More

    ಬೆಳಗ್ಗೆಯಾದ್ರೆ ಪೊಲೀಸ್​ ಸಂಜೆ… ನಂಬರ್​ ಪ್ಲೇಟ್​ ಇಲ್ಲದ ಅಧಿಕಾರಿಯ ಬೈಕ್​ ರಹಸ್ಯ ಬಟಾಬಯಲು

    ಕೊಯಮತ್ತೂರು: ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ. ಸಾರ್ವಜನಿಕರನ್ನು ಕಾವಲು ಕಾಯಬೇಕಾದ ಪೊಲೀಸ್​ ಅಧಿಕಾರಿಯೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಸಂಗ ಕೊಯಮತ್ತೂರಿನಲ್ಲಿ ಜರುಗಿದೆ. ಎರಡು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ ಆರೋಪದ ಹೆಡ್ ಕಾನ್‌ಸ್ಟೆಬಲ್​ನನ್ನು ಕೊಯಮತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಶುಕ್ರವಾರ (ಫೆ.02) ಬಂಧಿಸಿದ್ದಾರೆ.

    ಬಂಧಿತ ಹೆಡ್​ ಕಾನ್ಸ್​ಟೆಬಲ್​ನನ್ನು ಪೊಲ್ಲಾಚಿ ಸಮೀಪದ ಮಕ್ಕಿನಂಪಟ್ಟಿ ನಿವಾಸಿ ಆರ್. ಶಬರಿಗಿರಿ (41) ಎಂದು ಗುರುತಿಸಲಾಗಿದೆ. 2003ರ ಬ್ಯಾಚ್‌ನ ಪೊಲೀಸ್‌ ಅಧಿಕಾರಿಯಾಗಿರುವ ಅವರು ಚೆಟ್ಟಿಪಾಳ್ಯಂ ಪೊಲೀಸ್‌ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

    ಜನವರಿ 27 ರಂದು ನಂಬರ್ ಪ್ಲೇಟ್ ಇಲ್ಲದ ಹೊಚ್ಚಹೊಸ ಬೈಕ್​ ಏರಿ, ಹೆಲ್ಮೆಟ್ ಧರಿಸಿ ಕಾನ್ಸ್​ಟೆಬಲ್​ ಶಬರಿಗಿರಿ ಮಹಿಳೆಯರಿಬ್ಬರ ಬಳಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಮಕ್ಕಿನಂಪಟ್ಟಿ ಮತ್ತು ಪಲಮನಲ್ಲೂರಿನ ಸರಗಳ್ಳತನ ಯತ್ನದಲ್ಲೂ ಈತ ಭಾಗಿಯಾಗಿದ್ದ. ಬೆಳಗ್ಗೆ ಪೊಲೀಸ್​ ಅಧಿಕಾರಿಯಾಗಿ ಜನರ ಸೇವೆಯ ನಾಟಕವಾಡುತ್ತಿದ್ದ ಕಾನ್ಸ್​ಟೆಬಲ್​ ಸಂಜೆ ಕಳ್ಳತನಕ್ಕೆ ಇಳಿಯುವ ಮೂಲಕ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದ.

    ಪೊಲ್ಲಾಚಿ ಪೂರ್ವ ಪೊಲೀಸ್ ಠಾಣೆಯ ವಿಶೇಷ ತಂಡ ಪ್ರಕರಣದ ತನಿಖೆ ನಡೆಸಿದ, ಟಾಸ್ಮಾಕ್ ಬಾರ್‌ನಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಶಬರಿಗಿರಿಯನ್ನು ಬಂಧಿಸಿದ್ದಾರೆ. ಮಕ್ಕಿನಂಪಟ್ಟಿಯಲ್ಲಿರುವ ಶಬರಿ ಅವರ ನಿವಾಸದಿಂದ ದ್ವಿಚಕ್ರವಾಹನ, ಹೆಲ್ಮೆಟ್ ಮತ್ತು ಜಾಕೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯಿಂದ ಆರು ಪವನ್ ತೂಕದ ಎರಡು ಚಿನ್ನದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಶಬರಿ ವಿರುದ್ಧದ ಸರಣಿ ಆರೋಪಗಳ ಹಿನ್ನೆಲೆಯಲ್ಲಿ ಪೊಲ್ಲಾಚಿ ಪೂರ್ವ ಪೊಲೀಸರಿಂದ ಮೆಟ್ಟುಪಾಳ್ಯಂ ಠಾಣೆಗೆ ಕಳೆದ ವರ್ಷ ಹಿಂದೆ ಆತನನ್ನು ವರ್ಗಾವಣೆ ಮಾಡಲಾಗಿತ್ತು. ನಂತರ ಅವರನ್ನು ಚೆಟ್ಟಿಪಾಳ್ಯಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಈತ ಚೆಟ್ಟಿಪಾಳ್ಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    32 ವರ್ಷಗಳಿಂದ ಸಮುದ್ರದಲ್ಲಿ ತೇಲುತ್ತಿದ್ದ ಬಾಟಲಿ…ಅದರಲ್ಲಿದ್ದ ಸಂದೇಶ ಓದಿ ಭಾವುಕಾರದ ವ್ಯಕ್ತಿ!

    ಗೋಬಿ ಮಂಚೂರಿಯನ್ ನಿಷೇಧ, ಇನ್ಮುಂದೆ ಮಾರಾಟ ಮಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts