More

  ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

  ಚೆನ್ನೈ: ಕಾಲಿವುಡ್​ ಸ್ಟಾರ್​ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಮೆಗಾ ಹಿಟ್​ “ಡಾಕ್ಟರ್​” ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದ ನಟಿ ಪ್ರಿಯಾಂಕಾ ಮೋಹನ್​, ಇದೀಗ ತಮಿಳು ಚಿತ್ರರಂಗದಲ್ಲಿ ಸ್ಟಾರ್​ ನಟಿಯರ ಸಾಲಿಗೆ ಸೇರಿದ್ದಾರೆ. ಒಂದು ಕತೆ ಹೇಳ್ಲಾ ಹೆಸರಿನ ಕನ್ನಡ ಸಿನಿಮಾ ಮೂಲಕ ಪ್ರಿಯಾಂಕಾ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಅವರು ಇಂಜಿನಿಯರ್​ ಆಗಿದ್ದುಕೊಂಡು ಮಾಡೆಲಿಂಗ್​ ಸಹ ಮಾಡುತ್ತಿದ್ದರು. ಆದರೆ, ಡಾಕ್ಟರ್​ ಸಿನಿಮಾದಲ್ಲಿ ನಟಿಸಿದರ ಬಳಿಕ ಪ್ರಿಯಾಂಕಾ ಲಕ್​ ಬದಲಾಯಿತು. ಸಾಕಷ್ಟು ಸಿನಿಮಾ ಆಫರ್​ಗಳು ಹುಡುಕೊಂಡು ಬಂದವು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

  ಸಿನಿಮಾ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಪ್ರಿಯಾಂಕಾ ಸಕ್ರಿಯವಾಗಿದ್ದಾರೆ. ಶೂಟಿಂಗ್​ನಿಂದ ಬಿಡುವು ಸಿಕ್ಕಾಗ ಅಭಿಮಾನಿಗಳ ಜತೆ ಆಗಾಗ ಇನ್​ಸ್ಟಾಗ್ರಾಂನಲ್ಲಿ ಚಾಟ್​ ಮಾಡುತ್ತಿರುತ್ತಾರೆ. ನಿನ್ನೆಯಷ್ಟೇ ಇನ್​ಸ್ಟಾಗ್ರಾಂನಲ್ಲಿ Ask Away ಸೆಷನ್ಸ್​ ನಡೆಸಿದ್ದರು. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಪ್ರಿಯಾಂಕ ಮುಕ್ತವಾಗಿ ಉತ್ತರಿಸಿದ್ದಾರೆ.

  ಅಕ್ಕ ನಿಮಗೆ ಎಷ್ಟು ಭಾಷೆಗಳು ಬರುತ್ತವೆ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ, ತಮಿಳು, ತೆಲುಗು, ಕನ್ನಡ, ಇಂಗ್ಲಿಷ್​ ಮತ್ತು ಹಿಂದಿ ಬರುತ್ತದೆ ಎಂದು ಪ್ರಿಯಾಂಕಾ ಉತ್ತರಿಸಿದ್ದಾರೆ. ನಿಮ್ಮ ನೆಚ್ಚಿನ ಕ್ರಿಕೆಟರ್​ ಯಾರು ಎಂಬ ಪ್ರಶ್ನೆಗೆ ಧೋನಿ ಎಂದು ಹೇಳಿದ್ದಾರೆ. ಹೀಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗೆ ಪ್ರಿಯಾಂಕಾ ಉತ್ತರ ನೀಡಿದ್ದಾರೆ.

  ಬೇಡಿಕೊಂಡ ಅಭಿಮಾನಿ
  ಸಾಕಷ್ಟು ಪ್ರಶ್ನೆಗಳ ನಡುವೆ ಅಭಿಮಾನಿಯೊಬ್ಬ ಪ್ರಿಯಾಂಕಾ ಬಳಿ ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದರು. ಅಲ್ಲದೆ, ಪರಿ ಪರಿಯಾಗಿ ಬೇಡಿಕೊಂಡಿದ್ದು, ಪ್ರಿಯಾಂಕಾ ಸಹ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ. ಅಭಿಮಾನಿ ಬೇಡಿಕೊಂಡಿದ್ದೇನು ಅನ್ನೋದಾದರೆ, ಮೇಡಂ ನಾನು ನಿಮ್ಮ ಉಗುರುಗಳನ್ನು ನೋಡಬೇಕು ದಯವಿಟ್ಟು ಪೋಸ್ಟ್​ ಮಾಡಿ ಎಂದು ಅಭಿಮಾನಿ ಕೇಳಿಕೊಂಡಿದ್ದ. ಇದಕ್ಕೆ ಸ್ಪಂದಿಸಿರುವ ಪ್ರಿಯಾಂಕಾ ತಮ್ಮ ಬೆರಳುಗಳು ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ ಇದೀಗ ಎಲ್ಲೆಡೆ ಸುದ್ದಿಯಾಗಿದೆ.

  Priyanka 1

  ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ತೆರೆಕಂಡ ಧನುಷ್​ ಹಾಗೂ ಶಿವರಾಜ್​ ಕುಮಾರ್​ ನಟನೆಯ ಕ್ಯಾಪ್ಟನ್​ ಮಿಲ್ಲರ್​ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಿದ್ದರು. ಈ ಸಿನಿಮಾ ಪ್ರಿಯಾಂಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ತೆಲುಗಿನಲ್ಲಿ ನಾನಿ ಜತೆ ಸರಿಪೋದಾ ಶನಿವಾರಂ ಚಿತ್ರದಲ್ಲಿ ನಟಿಸಲಿದ್ದಾರೆ. ಅಲ್ಲದೆ, ಒಜಿ ಸಿನಿಮಾದಲ್ಲಿ ಪವನ್​ ಕಲ್ಯಾಣ್​ಗೆ ನಾಯಕಿಯಾಗಿದ್ದಾರೆ. ಈ ಸಿನಿಮಾ ಇದೇ ವರ್ಷ ಸೆ.27ಕ್ಕೆ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

  ಪ್ರಿಯಾಂಕಾ ಮೋಹನ್​ 20 ನಿಮಿಷದ ಬೆಡ್​ರೂಮ್​​ ದೃಶ್ಯ! ಕೋಟಿ ರೂ. ನಷ್ಟ, ಠಾಣೆ ಮೆಟ್ಟಿಲೇರಿದ ನಿರ್ಮಾಪಕ

  ಪ್ರಿಯಾಂಕಾ ಬೆಡ್​ರೂಮ್​​ ಸೀನ್ ನೋಡಿ ಥಿಯೇಟರ್​ಗೆ ಹೋದವರಿಗೆ ಕಾದಿತ್ತು ಅಚ್ಚರಿ! ನಟಿಯ ಮೇಲೆಯೇ ಸಂಶಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts