More

    ಅಮಿತಾಭ್​ ಫಾಲೋ ಮಾಡ್ತಿರೋ ಏಕೈಕ ವ್ಯಕ್ತಿ ಯಾರು? ಸೆಲೆಬ್ರಿಟಿ, ಸಂಬಂಧಿಯೂ ಅಲ್ಲ, ಹಾಗಾದ್ರೆ ಮತ್ಯಾರು?

    ನವದೆಹಲಿ: ಬಾಲಿವುಡ್​ ಸಿನಿ ದಿಗ್ಗಜ ಅಮಿತಾಭ್​ ಬಚ್ಚನ್​ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಇಂದಿಗೂ ಕೋಟ್ಯಂತರ ಹೃದಯಗಳಲ್ಲಿ ಮನೆ ಮಾಡಿದ್ದಾರೆ. ಕಳೆದ 5 ದಶಕಗಳಿಂದ ಅಮಿತಾಭ್​​, ಮನರಂಜನಾ ಲೋಕದಲ್ಲಿ ತಮ್ಮ ಕೆಲಸ ಮುಂದುವರಿಸಿದ್ದಾರೆ. ಇಂದಿಗೂ ಅವರ ಸಿನಿಮಾಗಳಿಗಾಗಿ ಸಾಕಷ್ಟು ಮಂದಿ ಎದುರು ನೋಡುತ್ತಲೇ ಇರುತ್ತಾರೆ. ಅಂತಹ ಮಹಾನ್​ ಕಲಾವಿದ ಅಮಿತಾಭ್​ ಬಚ್ಚನ್​.

    ಸಿನಿಮಾ ಹೊರತುಪಡಿಸಿದರೆ ಅಮಿತಾಭ್​​​ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಸದಾ ಸಕ್ರಿಯರಾಗಿರುತ್ತಾರೆ. ಟೈಮ್​ ಟು ಟೈಮ್​ ಅಪ್​ಡೇಟ್​ ಕೊಟ್ಟು ಅಭಿಮಾನಿಗಳ ಜತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಫೇಸ್​ಬುಕ್​ನಿಂದ ಇನ್​ಸ್ಟಾಗ್ರಾಂವರೆಗೂ ಕೋಟ್ಯಂತರ ಮಂದಿ ಅಮಿತಾಭ್​ ಅವರನ್ನು ಹಿಂಬಾಲಿಸುತ್ತಿದ್ದಾರೆ. ಆದರೆ, ಅಮಿತಾಭ್ ಮಾತ್ರ ತಮ್ಮ ಫೇಸ್​ಬುಕ್​ನಲ್ಲಿ ಒಬ್ಬರೇ ಒಬ್ಬ ವ್ಯಕ್ತಿಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಆ ವ್ಯಕ್ತಿ ಸೆಲೆಬ್ರಿಟಿಯಂತೂ ಅಲ್ಲ ಮತ್ತು ತುಂಬಾ ಖ್ಯಾತಿಯೂ ಇಲ್ಲ. ಅಷ್ಟೇ ಏಕೆ ಸಂಬಂಧಿಕರೂ ಅಲ್ಲ. ಹಾಗಾದರೆ, ಆ ವ್ಯಕ್ತಿಗೂ ಅಮಿತಾಭ್​ಗೂ ಇರುವ ಸಂಬಂಧವೇನು? ಅಮಿತಾಭ್​ ಆ ಒಬ್ಬ ವ್ಯಕ್ತಿಯನ್ನು ಮಾತ್ರ ಏಕೆ ಫಾಲೋ ಮಾಡುತ್ತಾರೆ? ಎಂಬುದನ್ನು ನಾವೀಗ ತಿಳಿಯೋಣ.

    ಅಂದಹಾಗೆ ಅಮಿತಾಭ್ ಅವರು ಫೇಸ್​ಬುಕ್​ನಲ್ಲಿ​ ಫಾಲೋ ಮಾಡುತ್ತಿರುವ ಏಕೈಕ ವ್ಯಕ್ತಿ ಯಾರೆಂದರೆ ಅವನಿ ರಾಥಿ. ರಿಯಾಲಿಟಿ ಶೋ ಕೌನ್​ ಬನೇಗಾ ಕರೋಡ್​ಪತಿ 14ನೇ ಸೀಸನ್​ನಲ್ಲಿ ಅಮಿತಾಭ್​ ಮತ್ತು ಅವನಿ ರಾಥಿ ಮೊದಲ ಬಾರಿಗೆ ಭೇಟಿಯಾದರು. ಈ ಸೀಸನ್​ನಲ್ಲಿ ಅವನಿ ಸ್ಪರ್ಧಿಯಾಗಿದ್ದರು. ಈಕೆ ಬರಹಗಾರ್ತಿ, ಗೀತ ರಚನೆಗಾರ್ತಿ ಮತ್ತು ಸಂಗೀತ ಸಂಯೋಜಕಿ. ಆಕೆಯ ಫೇಸ್​ಬುಕ್​ ಪೇಜ್​ ನೋಡಿದರೆ ಆಕೆಯ ಅನೇಕ ವಿಡಿಯೋಗಳನ್ನು ನೋಡಬಹುದು. 2022ರಲ್ಲಿ ತನ್ನ ಬ್ಲಾಗ್​ನಲ್ಲಿ ಅಮಿತಾಭ್​ ಅವರು ಅವನಿ ರಾಥಿ ಬಗ್ಗೆ ಉಲ್ಲೇಖಿಸಿದ್ದರು. ಅವಿನಿಯನ್ನು ತಮ್ಮ ಕೈಗಳಿಂದ ಮುಟ್ಟಿ, ಅಮಿತಾಭ್ ಜೊತೆಗಿದ್ದಾರೆ ಎಂಬ ಭಾವನೆ ಬರುವಂತೆ ಆಕೆಯ ಕೈಗಳನ್ನು ಹಿಡಿದುಕೊಂಡೆ ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು.

    ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದ ಅಮಿತಾಬ್, 2019 ರಲ್ಲಿ ನನ್ನ ಹುಟ್ಟುಹಬ್ಬದಂದು ಅವನಿ ನನಗೆ ಪತ್ರ ಬರೆದಿದ್ದರು, ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ನಿಮ್ಮ ಪತ್ರವನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದೆ. ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಫಾಲೋ ಮಾಡುತ್ತಿರುವುದಾಗಿ ಹೇಳಿದ್ದಳು. ಇದಾದ ನಂತರ ನಾನು ಕೂಡ ಆಕೆಯನ್ನು ಫಾಲೋ ಮಾಡುವುದಾಗಿ ಭರವಸೆ ನೀಡಿದ್ದೆ. ಇದಾದ ನಂತರ ಅಮಿತಾಭ್, ಅವನಿ ಅವರನ್ನು ಇನ್‌ಸ್ಟಾ, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಅನುಸರಿಸಿದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಿಸಿಎಲ್​ 2024: ಕಿಚ್ಚನ ಮೋಜಿನ ಕ್ಷಣಗಳಿಗೆ ಫ್ಯಾನ್ಸ್​ ಫಿದಾ! ಶಾರ್ಜಾದಲ್ಲಿ ರಾರಾಜಿಸಿದ ಕನ್ನಡ ಬಾವುಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts