More

  ಆದಿತ್ಯ ಎಲ್​-1: ಇಸ್ರೋದಿಂದ ಸೂರ್ಯಯಾನದ ದಿನಾಂಕ ನಿಗದಿ; ಇಲ್ಲಿದೆ ವಿವರ..

  ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3ರ ಯಶಸ್ಸಿನ ಬೆನ್ನಿಗೇ ಸೂರ್ಯಯಾನ ಆದಿತ್ಯ ಎಲ್​-1ಗೂ ಸಜ್ಜಾಗಿರುವ ವಿಷಯ ಇನ್ನೊಮ್ಮೆ ಮುನ್ನೆಲೆಗೆ ಬಂದಿತ್ತು. ಇದೀಗ ಸೂರ್ಯಯಾನದ ದಿನಾಂಕ ಕೂಡ ನಿಗದಿಯಾಗಿದೆ.

  ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೂರ್ಯನ ಅಧ್ಯಯನಕ್ಕೆ ಹಮ್ಮಿಕೊಳ್ಳಲಾಗಿರುವ ಆದಿತ್ಯ ಎಲ್​-1, ಪಿಎಸ್​ಎಲ್​ವಿ-ಸಿ57 ಉಡಾವಣೆ ಕುರಿತ ದಿನಾಂಕವನ್ನು ಇಸ್ರೋ ನಿಗದಿ ಮಾಡಿ ಪ್ರಕಟಿಸಿದೆ. ಇದೇ ಸೆ. 2ರಂದು ಸೂರ್ಯಯಾನದ ಆದಿತ್ಯ ಎಲ್​-1 ಉಡಾವಣೆ ಆಗಲಿರುವುದಾಗಿ ಇಸ್ರೋ ತಿಳಿಸಿದೆ.

  ಇದನ್ನೂ ಓದಿ: ಒಂದೇ ಒಂದು ಲೈವ್​; ಚಂದ್ರನಲ್ಲಿಗೆ ಜಿಗಿಯಿತು ‘ಇಸ್ರೋ’ ಸಬ್​ಸ್ಕ್ರೈಬರ್ಸ್​ ಸಂಖ್ಯೆ

  ಚಂದ್ರಯಾನ-3ರಂತೆ ಆದಿತ್ಯ ಎಲ್​-1 ಬಾಹ್ಯಾಕಾಶ ನೌಕೆ ಕೂಡ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಇದೇ ಸೆ. 2ರ ಬೆಳಗ್ಗೆ 11.50ಕ್ಕೆ ಉಡಾವಣೆ ಆಗಲಿದೆ. ಆಸಕ್ತರು ಶ್ರೀಹರಿಕೋಟಾದ ಲಾಂಚ್​ ಗ್ಯಾಲರಿಯಲ್ಲಿ ಕುಳಿತು ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂದೂ ಇಸ್ರೋ ಆ ಕುರಿತ ಮಾಹಿತಿ ನೀಡಿದೆ.

  ಚಂದ್ರಯಾನ-3 ಲ್ಯಾಂಡರ್ ವಿನ್ಯಾಸ ನಂದೇ, ನಾನು ಇಸ್ರೋ ವಿಜ್ಞಾನಿ ಎಂದ; ಆಮೇಲೆ ಗೊತ್ತಾಯ್ತು, ಈತ ಬಿಕಾಂ ಪದವೀಧರ!

  ಈಗ ‘ಎಕ್ಸ್’​ನಲ್ಲೇ ಕೆಲಸವೂ ಸಿಗಲಿದೆ: ಲಿಂಕ್ಡ್​ಇನ್​ಗೆ ಪೈಪೋಟಿ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts