More

    ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

    ಚೆನ್ನೈ: ಇಂದಿಗೂ ಸಾವಿರಾರು ಅಭಿಮಾನಿಗಳ ಮನದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಎವರ್​ಗ್ರೀನ್​ ನಟಿಯರಲ್ಲಿ ಒಬ್ಬರೆಂದರೆ ಅದು ಖುಷ್ಬೂ ಮಾತ್ರ. ಅವರ ಮೇಲಿನ ಅಭಿಮಾನ ಎಷ್ಟರಮಟ್ಟಿಗೆ ಇದೆ ಅಂದ್ರೆ ಅವರ ಹೆಸರಲ್ಲಿ ಅಭಿಮಾನಿಗಳು ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಖುಷ್ಬೂ ಅವರು 90ರ ದಶಕದ ಮುಂಚೂಣಿ ನಟಿಯರಲ್ಲಿ ಒಬ್ಬರು. ಕನ್ನಡಿಗರಿಗಂತೂ ಖುಷ್ಬೂ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ.

    ಖುಷ್ಬೂ ಅವರು ಸದ್ಯ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಬಿಜೆಪಿ ನಾಯಕಿಯಾಗಿರುವ ಖುಷ್ಬೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಹೌದು. ಬಣ್ಣದ ಲೋಕವನ್ನು ಸಹ ಖುಷ್ಬೂ ಮರೆತಿಲ್ಲ. ಸಮಯ ಸಿಕ್ಕಾಗ ಸಿನಿಮಾಗಳಲ್ಲಿಯೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಾರೆ. ರಜಿನಿಕಾಂತ್​ ಅಭಿನಯದ ಅಣ್ಣಾತೆ ಚಿತ್ರದಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಮೂಡಲ್ ನೀ ಮುಡಿವುಂ ನೀ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದರು. ಅರಮನೈ 4 ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರ ಈ ವರ್ಷ ಬಿಡುಗಡೆಯಾಗಲಿದೆ.

    ಕಲಾವಿದೆ, ರಾಜಕಾರಣಿಯಿಂದಾಚೆಗೆ ಖುಷ್ಬೂ ಓರ್ವ ಉತ್ತಮ ತಾಯಿಯೂ ಹೌದು. ಸುಂದರ್​ ಸಿ ಅವರನ್ನು ವರಿಸಿರುವ ಖುಷ್ಬೂಗೆ ಆವಂತಿಕಾ ಮತ್ತು ಆನಂದಿತಾ ಹೆಸರಿನ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಜವಾಬ್ದಾರಿಯುತ ತಾಯಿಯಾಗಿ ಮಕ್ಕಳನ್ನು ತುಂಬಾ ಜೋಪಾನಾವಾಗಿ ಮತ್ತು ಒಳ್ಳೆಯ ದಾರಿಯಲ್ಲಿ ಬೆಳೆಸುತ್ತಿದ್ದಾರೆ. ಹೀಗಾಗಿಯೇ ಖುಷ್ಬೂ ಅವರು ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಕೆಲವೊಂದು ಸಿನಿಮಾಗಳನ್ನು ನೋಡದಂತೆ ಎಚ್ಚರಿಕೆ ನೀಡಿದ್ದಾರೆ.

    ಯಾವುದು ಆ ಸಿನಿಮಾಗಳು ಅಂತೀರಾ, ಅದೇ ರಣಬೀರ್​ ಕಪೂರ್​ ನಟನೆಯ ಬಾಲಿವುಡ್​ ಸಿನಿಮಾ “ಅನಿಮಲ್” ರೀತಿಯ ಸಿನಿಮಾಗಳನ್ನು ನೋಡದಿರಲು ಎಚ್ಚರಿಕೆ ನೀಡಿದ್ದಾರೆ. ಈ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಯಾವುದೇ ಕಾರಣಕ್ಖೂ ಅನಿಮಲ್​ ಸಿನಿಮಾ ರೀತಿಯ ಸಿನಿಮಾಗಳನ್ನು ನೋಡದಂತೆ ಇಬ್ಬರು ಮಕ್ಕಳಿಗೂ ಖುಷ್ಬೂ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಅನಿಮಲ್​ ಸಿನಿಮಾವನ್ನು ನಾನು ನೋಡಿಲ್ಲ ಎಂದಿದ್ದಾರೆ. ಇತ್ತೀಚೆಗೆ ನಡೆದ ವಿಚಾರ ಸಂಕಿರಣ ಒಂದರಲ್ಲಿ ಈ ವಿಚಾರವನ್ನು ಖುಷ್ಬೂ ಪ್ರಸ್ತಾಪ ಮಾಡಿದ್ದಾರೆ.

    ಅನಿಮಲ್​ ಸಿನಿಮಾ ಸ್ತ್ರೀದ್ವೇಷದ ಚಲನಚಿತ್ರವಾಗಿದ್ದರೆ, ಅದು ಬಾಕ್ಸ್ ಆಫೀಸ್‌ನಲ್ಲಿ ಅತಿದೊಡ್ಡ ಗಳಿಕೆಯನ್ನೂ ಮಾಡಿದ್ದರೆ, ಅದನ್ನು ಯಶಸ್ವಿಗೊಳಿಸುವ ಜನರ ಮನಸ್ಥಿತಿಯ ಬಗ್ಗೆ ನಾವಿಂದು ಯೋಚಿಸಬೇಕು. ‘ಅರ್ಜುನ್ ರೆಡ್ಡಿ’ ಮತ್ತು ‘ಕಬೀರ್ ಸಿಂಗ್’ ಚಿತ್ರಗಳಿಗೂ ಇದೇ ಸಮಸ್ಯೆಗಳಿದ್ದವು. ಇಲ್ಲಿ ನಾನು ನಿರ್ದೇಶಕರನ್ನು ದೂರುವುದಿಲ್ಲ. ಏಕೆಂದರೆ, ಆತನಿಗೆ ಯಶಸ್ಸು ಮಾತ್ರ ಮುಖ್ಯ ಎಂದು ಖುಷ್ಬೂ ಹೇಳಿದರು.

    Rashmika Animal

    ಅನಿಮಲ್​ ಸಿನಿಮಾ ನೋಡಬೇಡಮ್ಮ
    ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಸಿನಿಮಾ ನೋಡಿ ತಿಳಿದುಕೊಳ್ಳುತ್ತೇವೆ. ನಾವು ಹೆಣ್ಣಿನ ಗೌರವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ, ಜನರು ಮಾತ್ರ ಇಂತಹ ಸಿನಿಮಾಗಳನ್ನೇ ನೋಡುತ್ತಾರೆ. ನನ್ನ ಹೆಣ್ಣುಮಕ್ಕಳು ಇಂತಹ ಚಿತ್ರಗಳನ್ನು ನೋಡಬೇಕೆಂದು ನಾನು ಬಯಸುವುದಿಲ್ಲ. ಆದರೆ ಅವರು ‘ಅನಿಮಲ್’ ಅನ್ನು ವೀಕ್ಷಿಸಿದರು. ಏಕೆಂದರೆ ಅದರಲ್ಲಿ ಏನಿದೆ ಎಂದು ತಿಳಿಯಲು ಬಯಸಿದ್ದರು. ಅವರು ಹಿಂತಿರುಗಿ ಬಂದು ಅನಿಮಲ್​ ಸಿನಿಮಾ ನೋಡದಂತೆ ನನಗೆ ಎಚ್ಚರಿಕೆ ನೀಡಿದರು. ನೀವು ಕೂಡ ಅಂತಹ ಸಿನಿಮಾಗಳನ್ನು ನೋಡಬೇಡಿ ಎಂದು ಎಚ್ಚರಿಸಿದ್ದೇನೆ ಎಂದು ಖುಷ್ಬೂ ಹೇಳಿದರು. (ಏಜೆನ್ಸೀಸ್​)

    ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

    ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

    ಅಮಿತಾಭ್​ ಫಾಲೋ ಮಾಡ್ತಿರೋ ಏಕೈಕ ವ್ಯಕ್ತಿ ಯಾರು? ಸೆಲೆಬ್ರಿಟಿ, ಸಂಬಂಧಿಯೂ ಅಲ್ಲ, ಹಾಗಾದ್ರೆ ಮತ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts