆ, ಅರ್ಜಿ ಸ್ವೀಕಾರ
    • ಹೈಕೋರ್ಟ್ ಆದೇಶ ಇದ್ದರೂ ಆನ್​ಲೈನ್​ನಲ್ಲಿ ಅರ್ಜಿ ಸ್ವೀಕಾರಕ್ಕೆ ನಕಾರ
    • ಐಎಂಎ ಪ್ರಕರಣದ ಮಾದರಿ ಅರ್ಜಿ ಸ್ವೀಕರಿಸದೆ ಇರುವುದು

    ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

    ಸದ್ದಿಲ್ಲದೆ ನಡೆಯಿತಾ ವಸಿಷ್ಠ, ಹರಿಪ್ರಿಯಾ ನಿಶ್ಚಿತಾರ್ಥ? ಸ್ಯಾಂಡಲ್​ವುಡ್​ನಲ್ಲಿ ಹೀಗೊಂದು ಸುದ್ದಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts