ಗಂಡ ಏಕೆ ಬೇಕು ಅದೇ ಸಾಕು! ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು ಕಿರಾತಕ ಬೆಡಗಿಯ ಈ ಮಾತು…​

Oviya
Published on

ಚೆನ್ನೈ: ರಾಕಿಂಗ್​ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ, ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಎರಡೇ ಸಿನಿಮಾ ಆದರೂ ಸೂಪರ್​ ಹಿಟ್​ ಕಿರಾತಕ ಸಿನಿಮಾದಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದ ಒವಿಯಾ ಇದೀಗ ಅಲ್ಲೂ ಕೂಡ ಅವಕಾಶಗಳು ಇಲ್ಲದೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಸಿನಿಮಾಗಳ ಅವಕಾಶ ಕಡಿಮೆಯಾದ ಬಳಿಕ ಒವಿಯಾ, ತಮಿಳಿನ ವಿಜಯ್ ಚಾನೆಲ್​ನಲ್ಲಿ ಪ್ರಸಾರವಾದ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ವಿಭಿನ್ನ ಮ್ಯಾನರಿಸಂ​ ಮೂಲಕ ಜನಮನ್ನಣೆ ಗಳಿಸಿದರು. ಶೋ ಮುಗಿಸಿದ ಬಳಿಕವೂ ಓವಿಯಾ ಅವರಿಗೆ ಕೆಲ ಸಿನಿಮಾಗಳಲ್ಲಿ ಮತ್ತೆ ಅವಕಾಶಗಳು ಸಿಕ್ಕವು. ಆದರೆ, ಮತ್ತೆ ಅವಕಾಶಗಳು ಕಡಿಮೆಯಾದವು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ವಿಚಾರದಲ್ಲೂ ಬೋಲ್ಡ್​ ಆಗಿ ಮಾತನಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ.

ಒಂದೊಮ್ಮೆ ಸಂದರ್ಶನವೊಂದರಲ್ಲಿ ಓವಿಯಾ ಲೈಂಗಿಕ ಶಿಕ್ಷಣದ ಬಗ್ಗೆ ಬೋಲ್ಡ್​ ಆಗಿ ಮಾತನಾಡಿದ್ದರು. ಲೈಂಗಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನೇಕ ಆಸೆಗಳಿರುತ್ತವೆ. ಹಾಗೆಯೇ ಹಾರ್ಮೋನುಗಳು ಸಹ ಇವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ಅದು ಸತ್ಯವೂ ಹೌದು ಎಂದಿದ್ದರು.

ಇದೀಷ್ಟೇ ಅಲ್ಲದೆ, ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ಒವಿಯಾ ಕೊಟ್ಟ ಉತ್ತರ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಹೆಣ್ಣುಮಕ್ಕಳ ಜೀವನ ಹಾಳು ಮಾಡುವ ಬದಲು, ಹಸ್ತಮೈಥುನ ಮಾಡಿಕೊಳ್ಳುವುದೇ ಉತ್ತಮ ಅಲ್ಲವೇ ಮೇಡಂ? ಎಂದು ಅಭಿಮಾನಿಯೊಬ್ಬ ಪ್ರಶ್ನೆ ಎಸೆದಿದ್ದ. ಅದಕ್ಕೆ ಅಷ್ಟೇ ಕೂಲ್​ ಆಗಿ ಮತ್ತು ಯಾವುದೇ ಸಂಕೋಚಪಟ್ಟುಕೊಳ್ಳದೇ, ‘ನೀವು ಹೇಳಿದ್ದು ಸರಿಯಾಗಿಯೇ ಇದೆ..’ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ ನಿಮಗೆ ಗಂಡನ ಬಗ್ಗೆ ಏನೆಲ್ಲ ಕಲ್ಪನೆ ಇದೆ ಎಂದಿದ್ದಕ್ಕೆ, ‘ನನಗೆ ಗಂಡನ ಅವಶ್ಯಕತೆ ಇಲ್ಲ’ ಎಂದೂ ಅವರು ಉತ್ತರಿಸಿದ್ದರು. ಒವಿಯಾರ ಈ ಮಾತು ಜಾಲತಾಣದಲ್ಲಿ ವೈರಲ್​ ಆಗಿ, ಬಹಳ ಚರ್ಚೆಯನ್ನು ಹುಟ್ಟುಹಾಕಿತ್ತು. ಆಗಾಗ ಒವಿಯಾರ ಈ ಮಾತು ವೈರಲ್​ ಆಗುತ್ತಲೇ ಇರುತ್ತದೆ.

Oviya 1111

ನೀವಿನ್ನೂ ಮದುವೆ ಆಗಿಲ್ಲದಿರುವುದರಿಂದ ಕೆಲವು ನಿಮ್ಮನ್ನು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ಇದು ನಿಜವೇ ಎಂದು ಅಭಿಮಾನಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ್ದ ಓವಿಯಾ, ನನಗೆ ಸದಾ ಎದುರಾಗುವ ಪ್ರಶ್ನೆ ಇದು. ನಾನು ಸಲಿಂಗಕಾಮಿಯಲ್ಲ. ಓರ್ವ ನಟಿಯಾಗಿ ಇಂತಹ ವದಂತಿಗಳು ಸಾಮಾನ್ಯವಾಗಿದೆ. ಆದರೆ, ಇಂತಹ ವದಂತಿಗಳುನ್ನು ಎದುರಿಸುವುದು ಕಷ್ಟಕರ. ಆದರೂ, ಇಂತಹವುಗಳನ್ನು ನಿರ್ಲಕ್ಷಿಸುತ್ತೇನೆಂದು ಓವಿಯಾ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net