More

    ಪ್ರಿಯಾಂಕಾ ಮೋಹನ್​ 20 ನಿಮಿಷದ ಬೆಡ್​ರೂಮ್​​ ದೃಶ್ಯ! ಕೋಟಿ ರೂ. ನಷ್ಟ, ಠಾಣೆ ಮೆಟ್ಟಿಲೇರಿದ ನಿರ್ಮಾಪಕ

    ಚೆನ್ನೈ: ನಟಿ ಪ್ರಿಯಾಂಕಾ ಮೋಹನ್ ಅವರ 20 ನಿಮಿಷಗಳ ದೃಶ್ಯಾವಳಿಗಳನ್ನು ಕೊನೆಯ ಕ್ಷಣದಲ್ಲಿ ಕಳೆದುಕೊಂಡಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸಬೇಕಾಯಿತು ಆರೋಪಿಸಿ ತಮಿಳಿನ ಟಿಕ್​ಟಾಕ್​ ಸಿನಿಮಾದ ನಿರ್ಮಾಪಕ ಮದನ್ ಚೆನ್ನೈನಲ್ಲಿ ದೂರು ದಾಖಲಿಸಿದ್ದಾರೆ.

    ಕಾಲಿವುಡ್​ ಸ್ಟಾರ್​ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಮೆಗಾ ಹಿಟ್​ “ಡಾಕ್ಟರ್​” ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದ ನಟಿ ಪ್ರಿಯಾಂಕಾ ಮೋಹನ್​, ಇದೀಗ ತಮಿಳು ಚಿತ್ರರಂಗದಲ್ಲಿ ಸ್ಟಾರ್​ ನಟಿಯರ ಸಾಲಿಗೆ ಸೇರಿದ್ದಾರೆ. ಒಂದು ಕತೆ ಹೇಳ್ಲಾ ಹೆಸರಿನ ಕನ್ನಡ ಸಿನಿಮಾ ಮೂಲಕ ಪ್ರಿಯಾಂಕಾ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಅವರು ಇಂಜಿನಿಯರ್​ ಆಗಿದ್ದುಕೊಂಡು ಮಾಡೆಲಿಂಗ್​ ಸಹ ಮಾಡುತ್ತಿದ್ದರು. ಆದರೆ, ಡಾಕ್ಟರ್​ ಸಿನಿಮಾದಲ್ಲಿ ನಟಿಸಿದರ ಬಳಿಕ ಪ್ರಿಯಾಂಕಾ ಲಕ್​ ಬದಲಾಯಿತು. ಸಾಕಷ್ಟು ಸಿನಿಮಾ ಆಫರ್​ಗಳು ಹುಡುಕೊಂಡು ಬಂದವು.

    ಇದುವರೆಗೂ ತಾವು ನಟಿಸಿದ ಸಿನಿಮಾಗಳಲ್ಲಿ ಎಲ್ಲಿಯೂ ಪ್ರಿಯಾಂಕಾ ಮೋಹನ್​ಬೋಲ್ಡ್​ ಆಗಿ ಕಾಣಿಸಿಲ್ಲ. ಡಾಕ್ಟರ್​, ಡಾನ್​ ಮತ್ತು ಎತರ್ಕ್ಕುಂ ತೂನಿಂಧವನ್ ಸಿನಿಮಾಗಳಲ್ಲಿ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಧನುಷ್​ ನಟನೆಯ ಕ್ಯಾಪ್ಟನ್​ ಮಿಲ್ಲರ್​ ಸಿನಿಮಾದಲ್ಲಿಯೂ ಪ್ರಿಯಾಂಕಾ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಅವರ ನಟನೆಯ ಟಿಕ್​ಟಾಕ್​ ಸಿನಿಮಾ ಸಹ ಬಿಡುಗಡೆಯಾಯಿತು. ಅಸಲಿ ಸಂಗತಿ ಏನೆಂದರೆ, ಬಿಡುಗಡೆ ಅಂತ ಬಂದಾಗ ಪ್ರಿಯಾಂಕಾ ಅವರಿಗೆ ಡಾಕ್ಟರ್​ ಮೊದಲ ಸಿನಿಮಾ. ಆದರೆ, ನಟನೆ ಅಂತ ಬಂದಾಗ ಟಿಕ್​ಟಾಕ್​ ಮೊದಲ ಸಿನಿಮಾವಾಗಿದೆ. ಮೊದಲ ಶೂಟಿಂಗ್​ ಆಗಿದ್ದರೂ ಸಹ ಕಾರಣಾಂತರಗಳಿಂದ ಸಿನಿಮಾ ತಡವಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದರೂ ಈ ದಿನಿಮಾ ಫ್ಲಾಪ್​ ಆಯಿತು.

    ಈ ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಅಭಿನಯದ 20 ನಿಮಿಷಗಳ ದೃಶ್ಯಗಳು ಕಾಣೆಯಾಗಿವೆ ಎಂದು ಮದನ್​ ಆರೋಪಿಸಿದ್ದಾರೆ. ಟಿಕ್ ಟಾಕ್ ಸಿನಿಮಾವನ್ನು 3.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಮತ್ತು ಕೆಲವು ಸಮಸ್ಯೆಗಳಿಂದಾಗಿ ಚಿತ್ರ ತಡವಾಗಿ ಬಿಡುಗಡೆಯಾಯಿತು. ಕಳೆದ ವರ್ಷ ಡಿಸೆಂಬರ್​ನಲ್ಲಿ ಡಿಎಸ್​ಆರ್ ಫಿಲಂಸ್ ಮೂಲಕ ಸಿನಿಮಾ ಬಿಡುಗಡೆ ಮಾಡಿದ್ದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ನನಗೆ ತುಂಬಾ ಆಘಾತವಾಯಿತು. ಏಕೆಂದರೆ, ಪ್ರಿಯಾಂಕಾ ಅವರ 20 ನಿಮಿಷಗಳ ನಿರ್ಣಾಯಕ ದೃಶ್ಯಗಳು ಬರಲೇ ಇಲ್ಲ. ನನಗೆ ತಿಳಿಯದಂತೆ ಆ ದೃಶ್ಯವನ್ನು ಪ್ಲಾನ್ ಮಾಡಿ ಡಿಲೀಟ್ ಮಾಡಲಾಗಿದೆ. ಇದರಿಂದಾಗಿ ಥಿಯೇಟರ್‌ನಲ್ಲಿ ಟಿಕ್‌ಟಾಕ್ ಚಿತ್ರವು ಪ್ಲೇ ಆಗಲಿಲ್ಲ. ನನಗೆ 3.50 ಕೋಟಿ ರೂ. ನಷ್ಟವಾಗಿದೆ. ಹೀಗಾಗಿ ಡಿಎಸ್​ಆರ್ ಫಿಲಂಸ್ ಹಾಗೂ ಸಂಸ್ಥೆಯ ಮಾಸ್ಟರಿಂಗ್ ಎಂಜಿನಿಯರ್ ದಿನೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿರ್ಮಾಪಕ ಮದನ ಕುಮಾರ್ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    20 ನಿಮಿಷದ ದೃಶ್ಯದಲ್ಲಿ ಏನಿತ್ತು?
    ಇದುವರೆಗೂ ಪ್ರಿಯಾಂಕಾ ಮೋಹನ್​, ಹೋಮ್ಲಿ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಆದರೆ, ಟಿಕ್​ಟಾಕ್​ ಸಿನಿಮಾದ 20 ನಿಮಿಷದ ದೃಶ್ಯಗಳಲ್ಲಿ ಮೊದಲ ಬಾರಿಗೆ ಬೆಡ್​ರೂಮ್​ನಲ್ಲಿ ಹಸಿಬಿಸಿ ಅವತಾರಗಳಲ್ಲಿ ಪ್ರಿಯಾಂಕಾ ನಟಿಸಿದ್ದರು. ಟ್ರೈಲರ್​ನಲ್ಲಿ ಈ ದೃಶ್ಯದ ಝಲಕ್​ ನೋಡಿ ಅಭಿಮಾನಿಗಳೇ ಶಾಕ್​ ಆಗಿದ್ದರು. ಆದರೆ, ಈ ದೃಶ್ಯ ಚಿತ್ರಮಂದಿರಗಳಲ್ಲಿ ಇರಲೇ ಇಲ್ಲ. ​

    ಅವರನ್ನು ನೋಡುತ್ತಿದ್ದ ಅಭಿಮಾನಿಗಳು ಟಿಕ್​ಟಾಕ್​ ಸಿನಿಮಾದ ಟ್ರೈಲರ್​ ನೋಡಿ ಒಂದು ಕ್ಷಣ ಶಾಕ್​ ಆದರು. ಕಾರಣ ಟ್ರೈಲರ್​ನಲ್ಲಿ ಬೆಡ್​ರೂಮ್​ ದಶ್ಯಗಳಿದ್ದವು. ಇದೇ ಮೊದಲ ಬಾರಿಗೆ ಇಂತಹ ಅವತಾರದಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಆದರೆ, ಆ ದೃಶ್ಯಗಳೇ

    ಪ್ರಿಯಾಂಕಾ ಮೇಲೆಯೂ ಅನುಮಾನ
    ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಿಯಾಂಕಾ ಮೋಹನ್​ ಮೇಲೆಯೂ ಅನುಮಾನ ವ್ಯಕ್ತವಾಗಿದೆ. ಅವರೇ ಬೆಡ್​ರೂಮ್​ ಸೀನ್​ ಡಿಲೀಟ್​ ಮಾಡಿಸಿರಬಹುದು ಎನ್ನಲಾಗುತ್ತಿದೆ. ಹೋಮ್ಲಿ ಪಾತ್ರಗಳನ್ನು ಮಾಡುತ್ತಿರುವುದರ ನಡುವೆ ಟಿಕ್​ಟಾಕ್​ ಸಿನಿಮಾದ ಬೆಡ್​ರೂಮ್​ ಸೀನ್​ ಚರ್ಚೆಯಾದರೆ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಅಭಿಮಾನಿಗಳ ದೃಷ್ಟಿಯು ಬದಲಾಗಬಹುದು ಅಂತಾ ಪ್ರಿಯಾಂಕಾ ಅವರೇ ಡಿಲೀಟ್​ ಮಾಡಿಸಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಪ್ರಿಯಾಂಕಾ ಬೆಡ್​ರೂಮ್​​ ಸೀನ್ ನೋಡಿ ಥಿಯೇಟರ್​ಗೆ ಹೋದವರಿಗೆ ಕಾದಿತ್ತು ಅಚ್ಚರಿ! ನಟಿಯ ಮೇಲೆಯೇ ಸಂಶಯ

    ಬೆಳಗ್ಗೆಯಾದ್ರೆ ಪೊಲೀಸ್​ ಸಂಜೆ… ನಂಬರ್​ ಪ್ಲೇಟ್​ ಇಲ್ಲದ ಅಧಿಕಾರಿಯ ಬೈಕ್​ ರಹಸ್ಯ ಬಟಾಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts