More

    ಫ್ಯಾನ್ಸ್​ಗೆ ಬಂಪರ್ ಆಫರ್? ‘ಸಲಾರ್’ ಬೈಕ್ ಗೆಲ್ಲೋ ಅವಕಾಶ..ಏನು ಮಾಡಬೇಕು? ಇಲ್ಲಿದೆ ಮಾಹಿತಿ..

    ಹೈದರಾಬಾದ್​: ತೆಲುಗಿನ ಸ್ಟಾರ್ ನಟ ಪ್ರಭಾಸ್ ಅಭಿನಯಿಸಿರುವ ‘ಸಲಾರ್’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ಬೈಕ್ ಸಖತ್ ಸದ್ದು ಮಾಡಿತ್ತು. ಇದೀಗ ಈ ಬೈಕ್ ಗೆಲ್ಲುವ ಅವಕಾಶವನ್ನು ಹೊಂಬಾಳೆ ಫಿಲ್ಮ್ಸ್ ನೀಡಿದೆ.

    ಇದನ್ನೂ ಓದಿ: ಪಾಕ್​ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಇಬ್ಬರು ಮೃತ್ಯು- ಜಪಾನ್ ಪ್ರಜೆಗಳು ಪಾರು

    ಬಾಕ್ಸ್ ಆಫೀಸ್ ನಲ್ಲಿ 700 ಕೋಟಿ ರೂ. ಕೊಳ್ಳೆ ಹೊಡೆದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಬಳಸಿದ ಬೈಕ್ ಅನ್ನು ಭಿನ್ನವಾಗಿ ಡಿಸೈನ್ ಮಾಡಲಾಗಿತ್ತು. ಹೀಗಾಗಿಯೇ ಆ ಬೈಕ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿತ್ತು. ಇದೀಗ ಆ ಬೈಕ್ ಗೆಲ್ಲೋ ಅವಕಾಶವನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್, ಬೈಕ್ ಗೆಲ್ಲಲು ಏನು ಮಾಡಬೇಕು ಎಂಬುದನ್ನು ಕೂಡ ತಿಳಿಸಿದೆ.

    ‘ಗಿವ್ ಅವೇ ಕ್ಯಾಂಪೇನ್’ಅನ್ನು ಹೊಂಬಾಳೆ ಫಿಲ್ಮ್ಸ್ ಪ್ರಾರಂಭಿಸಿದ್ದು, ಒಬ್ಬ ಅದೃಷ್ಟಶಾಲಿಗೆ ಈ ಬೈಕ್ ಸಿಗಲಿದೆ. ಇದೇ ಏಪ್ರಿಲ್ 21ರಂದು ಸಲಾರ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾವನ್ನು ನೋಡಿದ ವೀಕ್ಷಕರು ಚಿತ್ರದಲ್ಲಿ ಎಷ್ಟು ಬಾರಿ ಬೈಕ್ ಬಂದು ಹೋಗುತ್ತದೆ ಎಂಬುದನ್ನು ತಿಳಿಸಬೇಕು. ಹೀಗೆ ಸರಿಯಾಗಿ ಉತ್ತರ ನೀಡಿದವರು ಬೈಕ್ ಗೆಲ್ಲಲು ಅರ್ಹರಾಗಿರುತ್ತಾರೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.

    ಜಪಾನ್ ನೌಕಾಪಡೆಯ 2 ಹೆಲಿಕಾಪ್ಟರ್‌ ಪತನ: ಓರ್ವ ಸಾವು- ಏಳು ಮಂದಿ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts