ಬಾಲಿವುಡ್​​ ಬ್ಯೂಟಿ ಜಾಹ್ನವಿಗೆ RCBಯ ಈ ಇಬ್ಬರು ಆಟಗಾರರು ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

Janhvi Kapoor (1)
Published on

ನವದೆಹಲಿ: ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ಸದ್ಯ ದಕ್ಷಿಣ ಭಾರತದ ಚಿತ್ರಗಳಲ್ಲಿ ಸಖತ್​ ಬಿಜಿಯಾಗಿದ್ದಾರೆ. ಜೂ. ಎನ್​ಟಿಆರ್​ ಜತೆ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಹಿಂದಿಯಲ್ಲಿ ಮಿಸ್ಟರ್​ ಅಂಡ್​ ಮಿಸಸ್​ ಮಾಹಿ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಟಾಲಿವುಡ್​ ಮತ್ತು ಕಾಲಿವುಡ್​ನಲ್ಲಿ ಜಾಹ್ನವಿಗೆ ಭರಪೂರ ಆಫರ್​ಗಳು ಹರಿದುಬರುತ್ತಿವೆ. ಸ್ಟಾರ್​ ನಟರೊಂದಿಗೆ ನಟಿಸುವ ಅವಕಾಶಗಳು ಬರುತ್ತಿವೆ. ರಾಮಚರಣ್​ ಮತ್ತು ಸೂರ್ಯ ಸಿನಿಮಾಗಳಿಗೆ ಓಕೆ ಎಂದಿದ್ದಾರೆ ಎನ್ನಲಾಗಿದೆ. ಕ್ರಿಕೆಟ್​ ಅಂದ್ರೆ ಜಾಹ್ನವಿಗೆ ತುಂಬಾ ಇಷ್ಟವಂತೆ. ಟೀಮ್​ ಇಂಡಿಯಾದ ಈ ಇಬ್ಬರು ಆಟಗಾರರು ಜಾಹ್ನವಿಯ ಫೇವರಿಟ್. ​

ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಮತ್ತು ಹಿರಿಯ ಕ್ರಿಕೆಟಿಗ ದಿನೇಶ್​ ಕಾರ್ತಿಕ್​ ಅಂದ್ರೆ ತುಂಬಾ ಇಷ್ಟವಂತೆ. ಸಾಮಾನ್ಯವಾಗಿ ಕೊಹ್ಲಿ ಎಲ್ಲರಿಗೂ ಇಷ್ಟವಾಗುತ್ತಾರೆ. ಆದರೆ, ಕಾರ್ತಿಕ್​ ವಿಚಾರದಲ್ಲಿ ಜಾಹ್ನವಿ ಹೇಳುವುದೇ ಬೇರೆ. ಕಾರ್ತಿಕ್​ ಅವರ ಜತೆ ಕೆಲಸ ಮಾಡಿದ ಮೇಲೆ ನಾನು ಅವರ ಅಭಿಮಾನಿಯಾದೆ ಎಂದಿದ್ದಾರೆ.

Janhvi Kapoor 1

ಕಾರ್ತಿಕ್​​ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರೊಬ್ಬರು ಸುಂದರ ವ್ಯಕ್ತಿ ಎಂದು ಜಾಹ್ನವಿ ಹೊಗಳಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಕ್ರಿಕೆಟ್ ಕಲಿಯುತ್ತಿದ್ದಾರೆ. ದಿನೇಶ್ ಕಾರ್ತಿಕ್ ಜಾಹ್ನವಿಗೆ ಬ್ಯಾಟಿಂಗ್ ಕಲಿಸುತ್ತಿದ್ದಾರೆ. ಅದಕ್ಕಾಗಿಯೇ ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ. ಅಲ್ಲದೆ, ಕಾರ್ತಿಕ್ ಅವರು ಕಠಿಣ ಪರಿಶ್ರಮಿ ಎಂದು ಹೊಗಳಿದ್ದಾರೆ.

ದೇವರ ಸಿನಿಮಾ ಬಳಿಕ ಜಾಹ್ನವಿ ಮತ್ತೊಂದು ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸಲಿದ್ದಾರೆ. ರಾಮ್ ಚರಣ್ ಅವರ ಆರ್​ಸಿ-16 ಚಿತ್ರದಲ್ಲಿ ಜಾಹ್ನವಿ ನಾಯಕಿ ಎಂಬ ಸುದ್ದಿ ವೈರಲ್ ಆಗಿದೆ. ಆಕೆಯ ತಂದೆ ಬೋನಿ ಕಪೂರ್ ಕೂಡ ಈ ಸುದ್ದಿ ನಿಜ ಎಂದು ಪ್ರತಿಕ್ರಿಯಿಸಿದ್ದಾರೆ. ಎರಡು ಕ್ರೇಜಿ ಪ್ರಾಜೆಕ್ಟ್‌ಗಳಿಗೆ ಜಾಹ್ನವಿ ಓಕೆ ಎಂದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರೆ, ಜಾಹ್ನವಿ ಮಾತ್ರ ಟ್ವಿಸ್ಟ್ ಕೊಟ್ಟಿದ್ದಾಳೆ. ದೇವರ ಸಿನಿಮಾ ಜೊತೆಗೆ ಎರಡು ಹಿಂದಿ ಚಿತ್ರಗಳನ್ನು ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ದಕ್ಷಿಣದಲ್ಲಿ ಯಾವುದೇ ಹೊಸ ಯೋಜನೆಯನ್ನು ಒಪ್ಪಿಕೊಂಡಿಲ್ಲ. ಅಪ್ಪ ನನ್ನ ಮುಂದಿನ ಸಿನಿಮಾಗಳ ಬಗ್ಗೆ ಸಮಾಲೋಚಿಸದೇ ಅನೌನ್ಸ್ ಮಾಡಿದ್ದಾರೆ. ಆದರೆ, ಅವುಗಳ ಬಗ್ಗೆ ಈಗ ಹೇಳಲಾರೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net