More

    ಇದಕ್ಕೂ ಹಣ ಕೊಡಬೇಕಾ? ಬಾಲಿವುಡ್​ನ ಈ ಕೆಟ್ಟ ಸಂಸ್ಕೃತಿ ದಕ್ಷಿಣಕ್ಕೂ ಬಂದಿದೆ ಎಂದ ಪ್ರಿಯಾಮಣಿ!

    ಮುಂಬೈ: ಬಹುಭಾಷಾ ನಟಿ ಪ್ರಿಯಾಮಣಿ ಅವರು ರಾಷ್ಟ್ರಪ್ರಶಸ್ತಿ ಜಯಿಸಿದ ದಕ್ಷಿಣ ಭಾರತದ ಖ್ಯಾತ ಕಲಾವಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಿಯಾಮಣಿ ಅಸಂಖ್ಯಾತ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಪ್ರಮುಖ ನಟಿಯಾಗಿ, ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದಾರೆ ಮತ್ತು ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ನಟನೆಗೂ ಸೈ, ಡ್ಯಾನ್ಸ್​ಗೂ ಸೈ, ಅಷ್ಟೇ ಯಾಕೆ ಬೋಲ್ಡ್​ ಪಾತ್ರಗಳಿಗೂ ಜೀವ ತುಂಬುವ ಸಕಲಕಲಾವಲ್ಲಭೆ ಎಂದರೆ ತಪ್ಪಾಗಲಾರದು.

    ಇತ್ತೀಚೆಗಷ್ಟೇ ಪ್ರಿಯಾಮಣಿ ಅವರ ಭಾಮಕಲಪಮ್​ ಎರಡನೇ ಸರಣಿ ಬಿಡುಗಡೆಯಾಗಿದೆ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ಪ್ರಿಯಾಮಣಿ, ರಾ ಟಾಕ್ಸ್​ ವಿತ್​ ಆರ್​​ಕೆ ಹೆಸರಿನ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿದ್ದು, ಈ ವೇಳೆ ಬಾಲಿವುಡ್​ನ ಪಾಪರಾಜಿ ಸಂಸ್ಕೃತಿ ಹಿಂದಿನ ರಹಸ್ಯವನ್ನು ಸಹ ತೆರೆದಿಟ್ಟಿದ್ದಾರೆ.

    ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳಿಗೆ ಬಾಲಿವುಡ್​ ಸ್ಟಾರ್ಸ್​ ಹಣ ಕೊಡುವುದು ನಿಜವೇ ಎನ್ನುವ ಪ್ರಶ್ನೆಗೆ ಪ್ರಿಯಾಮಣಿ ಹೌದು ಎಂದು ಉತ್ತರಿಸಿದ್ದಾರೆ. ಪಾಪರಾಜಿ ಏಜೆನ್ಸಿಗಳಿವೆ. ನಿಮ್ಮ ಎಷ್ಟು ಛಾಯಾಗ್ರಾಹಕರು ವಿಮಾನ ನಿಲ್ದಾಣ, ಜಿಮ್‌, ಹೋಟೆಲ್​ ಅಥವಾ ಎಲ್ಲಿ ಬೇಕಾದರೂ ಬರಲು ಸಾಧ್ಯವಾಗುತ್ತದೆಯೇ ಎಂದು ಬಾಲಿವುಡ್​ ಸ್ಟಾರ್‌ಗಳು ಕೇಳಿ, ಕರೆಯಿಸಿಕೊಳ್ಳುತ್ತಾರೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

    ಜಿಮ್, ರೆಸ್ಟೋರೆಂಟ್ ಅಥವಾ ಇನ್ನಾವುದೇ ಸ್ಥಳಗಳಿಗೆ ಕಲಾವಿದರು ಹೋದಾಗ ಅಲ್ಲಿ ಫೋಟೋಗ್ರಾಫರ್​ಗಳ ದಂಡೇ ಇರುವುದನ್ನು ‘ಸ್ಪಾಟೆಡ್’ ಎಂದು ಕರೆಯಲಾದರೂ, ಸ್ಟಾರ್‌ಗಳು ಆ ಪಾಪರಾಜಿಗಳಿಗೆ ಮೊದಲೇ ಹಣ ಪಾವತಿಸಿರುತ್ತಾರೆ. ಪ್ರಿಯಾಮಣಿ ಅವರಿಗೆ ಬಾಲಿವುಡ್​ನಲ್ಲಿ ಓರ್ವ ಕಾಸ್ಟಿಂಗ್ ಡೈರೆಕ್ಟರ್ ಸ್ನೇಹಿತರಾಗಿದ್ದು, ಶಾರುಖ್​ ಅಭಿನಯದ ಜವಾನ್ ಸಿನಿಮಾದ ಬಳಿಕ ಬಿ-ಟೌನ್‌ನಲ್ಲಿ ಪ್ರಿಯಾಮಣಿ ಖ್ಯಾತಿ ಹೆಚ್ಚಿರುವುದರಿಂದ ಬಾಲಿವುಡ್ ಕಲಾವಿದರಂತೆ ‘ಪಾಪರಾಜಿ’ಗಳನ್ನು ಪಡೆಯಲು ಬಯಸುತ್ತೀರಾ ಎಂದು ಡೈರೆಕ್ಟರ್​ ಕೇಳಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ.

    ಬಂದು ಫೋಟೋ ತೆಗೆಯಲು ಪಾಪರಾಜಿಗಳಿಗೆ ಹಣ ಕೊಡಲಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಬಹುತೇಕ ಬಾಲಿವುಡ್ ಕಲಾವಿದರು ಪಾಪರಾಜಿಗಳನ್ನು ಆಹ್ವಾನಿಸುತ್ತಾರೆ. ಅದು ಕೂಡ ಒಂದು ಟ್ರೆಂಡ್ ಆಗಿಬಿಟ್ಟಿದೆ ಮತ್ತು ಸ್ಟಾರ್‌ಗಳು ಅವರಿಗೆ ಪಾವತಿಸುತ್ತಾರೆ. ಪಾಪರಾಜಿ ಏಜೆನ್ಸಿಗಳು ಅವಶ್ಯಕತೆಯ ಆಧಾರದ ಮೇಲೆ ವಿಧಿಸುವ ಬೆಲೆಗಳ ಪಟ್ಟಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ದುಬಾರಿ ಅನ್ನೋ ಪ್ರಶ್ನೆ ಇಲ್ಲಿ ಬರುವುದಿಲ್ಲ. ನನ್ನ ಸ್ವಂತ ಡ್ರಮ್ ಬಾರಿಸುವುದರಲ್ಲಿ ನನಗೆ ನಂಬಿಕೆಯಿಲ್ಲ ಮತ್ತು ನಾನು ಅನಗತ್ಯ ಗಮನ ಸೆಳೆಯಲು ಬಂದಿಲ್ಲ ಎಂದು ಪ್ರಿಯಾಮಣಿ ಹೇಳಿದರು.

    ಈ ಪಾಪರಾಜಿ ಸಂಸ್ಕೃತಿ ಇದೀಗ ದಕ್ಷಿಣ ಸಿನಿರಂಗದಲ್ಲೂ ಟ್ರೆಂಡ್ ಶುರುವಾಗಿದೆ ಎನ್ನುತ್ತಾರೆ ಪ್ರಿಯಾಮಣಿ. (ಏಜೆನ್ಸೀಸ್​)

    ಮೈಕಲ್​ ಜಾಕ್ಸನ್​ ಇನ್ನೂ ಸತ್ತಿಲ್ಲ! ರೀ ಎಂಟ್ರಿ ಕೊಡಲು ರಹಸ್ಯವಾಗಿ ನಡೆಯುತ್ತಿದೆ ಭರ್ಜರಿ ತಯಾರಿ?

    ಬಾಲಿವುಡ್​​ ಬ್ಯೂಟಿ ಜಾಹ್ನವಿಗೆ RCBಯ ಈ ಇಬ್ಬರು ಆಟಗಾರರು ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

    ದರ್ಶನ್​ಗೆ​ ಮತ್ತೊಂದು ಸಂಕಷ್ಟ! ನಡವಳಿಕೆ ಸರಿಪಡಿಸಿಕೊಳ್ಳಿ… ದಚ್ಚುಗೆ ನಾರಿಯರ ಖಡಕ್​ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts