More

    ಪ್ರಿಯಾಂಕಾ ಬೆಡ್​ರೂಮ್​​ ಸೀನ್ ನೋಡಿ ಥಿಯೇಟರ್​ಗೆ ಹೋದವರಿಗೆ ಕಾದಿತ್ತು ಅಚ್ಚರಿ! ನಟಿಯ ಮೇಲೆಯೇ ಸಂಶಯ

    ಚೆನ್ನೈ: ಕಾಲಿವುಡ್​ ಸ್ಟಾರ್​ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಮೆಗಾ ಹಿಟ್​ “ಡಾಕ್ಟರ್​” ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದ ನಟಿ ಪ್ರಿಯಾಂಕಾ ಮೋಹನ್​, ಇದೀಗ ತಮಿಳು ಚಿತ್ರರಂಗದಲ್ಲಿ ಸ್ಟಾರ್​ ನಟಿಯರ ಸಾಲಿಗೆ ಸೇರಿದ್ದಾರೆ.

    ಒಂದು ಕತೆ ಹೇಳ್ಲಾ ಹೆಸರಿನ ಕನ್ನಡ ಸಿನಿಮಾ ಮೂಲಕ ಪ್ರಿಯಾಂಕಾ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಅವರು ಇಂಜಿನಿಯರ್​ ಆಗಿದ್ದುಕೊಂಡು ಮಾಡೆಲಿಂಗ್​ ಸಹ ಮಾಡುತ್ತಿದ್ದರು. ಆದರೆ, ಡಾಕ್ಟರ್​ ಸಿನಿಮಾದಲ್ಲಿ ನಟಿಸಿದರ ಬಳಿಕ ಪ್ರಿಯಾಂಕಾ ಲಕ್​ ಬದಲಾಯಿತು. ಸಾಕಷ್ಟು ಸಿನಿಮಾ ಆಫರ್​ಗಳು ಹುಡುಕೊಂಡು ಬಂದವು.

    ಇದುವರೆಗೂ ತಾವು ನಟಿಸಿದ ಸಿನಿಮಾಗಳಲ್ಲಿ ಎಲ್ಲಿಯೂ ಪ್ರಿಯಾಂಕಾ ಮೋಹನ್​ಬೋಲ್ಡ್​ ಆಗಿ ಕಾಣಿಸಿಲ್ಲ. ಡಾಕ್ಟರ್​, ಡಾನ್​ ಮತ್ತು ಎತರ್ಕ್ಕುಂ ತೂನಿಂಧವನ್ ಸಿನಿಮಾಗಳಲ್ಲಿ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ರಿಲೀಸ್​ಗೆ ರೆಡಿಯಾಗಿರುವ ಧನುಷ್​ ನಟನೆಯ ಕ್ಯಾಪ್ಟನ್​ ಮಿಲ್ಲರ್​ ಸಿನಿಮಾದಲ್ಲಿಯೂ ಪ್ರಿಯಾಂಕಾ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ. ತಮ್ಮ ಸಭ್ಯ ಪಾತ್ರಗಳಿಂದಲೂ ಎಲ್ಲರ ಮೆಚ್ಚುಗೆ ಗಳಿಸಿರುವ ಪ್ರಿಯಾಂಕಾ ಇದೀಗ ವಿವಾದವೊಂದಕ್ಕೆ ಸಿಲುಕಿದ್ದಾರೆ.

    ಇತ್ತೀಚೆಗಷ್ಟೇ ಅವರ ನಟನೆಯ ಟಿಕ್​ಟಾಕ್​ ಸಿನಿಮಾ ಬಿಡುಗಡೆಯಾಯಿತು. ಅಸಲಿ ಸಂಗತಿ ಏನೆಂದರೆ, ಬಿಡುಗಡೆ ಅಂತ ಬಂದಾಗ ಪ್ರಿಯಾಂಕಾ ಅವರಿಗೆ ಡಾಕ್ಟರ್​ ಮೊದಲ ಸಿನಿಮಾ. ಆದರೆ, ನಟನೆ ಅಂತ ಬಂದಾಗ ಟಿಕ್​ಟಾಕ್​ ಮೊದಲ ಸಿನಿಮಾವಾಗಿದೆ. ಮೊದಲ ಶೂಟಿಂಗ್​ ಆಗಿದ್ದರೂ ಸಹ ಕಾರಣಾಂತರಗಳಿಂದ ಸಿನಿಮಾ ತಡವಾಗಿ ಬಿಡುಗಡೆಯಾಗಿದೆ. ಇದುವರೆಗೂ ಹೋಮ್ಲಿ ಪಾತ್ರಗಳಲ್ಲಿ ಪ್ರಿಯಾಂಕಾ ಮೋಹನ್​ ಅವರನ್ನು ನೋಡುತ್ತಿದ್ದ ಅಭಿಮಾನಿಗಳು ಟಿಕ್​ಟಾಕ್​ ಸಿನಿಮಾದ ಟ್ರೈಲರ್​ ನೋಡಿ ಒಂದು ಕ್ಷಣ ಶಾಕ್​ ಆದರು. ಕಾರಣ ಟ್ರೈಲರ್​ನಲ್ಲಿ ಬೆಡ್​ರೂಮ್​ ದಶ್ಯಗಳಿದ್ದವು. ಇದೇ ಮೊದಲ ಬಾರಿಗೆ ಇಂತಹ ಅವತಾರದಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ.

    ಬೆಡ್​ರೂಮ್​ ದೃಶ್ಯಕ್ಕೆ ಸ್ಫೋಟಕ ತಿರುವು
    ಟ್ರೈಲರ್​ ಬಿಡುಗಡೆಯಾದ ಬಳಿಕ ಸಿನಿಮಾ ನೋಡಿದವರಿಗೆ ಅಚ್ಚರಿಯ ಸಂಗತಿಯೊಂದು ಕಾದಿತ್ತು. ಅದೇನೆಂದರೆ, ಟ್ರೈಲರ್​ನಲ್ಲಿ ಪ್ರಿಯಾಂಕಾ ಅವರ ಬೆಡ್​ರೂಮ್​ ಸೀನ್​ ನೋಡಿದವರಿಗೆ ಚಿತ್ರದಲ್ಲಿ ಕಾಣಿಸಲೇ ಇಲ್ಲ. ಆ ದೃಶ್ಯವನ್ನು ತೆಗೆದಹಾಕಲಾಗಿದೆ. ಎರಡೂವರೆ ಗಂಟೆ ಸಿನಿಮಾದಲ್ಲಿ 20 ನಿಮಿಷದ ಪ್ರಿಯಾಂಕಾ ಅವರ ದೃಶ್ಯವನ್ನು ತೆಗೆದುಹಾಕಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿ ಎಂದು ಹೇಳಲಾಗುತ್ತಿದೆ.

    ಇಡೀ ಚಿತ್ರದ ಮಾಸ್ಟರ್ ಕಾಪಿಯನ್ನು ನಾವು ನೋಡಿಲ್ಲ. ಚಿತ್ರಮಂದಿರದಲ್ಲಿ ಚಿತ್ರ ನೋಡಿದೆವು. ಆಗ 20 ನಿಮಿಷದ ದೃಶ್ಯ ಇಲ್ಲ ಎಂಬುದು ಸ್ಪಷ್ಟವಾಯಿತು. ಕ್ಯೂಬ್, ಯುಎಫ್​ಒ ತಂತ್ರಜ್ಞಾನ ಇರುವ ಥಿಯೇಟರ್​ನಲ್ಲಿ ಎಲ್ಲವೂ ಚೆನ್ನಾಗಿದೆ. ಆದರೆ ಡಿಎಸ್​ಆರ್ ತಂತ್ರಜ್ಞಾನ ಇರುವ ಥಿಯೇಟರ್​ಗಳಲ್ಲಿ ಪ್ರಿಯಾಂಕಾ ಮೋಹನ್​ ದೃಶ್ಯಗಳೇ ಇಲ್ಲ. ಚೆನ್ನೈನಲ್ಲಿ ಒಟ್ಟು 7 ಚಿತ್ರಮಂದಿರಗಳಲ್ಲಿ ಈ ಸೌಲಭ್ಯವಿದೆ. ವಿವರಣೆಗಾಗಿ ಟಿಎಸ್‌ಆರ್‌ಗೆ ನೋಟಿಸ್‌ ಕಳುಹಿಸಿದ್ದೇವೆ ಎಂದು ಚಿತ್ರದ ನಿರ್ಮಾಪಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಸಿನಿಮಾ ಬಗ್ಗೆ ನೆಗೆಟಿವ್​ ಪ್ರತಿಕ್ರಿಯೆ
    ಚಿತ್ರವು ಮೊದಲ ದಿನದಲ್ಲಿ ನಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಇದರ ನಡುವೆ ಪ್ರಿಯಾಂಕಾ ಮೋಹನ್​ ದೃಶ್ಯಕ್ಕೆ ಕತ್ತರಿ ಬಿದ್ದಿರುವುದು ಕೂಡ ಚಿತ್ರದ ಮೇಲೆ ಪರಿಣಾಮ ಬೀರಿದ್ದು, ನಿರ್ಮಾಪಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಸದ್ಯ ಟಿಕ್​ಟಾಕ್ ಚಿತ್ರ ಥಿಯೇಟರ್‌ಗಳಲ್ಲಿ ಮಾತ್ರ ಓಡುತ್ತಿದೆ. ಪ್ರಿಯಾಂಕಾ ಮೋಹನ್ ಅವರ ದೃಶ್ಯಗಳನ್ನು ಮಾತ್ರ ಅಳಿಸಲಾಗಿದ್ದು, ಇದರ ಹಿಂದೆ ಯಾರಾದರೂ ಇದ್ದಾರೆಯೇ ಎಂಬುದು ತಿಳಿದಿಲ್ಲ. ನಾವು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಚಿತ್ರ ಬಿಡುಗಡೆ ಮಾಡಲು ನಾವು ತುಂಬಾ ಕಷ್ಟಪಟ್ಟಿದ್ದೇವೆ ಎಂದು ನಿರ್ಮಾಪಕರು ಬೇಸರ ಹೊರಹಾಕಿದ್ದಾರೆ.

    ಪ್ರಿಯಾಂಕಾ ಮೇಲೆ ಅನುಮಾನ
    ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಿಯಾಂಕಾ ಮೋಹನ್​ ಮೇಲೆಯೂ ಅನುಮಾನ ವ್ಯಕ್ತವಾಗಿದೆ. ಅವರೇ ಬೆಡ್​ರೂಮ್​ ಸೀನ್​ ಡಿಲೀಟ್​ ಮಾಡಿಸಿರಬಹುದು ಎನ್ನಲಾಗುತ್ತಿದೆ. ಹೋಮ್ಲಿ ಪಾತ್ರಗಳನ್ನು ಮಾಡುತ್ತಿರುವುದರ ನಡುವೆ ಟಿಕ್​ಟಾಕ್​ ಸಿನಿಮಾದ ಬೆಡ್​ರೂಮ್​ ಸೀನ್​ ಚರ್ಚೆಯಾದರೆ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಅಭಿಮಾನಿಗಳ ದೃಷ್ಟಿಯು ಬದಲಾಗಬಹುದು ಅಂತಾ ಪ್ರಿಯಾಂಕಾ ಅವರೇ ಡಿಲೀಟ್​ ಮಾಡಿಸಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಚಿನ್ನ ಲೇಪಿತ ಪಾದರಕ್ಷೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ಭಕ್ತ: ಪಾದುಕೆಗಳ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಅಮ್ಮ ಐ ಲವ್​ ಯೂ, ಮಿಸ್​ ಯೂ ಅಂತ ಹೇಳಿ ಸಾವಿನ ಹಾದಿ ಹಿಡಿದ ಯುವಕ: ಪಬ್​ಜಿ ಗೀಳಿಗೆ ಬಿಕಾಂ ವಿದ್ಯಾರ್ಥಿ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts