More

  ಚಂದ್ರಯಾನ-3 ಲ್ಯಾಂಡರ್ ವಿನ್ಯಾಸ ನಂದೇ, ನಾನು ಇಸ್ರೋ ವಿಜ್ಞಾನಿ ಎಂದ; ಆಮೇಲೆ ಗೊತ್ತಾಯ್ತು, ಈತ ಬಿಕಾಂ ಪದವೀಧರ!

  ಸೂರತ್: ‘ನಾನು ಇಸ್ರೋ ವಿಜ್ಞಾನಿ, ಚಂದ್ರಯಾನ-3 ಲ್ಯಾಂಡರ್ ವಿನ್ಯಾಸ ಮಾಡಿದ್ದೇ ನಾನು’ ಎಂದು ಹೇಳಿಕೊಂಡಿದ್ದಲ್ಲದೆ, ಮಾಧ್ಯಮಗಳಿಗೂ ಪ್ರತಿಕ್ರಿಯಿಸಿ ಆ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  ಗುಜರಾತ್​ನ ಮಿಥುಲ್ ತ್ರಿವೇದಿ ಎಂಬಾತ ಹೀಗೆ ಘೋಷಣೆ ಮಾಡಿಕೊಂಡಿದ್ದು, ಈತನನ್ನು ಸೂರತ್ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ‘ಈತ ನಾನು ಇಸ್ರೋ ವಿಜ್ಞಾನಿ, ಲ್ಯಾಂಡರ್ ಡಿಸೈನ್ ಮಾಡಿದ್ದು ನಾನೇ’ ಎಂದೆಲ್ಲ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ.

  ಇದನ್ನೂ ಓದಿ: ಮೋದಿ-ಬೆಂಬಲಿಗರ ಕಾಲೆಳೆಯುತ್ತಲೇ ಇದ್ದಾರೆ ನಟ ಪ್ರಕಾಶ್ ರಾಜ್; ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ವಿಚಾರದಲ್ಲೂ ತಕರಾರು!

  ಎರಡೆರಡು ಪಿಎಚ್​​ಡಿ ಪದವಿ ಇದೆ ಎಂದೂ ಘೋಷಣೆ ಮಾಡಿಕೊಂಡಿದ್ದ ಈತ, ನಾನು ಚಂದ್ರಯಾನ-2ರಲ್ಲಿ ಕೆಲಸ ಮಾಡಿದ್ದೆ. ಅದೇ ಕಾರಣಕ್ಕೆ ಚಂದ್ರಯಾನ-3ರಲ್ಲಿ ಕೆಲಸ ಮಾಡುವ ಕರೆ ಬಂದಿತ್ತು. ನಾನು ಲ್ಯಾಂಡರ್​​ನ ಮೂಲ ವಿನ್ಯಾಸದಲ್ಲಿ ಕೆಲವು ಬದಲಾವಣೆ ಮಾಡಿದ್ದರಿಂದ ಅದು ಯಶಸ್ವಿಯಾಗಿ ಲ್ಯಾಂಡ್ ಆಗಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದ.

  ಇದನ್ನೂ ಓದಿ: 40% ಕಮಿಷನ್ ಆರೋಪ ಪ್ರಕರಣ: ತನಿಖೆಗೆ ವಿಚಾರಣಾ ಆಯೋಗ ರಚಿಸಿದ ಸರ್ಕಾರ

  ಬಳಿಕ ಇದರ ವಿರುದ್ಧ ಕೆಲವರು ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಈತನನ್ನು ಠಾಣೆಗೆ ಕರೆಸಿ ವಿವರಣೆ ಕೇಳಿದ್ದಾರೆ. ಇಸ್ರೋ ಮಾತ್ರವಲ್ಲ, ನಾನು ನಾಸಾಗೂ ಕೆಲಸ ಮಾಡಿದ್ದೆ ಎಂದೂ ಹೇಳಿದ್ದ. ಆಗ ಇಸ್ರೋ ವಿಜ್ಞಾನಿ ಎಂಬುದಕ್ಕೆ ದಾಖಲೆ ತೋರಿಸುವಂತೆ ಪೊಲೀಸರು ಕೇಳಿದಾಗ ಈತ ಅದನ್ನು ತೋರಿಸಲು ವಿಫಲನಾಗಿದ್ದ. ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತ ಬಿಕಾಂ ಪದವೀಧರ ಎಂಬುದು ಗೊತ್ತಾಗಿದೆ. ಈತ ಇಸ್ರೋ ವಿಜ್ಞಾನಿ ಅಲ್ಲ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗುವುದು, ತಪ್ಪು ಸಾಬೀತಾದಲ್ಲಿ ಎಫ್​ಐಆರ್​ ಮಾಡಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  ಮತ್ತೆ ಸುದ್ದಿಯಲ್ಲಿ ಇಸ್ರೋದವರ ಸಂಬಳ; ಈ ಸಲ ಬೇರೆಯದೇ ರೀತಿಯಲ್ಲಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts