More

    ದರ್ಶನ್​ಗೆ​ ಮತ್ತೊಂದು ಸಂಕಷ್ಟ! ನಡವಳಿಕೆ ಸರಿಪಡಿಸಿಕೊಳ್ಳಿ… ದಚ್ಚುಗೆ ನಾರಿಯರ ಖಡಕ್​ ವಾರ್ನಿಂಗ್​

    ಬೆಂಗಳೂರು: ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತು ನಟ ದರ್ಶನ್​ಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಏಕೆಂದರೆ, ದರ್ಶನ್​ ಆಡಿದ ಮಾತುಗಳು ಇಂದು ಅವರಿಗೆ ಮುಳುವಾಗುತ್ತಿವೆ. ನಿನ್ನೆಯಷ್ಟೇ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿತ್ತು. ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

    ಮಹಿಳೆಯ ಬಗ್ಗೆ ಹಗುರ ಮಾತು ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಕುರಿತು ಅಸಂಬದ್ಧವಾಗಿ ಮಾತನಾಡಿದ ದರ್ಶನ್​ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನಗರದ ಪುಟ್ಟೇನಹಳ್ಳಿಯಲ್ಲಿ ಶ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ದೂರು ದಾಖಲಿಸಲಾಗಿದೆ. ದರ್ಶನ್ ಅವರು​ ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

    ಏನಿದು ವಿವಾದ?
    ಇತ್ತೀಚೆಗೆ ಬಿಡುಗಡೆಯಾದ ಕಾಟೇರ ಸಿನಿಮಾ ಸಕ್ಸಸ್​ ಒಂದು ಕಡೆಯಾದರೆ, ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಫೆ.17ರಂದು ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ವಿನಯ್​ ಗುರೂಜಿ, ನಿರ್ಮಲಾನಂದ ಸ್ವಾಮೀಜಿ, ನಟ ವಿನೋದ್​ ರಾಜ್​, ಸಂಸದೆ ಸುಮಲತಾ ಅಂಬರೀಷ್​ ಹಾಗೂ ನಟ ನೆನಪಿರಲಿ ಪ್ರೇಮ್​ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ದರ್ಶನ್​, ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೇ ಮುಖ್ಯ. ಜೀವನದಲ್ಲಿ ಯಾರಿಗೂ ತಲೆ ಹಿಡಿಬೇಡಿ ಮತ್ತು ತಲೆ ಹೊಡಿಬೇಡಿ, ಒಳ್ಳೆಯ ಗುರಿ ಇಟ್ಟುಕೊಳ್ಳಿ, ಶ್ರಮ ಪಡಿ ಜಯ ಸಿಗುತ್ತದೆ ಎಂದು ದರ್ಶನ್​ ಹೇಳಿದ್ದರು. ಇದಿಷ್ಟೇ ಅಲ್ಲದೆ, ಕಾಟೇರ್​ 50ನೇ ದಿನ ಸಂಭ್ರಮ ಪ್ರಸನ್ನ ಚಿತ್ರಮಂದಿರದಲ್ಲಿ ನಡೆಯಿತು. ಕಾಟೇರ ಚಿತ್ರದ ಟೈಟಲ್ ಕೊಟ್ಟಿದ್ದು ನಾನೇ ಎಂದಿದ್ದ ನಿರ್ಮಾಪಕ ಉಮಾಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದ ದರ್ಶನ್​, ಅಯ್ಯೋ ತಗಡೇ ನಿನಗೆ ರಾಬರ್ಟ್​ ಸಿನಿಮಾ ಕೊಟ್ಟೆದ್ದೇ ನಾನು. ಯಾಕೋ ಪದೇಪದೆ ಸರಿಯಾಗಿ ಗುಮ್ಮಿಸ್ಕೋತ್ತೀಯಾ ಎಂದಿದ್ದರು.

    ಗೌಡತಿಯರ ಸೇನೆ ದೂರು
    ನಿನ್ನೆಯಷ್ಟೇ ಒಕ್ಕಲಿಗರ ಗೌಡತಿಯ ಸೇನೆ ಮಹಿಳಾ ಆಯೋಗಕ್ಕೆ ದರ್ಶನ್​ ವಿರುದ್ಧ ದೂರು ದಾಖಲಿಸಿದೆ. ಯುವಜನರಿಗೆ ಮಾದರಿಯಾಗಬೇಕಿದ್ದ ಒಬ್ಬ ನಾಯಕ ನಟ ಅಸಹಜ ಹೇಳಿಕೆಗಳನ್ನು ಕೊಡುತ್ತಿರುವುದು ಸರಿಯಲ್ಲ. ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ಅವಳ ಅಜ್ಜಿನಾ ಬಡಿಯಾ ಎಂದು ಹೆಣ್ಣು ಮಕ್ಕಳ ಬಗ್ಗೆ ಕೀಳುಭಾವನೆಯಿಂದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳ ಎದುರೇ ಉಡಾಫೆಯಾಗಿ ಮಾತನಾಡಿದ್ದಾರೆ. ಮಾದರಿಯಾಗಬೇಕಿದ್ದ ನಟ ಈ ರೀತಿ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ, ಆತ ಉಪಯೋಗಿಸಿರುವ ಪದಗಳನ್ನು ಯಾವ ಭಾವನೆಯಿಂದ ಹೇಳಿದ್ದಾರೆಂದು ವಿವರಣೆ ಕೇಳಬೇಕಾಗಿ ವಿನಂತಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಜೈಲುಪಾಲಾಗಿದ್ದು ಇತಿಹಾಸ
    ಈ ಹಿಂದೆಯೂ ಈ ನಟ ಹೆಂಡತಿಗೆ ಸಿಗರೇಟ್​ನಿಂದ ಸುಟ್ಟು ಮಾನಸಿಕವಾಗಿ ಕಿರುಕುಳ ಕೊಟ್ಟು ಜೈಲುಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ಮನೆಗೆ ಬಂದಾಗ ಬಟ್ಟೆ ಬಿಚ್ಚಿಸಿ ಕೂಡಿಹಾಕಿ ಎಂದು ಹೇಳಿದ್ದ. ತನ್ನ ಅಸಂಬದ್ಧ ಹೇಳಿಕೆಗಳಿಂದ ಹೆಣ್ಣುಮಕ್ಕಳು ಮುಜುಗರಕ್ಕೆ ಒಳಗಾಗುವಂತೆ ಮಾಡಿರುತ್ತಾನೆ. ಈ ನಾಯಕ ಯುವಜನತೆಗೆ ನೀಡುತ್ತಿರುವ ಸಂದೇಶವೇನು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿ ಕ್ಷಮೆ ಕೇಳಬೇಕು ಎಂದು ಗೌಡತಿಯರ ಸೇನೆ ಒತ್ತಾಯಿಸಿದೆ.

    ಉಗ್ರ ಹೋರಾಟದ ಎಚ್ಚರಿಕೆ
    ದರ್ಶನ್​ ಸಂಪೂರ್ಣವಾಗಿ ಬದಲಾಗಬೇಕು. ತೆರೆಯ ಮೇಲೆ ಹೆಣ್ಣು ಮಕ್ಕಳನ್ನು ಗೌರವಿಸುವಂತೆ ತೆರೆಯ ಹಿಂದೆಯೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಸಾರ್ವಜನಿಕವಾಗಿ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗೌಡತಿಯರ ಸೇನೆ ಎಚ್ಚರಿಸಿದೆ.

    ಅಹೋರಾತ್ರ ಆಕ್ರೋಶ
    ಬರಹಗಾರ ಹಾಗೂ ಚಿಂತಕ ಅಹೋರಾತ್ರ ಕೂಡ ದರ್ಶನ್​ ವಿರುದ್ಧ ಆಕ್ರೋಶ ಹೊರಹಾಕಿ, ಏಕವಚನದಲ್ಲೇ ನಿಂದಿಸಿದ್ದಾರೆ. ದರ್ಶನ್​ ಮಾತುಗಳನ್ನು ಕೇಳಿ ಪದಗಳಿಂದಲೇ ಮಾತು ಆರಂಭಿಸಿದ ಅಹೋರಾತ್ರ, ನೀನು ಹೆಣ್ಣನ್ನು ಅಗೌರವಿಸುವಂಥವನು, ಹೆಣ್ಣು ಮಕ್ಕಳನ್ನು ನಿಂದನೆಗೆ ಬಳಸುವವನು, ಹೆಣ್ಣನ್ನು ಅಶ್ಲೀಲ ಪದಗಳಿಂದ ಕರೆದವನು ನೀನು. ತಲೆ ಹಿಡಿಬೇಡಿ, ತಲೆ ಹೊಡಿಯಬೇಡಿ ಎನ್ನುವ ನೀವು ಸಾಚಾನಾ? ಇನ್ನೊಬ್ಬರಿಗೆ ಬುದ್ಧಿ ಹೇಳಲು ನಿನಗೇನು ಅರ್ಹತೆ ಇದೆ? ನೀನು ಗಂಡಲ್ಲ ಎಂದು ಹೇಳುವುದಕ್ಕೆ ಒಂದೇ ಸಾಕ್ಷಿ, ಅದೇನೆಂದರೆ ನೀನು ಹೆಣ್ಣನ್ನು ಅಗೌರವಿಸುತ್ತೀಯಾ! ನಿನಗೆ ಮಾನ-ಮರ್ಯಾದೆ ಇದೆಯಾ? ಭಾಷಣದಲ್ಲಿ ನೀನು ಹೇಳಿದ್ದೇನು? ಇವತ್ತು ಅವಳು, ನಾಳೆ ಇವಳು ಅಂದ್ರೆ ನಿನ್ನ ಭಾವನೆಯಲ್ಲಿ ಹೆಣ್ಣೆಂದರೆ ಏನು? ನಿನ್ನ ಸ್ವಂತ ಧರ್ಮಪತ್ನಿಗೆ ಗೌರವ ಕೊಡದ ನೀನು ಯಾವ ಗಂಡಾನೋ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

    ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಹೇಳಿಕೆ: ದರ್ಶನ್​ ವಿರುದ್ಧ ಕೆರಳಿದ ಗೌಡತಿಯರ ಸೇನೆ, ದೂರು ದಾಖಲು

    ತಾರಕಕ್ಕೇರಿದ ‘ತಗಡು’ ವಿವಾದ: ‘ನಟ ದರ್ಶನ್​ದು ಅತಿಯಾಯ್ತು! ಈಗಲೇ ಕ್ಷಮೆಯಾಚಿಸಿ, ಇಲ್ಲದಿದ್ದರೇ’….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts